Home construction in Bangalore: ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಒಂದು ಮನೆ ಕಟ್ಟಿಕೊಳ್ಳುಬೇಕು ಎಂದು. ಆದರೆ ಎಲ್ಲರೂ ಕೂಡ ತಮ್ಮಿಷ್ಟದ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ. ಕೆಲವರು ಹಣ ಕೂಡಿಟ್ಟು ಮನೆ ಕಟ್ಟಿಸಿದರೆ, ಇನ್ನು ಕೆಲವರು ಲೋನ್ ಪಡೆದು ಮನೆ ಕಟ್ಟಿಸುತ್ತಾರೆ. ಆದರೆ ನಿಮ್ಮ ಬಳಿ ಇರುವ ಉಳಿತಾಯದ ಹಣ ಕಡಿಮೆ ಇದ್ದು, ಲೋನ್ ಕೂಡ ಸಿಗುತ್ತಿಲ್ಲ, ನಿಮ್ಮ ಬಜೆಟ್ ಕೂಡ ಕಡಿಮೆ ಇದೆ ಎಂದರೆ ಕೇವಲ 10 ಲಕ್ಷ ರೂಪಾಯಿಗೆ 2BHK ಮನೆ ಕಟ್ಟಿಸುವುದು ಹೇಗೆ ಎಂದು ನಿಮಗೆ ತಿಳಿಸಿಕೊಡುತ್ತೇವೆ.
30*25 ವಿಸ್ತೀರ್ಣ, ಏಳುವರೆ ಚದರ ಜಾಗದಲ್ಲಿ ಒಂದು ಸಣ್ಣ ಕುಟುಂಬ 2BHK ಮನೆಯನ್ನು 10 ಲಕ್ಷದಲ್ಲಿ ಕಟ್ಟಿಕೊಳ್ಳುವುದು ಹೇಗೆ ಎಂದು ತಿಳಿಯೋಣ. ಈ ರೀತಿಯಲ್ಲಿ ಕಟ್ಟಿಸಿ, ಸ್ವಲ್ಪ ಅನುಸರಿಸಿಕೊಂಡು ಹೋದರೆ 10 ಲಕ್ಷದಲ್ಲಿ ಒಳ್ಳೆಯ ಮನೆ ಕಟ್ಟಿಕೊಳ್ಳಬಹುದು. ಈ ಬಜೆಟ್ ನಲ್ಲಿ ಕಟ್ಟುವ ಮನೆಗೆ ಒಳ್ಳೆಯ ಕ್ವಾಲಿಟಿ ಇರುತ್ತದೆ, ಅದರಲ್ಲಿ ಏನು ಸಮಸ್ಯೆ ಇಲ್ಲ. ಫೌಂಡೇಶನ್ ಹಾಕಿ ಗ್ರೌಂಡ್ ಫ್ಲೋರ್ ಮನೆ ಕಟ್ಟಬಹುದು, ಆದರೆ 2 ಫ್ಲೋರ್ ಮನೆ ಕಟ್ಟಬೇಕು ಎಂದುಕೊಂಡರೆ ಕಾಲಮ್ ಸ್ಟ್ರಕ್ಚರ್ ಮಾಡಿಸಬೇಕಾಗುತ್ತದೆ.
ಈ ರೀತಿ ಮಾಡುವುದಾದರೆ, 10 ಲಕ್ಷಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆ. ಮುಂದೆ ಮನೆ ಕಟ್ಟುವ ಕೆಲಸ ಮುಂದುವರೆಸುವ ಯೋಜನೆ ಇಲ್ಲ ಎಂದರೆ, ಫೌಂಡೇಶನ್ ಹಾಕಿ ಮನೆ ನಿರ್ಮಿಸಬಹುದು. ಒಂದು ವೇಳೆ ನೀವು ಮನೆಯ ಸುತ್ತ 4 ಇಂಚ್ ಕಾಂಪೌಂಡ್ ಹಾಕಬೇಕು ಎಂದುಕೊಂಡರೆ, 10 ಲಕ್ಷದ ಮೇಲೆ 50 ಸಾವಿರ ಹೆಚ್ಚಿಗೆ ಖರ್ಚಾಗುತ್ತದೆ. ಸಂಪ್ ನಿರ್ಮಾಣಕ್ಕೆ 50 ಸಾವಿರ ಜಾಸ್ತಿ ಖರ್ಚಾಗುತ್ತದೆ. ಈ ಥರದ ಮನೆ ನಿರ್ಮಾಣ ಮಾಡಲು ನಿಮ್ಮ ಮನೆಯನ್ನಜ್ 4 ಭಾಗವಾಗಿ ಡಿವೈಡ್ ಮಾಡಲಾಗುತ್ತದೆ. 1 ಕಿಚನ್, ಒಂದು ಹಾಲ್ ಮತ್ತು ಎರಡು ರೂಮ್ ಗಳು.
