Ultimate magazine theme for WordPress.

Aadhar update: ಮಕ್ಕಳ ಆಧಾರ್ ಕಾರ್ಡ್ ಮಾಡಿಸೋದು ಹೇಗೆ? ಯಾವೆಲ್ಲ ದಾಖಲಾತಿ ಬೇಕು

0 15

Aadhar update: ಪ್ರತಿಯೊಬ್ಬ ನಾಗರಿಕನಿಗೂ ಕೂಡ ಆಧಾರ್ ಕಾರ್ಡ್ ನಿಡುವ ಜವಾಬ್ದಾರಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಕರ್ತವ್ಯವಾಗಿರುತ್ತದೆ. ನಾವು ಯಾವುದೇ ಒಂದು ಕಾರ್ಯಕ್ಕೆ ಹೋದಾಗ ಅಲ್ಲಿ ನಮಗೆ ಐಡಿ ಪ್ರೂಫ್ ಆಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಕೇಳುತ್ತಾರೆ. ದೇಶದ ಪ್ರತಿಯೊಬ್ಬ ನಾಗರಿಕನ ಬಳಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕಾದದ್ದು.

ಯಾವುದೇ ಒಂದು ಸರ್ಕಾರಿ ಕೆಲಸ ಅಥವಾ ಖಾಸಗಿ ಕೆಲಸವಾಗಿದ್ದರು ಕೂಡ ಆಧಾರ್ ಕಾರ್ಡ್ ಅವಶ್ಯಕತೆ ಇದ್ದೇ ಇರುತ್ತದೆ. ಚಿಕ್ಕಮಗುವಿಗೂ ಕೂಡ ಶಾಲೆ ಸೇರಿಸಲು ಆಧಾರ್ ಕಾರ್ಡ್ ಕೇಳುತ್ತಾರೆ. ಸರ್ಕಾರದ ಯಾವುದೇ ಒಂದು ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡನ್ನು ಹೊಂದಿರಬೇಕಾಗುತ್ತದೆ. ಐದು ವರ್ಷ ಹಾಗೂ ಐದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಅದರ ವಿಧಾನವನ್ನು ನಾವು ಇಲ್ಲಿ ತಿಳಿಸಿ ಕೊಡುತ್ತೇವೆ.

ಬೇಕಾಗುವ ದಾಖಲಾತಿಗಳು :ಮಗುವಿನ ಜನನ ಪ್ರಮಾಣ ಪತ್ರ
ತಂದೆ ತಾಯಿಯ ಆಧಾರ್ ಕಾರ್ಡ್
ಫೋಟೋ

ಐದು ವರ್ಷಕ್ಕಿಂತ ಮೇಲ್ಪಟ್ಟ ಮಗುವಿನ ಆಧಾರ್ ಕಾರ್ಡ್ ಮಾಡುವ ವಿಧಾನ :
ಮಗುವಿನ ಜನನ ಪ್ರಮಾಣ ಪತ್ರ ಅದು ಇಲ್ಲದ ಪಕ್ಷದಲ್ಲಿ ಮಗು ವ್ಯಾಸಂಗ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರು ಮಗುವಿನ ಹೆಸರು ಜನ್ಮ ದಿನಾಂಕ ತಂದೆಯ ಹೆಸರು ಇತ್ಯಾದಿ ವಿವರಗಳನ್ನು ಒಂದು ಪತ್ರದಲ್ಲಿ ಬರೆದು ಸಹಿ ಮತ್ತು ಸೀಲ್ ಮಾಡಿ ಕೊಡಬೇಕು.

ಈ ಅಗತ್ಯ ದಾಖಲೆಗಳ ಜೊತೆ ಆಧಾರ್ ಕೇಂದ್ರಕ್ಕೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ನಂತರ ಅರ್ಜಿ ಸ್ವೀಕರಿಸಿದ ಸಿಬ್ಬಂದಿಗಳು ನಿಮ್ಮ ಮಗುವಿನ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಾರೆ. ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತುಂಬಿ, ಅರ್ಜಿ ಸಲ್ಲಿಸುವಿಕೆ ಪೂರ್ತಿಗೊಂಡ ನಂತರ ಕನಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿ ಸ್ವಲ್ಪ ದಿನವಾದ ನಂತರ ಅಂಚೆಯ ಮೂಲಕ ನಿಮ್ಮ ಮಗುವಿನ ಆಧಾರ್ ಕಾರ್ಡ್ ಬರುತ್ತದೆ.

Leave A Reply

Your email address will not be published.