ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಈ ವಾರ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ . ಫೆಬ್ರವರಿ ತಿಂಗಳಲ್ಲಿ ಏರಿಕೆಯಲ್ಲಿದ್ದ ಬಂಗಾರದ ಬೆಲೆ ಇಂದು ದಿಢೀರನೇ ಭಾರೀ ಇಳಿಕೆಯಾಗಿದೆ ಒಂದು ವಾರದಿಂದ ಸತತವಾಗಿ ಬಂಗಾರ ಬೆಳ್ಳಿ ದರ ಏರುತ್ತಲೇ ಇತ್ತು ಆದರೆ ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ ಬೆಂಗಳೂರಿನಲ್ಲಿ ಸಹ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,810 ರೂ. ಇತ್ತು ಇಂದು 510 ರೂಕಡಿಮೆಯಾಗಿ 46,300 ರೂ ಆಗಿದೆ ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,060 ರೂಇತ್ತುಇಂದು 510 ರೂ ಇಳಿಕೆಯಾಗಿ 50,510 ರೂ ಆಗಿದೆ.

ಭಾರತ ಆಭರಣ ಪ್ರಿಯರಿಗೆ ಹೆಸರುವಾಸಿಯಾಗಿದೆ ದೇಶದಲ್ಲಿ ಚಿನ್ನ ಖರೀದಿ ವಹಿವಾಟು ಹೆಚ್ಚು ನಡೆಯುತ್ತಲೇ ಇರುತ್ತದೆ ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ ಹಾಗೆ ಚಿನ್ನ ಸ್ವಲ್ಪ ಕಡಿಮೆ ಬೆಲೆಯಲ್ಲಿದ್ದಾಗ ಖರೀದಿಸಿ ನಂತರ ಬೆಲೆ ಹೆಚ್ಚಾದಾಗ ಮಾರುವವರು ಅಂದರೆ ಚಿನ್ನದ ಮೇಲೆ ಹೂಡಿಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನಲಾಗಿದೆ.

ಚಿನ್ನವನ್ನು ಬಾಂಡ್ ರೂಪದಲ್ಲೂ ಖರೀದಿಸಲಾಗುತ್ತಿದೆ. ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 50 ಸಾವಿರದಿಂದ 51 ಸಾವಿರದ ಆಸುಪಾಸಿನಲ್ಲೇ ಇದೆ. ಈ ಮಧ್ಯೆ ದೇಶದ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈನಲ್ಲಿ 51,220 ರೂ. ಇದ್ದರೆ, ಮುಂಬೈ, ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ 50,510 ರೂ ಆಗಿದೆ . ಇದೇ ರೀತಿ ಚಂಡೀಗಢ, ಸೂರತ್, ನಾಶಿಕ್‌ನಲ್ಲೂ 24 ಕ್ಯಾರೆಟ್ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲೇ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 51,060 ರೂ. ಇತ್ತು ಇಂದು 510 ರೂ. ಇಳಿಕೆಯಾಗಿ 50,510 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,810 ರೂ. ಇತ್ತು. ಇಂದು 510 ರೂ. ಕಡಿಮೆಯಾಗಿ 46,300 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು , ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಹಲವು ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ . ಜಾಗತಿಕ ಮಾರುಕಟ್ಟೆಗಳನ್ನು ಗಮನಿಸಿದರೆ , ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 11 ತಿಂಗಳಲ್ಲಿ ಹೆಚ್ಚಾಗಿದ್ದ ಚಿನ್ನದ ಆಮದು ಗಮನಾರ್ಹವಾಗಿ , ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳುಗಳಲ್ಲಿ ಅಂದರೆ ಏಪ್ರಿಲ್ – ಫೆಬ್ರವರಿಯಲ್ಲಿ ಭಾರತದಲ್ಲಿ ಚಿನ್ನದ ಆಮದು ಶೇಕಡಾ 73 ರಷ್ಟು ಏರಿಕೆಯಾಗಿ 45.1 ಅರಬ್ ಡಾಲರ್ ತಲುಪಿದೆ . ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನದ ಆಮದು ಹೆಚ್ಚಾಗಿದೆ . ಇದರೊಂದಿಗೆ , ಹಿಂದಿನ ಹಣಕಾಸು ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು $ 26.11 ಬಿಲಿಯನ್ ಆಗಿತ್ತು . 3 ರಷ್ಟು ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ , ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಇಳಿಕೆ ಕಂಡು ಉಳಿದೆಡೆ ಏಕರೂಪವಿದೆ . ಅಂತಾರಾಷ್ಟ್ರೀಯ ಟ್ರೆಂಡ್ , ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ .

Leave a Reply

Your email address will not be published. Required fields are marked *