Home construction in Bangalore
ಒಂದು ರೂಮ್ ಚಿಕ್ಕದಾಗಿ ಮಾಡಿ, ಇನ್ನೊಂದು ರೂಮ್ ದೊಡ್ಡದಾಗಿ ಮಾಡಿ, ದೊಡ್ಡ ರೂಮ್ ನಲ್ಲಿ ಅಟ್ಯಾಚ್ಡ್ ಬಾತ್ ರೂಮ್ ಮಾಡುತ್ತಾರೆ. ಇಲ್ಲಿ ಪೂಜೆಯ ರೂಮ್ ಇರುವುದಿಲ್ಲ, ಆರ್ಟಿಫಿಶಿಯಲ್ ಪೂಜೆ ರೂಮ್ ಮಾಡಿಕೊಳ್ಳಬೇಕಾಗುತ್ತದೆ. ಇದು 5 ರಿಂದ 6 ಸಾವಿರಕ್ಕೆ ಪೂಜೆ ರೂಮ್ ಸೆಟ್ ಸಿಗುತ್ತದೆ..ಫೌಂಡೇಶನ್ ಹಾಕಿಸಲು 1.5 ಲಕ್ಷದವರೆಗು ಖರ್ಚಾಗುತ್ತದೆ, ಲೇಬರ್ ಚಾರ್ಜಸ್ 2.4ಲಕ್ಷದ ವರೆಗು ಬೇಕಾಗುತ್ತದೆ. ಲಿವಿಂಗ್ ರೂಮ್ ಹಾಗೂ ಸ್ಲ್ಯಾಬ್ ಗೆ 1.5 ಲಕ್ಷ ಬೇಕಾಗುತ್ತದೆ.
ಮನೆಯ ಪ್ಲಾಸ್ಟರಿಂಗ್, ವಿಂಡೋ, ಡೋರ್, ಗ್ರಿಲ್ ಪೇಂಟಿಂಗ್, ಎಲೆಕ್ಟ್ರಿಕ್ಸ್ ಕೆಲಸ ಇದೆಲ್ಲವನ್ನು ಮ್ಯಾನೇಜ್ ಮಾಡಬೇಕಾಗುತ್ತದೆ. ಇದರ ಜೊತೆಗೆ ಟೈಲ್ಸ್ ಖರೀದಿ ಮಾಡುವಾಗ, 2×2 ಸೈಜ್ ನ ಟೈಲ್ಸ್ 40 ರೂಪಾಯಿಗೆ ಖರೀದಿ ಮಾಡಿ, ಅದಕ್ಕಿಂತ ಜಾಸ್ತಿಗೆ ಖರೀದಿ ಮಾಡಬೇಡಿ.. ಚೀಪ್ ಅಂಡ್ ಬೆಸ್ಟ್ ಕ್ವಾಲಿಟಿ ಖರೀದಿಸಿ. 16mm ರಾಡ್ಸ್ ಗಿಂತ 10.28mm ರಾಡ್ಸ್ ಖರೀದಿ ಮಾಡಿ. ಸಿಮೆಂಟ್ ವಿಷಯಕ್ಕೆ ಬಂದರೆ 43ಗ್ರೇಡ್ ಜುವಾರಿ ಅಥವಾ ಪ್ರಿಯ ಸಿಮೆಂಟ್ ಖರೀದಿಸಿ.
ಮನೆಯ ಹೊರಗಿರುವ ಗೋಡೆಗಳಿಗೆ 6 ಇಂಚ್ ಬ್ರಿಕ್ಸ್, ಮನೆಯ ಒಳಗಿರುವ ಗೋಡೆಗಳಿಗೆ 4 ಇಂಚ್ ಬ್ರಿಕ್ಸ್ ಬಳಸಿ. ಕಟ್ ಲಿಂಟರ್, ಸಾಲ್ಕ್ ವುಂಟರ್ ಫ್ರೇಮ್ ಮತ್ತು ಪ್ರೈಮರಿ ಕೋಟೆಡ್ ಡೋರ್ ