ಮಗ MLA ಆದ್ರು ತಮ್ಮ ಹಳೆಯ ಕೆಲಸ ಬಿಡದ ತಂದೆ ತಾಯಿ, ನಿಜಕ್ಕೂ ಏನ್ ಮಾಡ್ತಿದಾರೆ ಗೊತ್ತೆ

0 20

ಸಾಮಾನ್ಯವಾಗಿ ಒಳ್ಳೆಯ ಕೆಲಸ ಸಿಕ್ಕರೆ ಇಲ್ಲಿವರೆಗೆ ಯಾವ ಕೆಲಸ ಮಾಡುತ್ತೇವೆಯೊ ಅದನ್ನು ಮರೆತುಬಿಡುತ್ತೇವೆ. ಇನ್ನು ಕೆಲವರಿಗೆ ಹಣದಿಂದ ಅಹಂಕಾರ ಬರುತ್ತದೆ. ಆದರೆ ಮಗನು ಚುನಾವಣೆಯಲ್ಲಿ ಗೆದ್ದು ಉನ್ನತ ಸ್ಥಾನಕ್ಕೆ ಹೋದರೂ ತಂದೆ ತಾಯಿ ಅಹಂಕಾರವಿಲ್ಲದೆ ತಮ್ಮ ಮೊದಲಿನ ಕೆಲಸವನ್ನೆ ಮಾಡುತ್ತಾರೆ. ಅವರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

2022ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಪಂಜಾಬ್ ಮುಖ್ಯಮಂತ್ರಿಯ ವಿರುದ್ಧ ಗೆಲವು ಸಾಧಿಸಿದ್ದಾರೆ. ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಾರೆ, ಈ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಂಜಾಬ್‍ನಲ್ಲಿ ತನ್ನ ಮಗ ಗೆದ್ದ ನಂತರವೂ ಬಲ್ದೇವ್ ಕೌರ್ ಅವರು ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ.

ಉಗೋಕೆ ಅವರ ತಂದೆ ದರ್ಶನ್ ಸಿಂಗ್ ಚಾಲಕರಾಗಿದ್ದಾರೆ. ಅವರು ಸಹ ನಮ್ಮ ಕುಟುಂಬವು ಹಿಂದಿನ ರೀತಿಯಲ್ಲಿಯೆ ಮುಂದುವರಿಯುತ್ತದೆ, ಮಗ ಶಾಸಕನಾದ ನಂತರ ಹೆಚ್ಚೇನೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ ಅವರ ಮಾತು ಜನರ ಮೆಚ್ಚುಗೆಗೆ ಕಾರಣವಾಗಿದೆ. ಬಲ್ದೇವ್ ಕೌರ್ ಮಾತನಾಡಿ ನಾವು ಬಹಳ ಹಿಂದಿನಿಂದಲೂ ಹಣ ಸಂಪಾದಿಸಲು ಕಷ್ಟಪಟ್ಟು ಶ್ರಮಿಸಿದ್ದೇವೆ, ನನ್ನ ಮಗ ಈಗ ಶಾಸಕನಾಗಿದ್ದಾನೆ. ಆತ ಗೌರವಾನ್ವಿತ ಸ್ಥಾನ ಪಡೆದರೂ ನನ್ನ ಹಳೆಯ ಕಾಯಕವನ್ನು ನಾನು ಮುಂದುವರೆಸುತ್ತೇನೆ.

ನಾನು ಶಾಲೆಯಲ್ಲಿ ಈ ಮುನ್ನ ನಿರ್ವಹಿಸುತ್ತಿದ್ದ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ ಅವರ ತಾಯಿ. ತಮ್ಮ ಮಗನ ಗೆಲುವು ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದು ಅವರು ಖುಷಿಗೊಂಡಿದ್ದಾರೆ ಅಲ್ಲದೆ ಅವರಿಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ ತಮ್ಮ ಮಗ ಗೆಲ್ಲುತ್ತಾನೆ ಎಂದು ಭಾರಿ ವಿಶ್ವಾಸ ಇತ್ತು ಅದರಂತೆ ಅವರ ಮಗ ಗೆಲ್ಲುತ್ತಾನೆ.

ಲಭ್ ಸಿಂಗ್ ಉಗೋಕೆ ಆಮ್ ಆದ್ಮಿ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಎಎಪಿ ಅಭ್ಯರ್ಥಿಯಾಗಿ ಪಕ್ಷದ ಚಿಹ್ನೆ ಪೊರಕೆಯಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಪಂಜಾಬ್‍ನ ಭದೌರ್ ವಿಧಾನಸಭಾ ಕ್ಷೇತ್ರದಲ್ಲಿ 37,550 ಮತಗಳ ಅಂತರದಿಂದ ಲಭ್ ಸಿಂಗ್ ಉಗೋಕೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ್ದಾರೆ. ಲಭ್ ಸಿಂಗ್ ಉಗೋಕೆ ಅವರ ಪಾಲಕರು ತಮ್ಮ ಮಗ ಶಾಸಕನಾದರೂ ತಮ್ಮ ಮೊದಲಿನ ಕೆಲಸವನ್ನೆ ಮುಂದುವರೆಸುವುದಾಗಿ ಹೇಳಿರುವುದು ಜನರಿಗೆ ಇಷ್ಟವಾಗಿದೆ. ಉಗೋಕೆ ಅವರು ಹೆಚ್ಚು ಜನಪರ ಕೆಲಸ ಮಾಡಲಿ ಹಾಗೂ ಅವರ ತಂದೆ ತಾಯಿಯರಿಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.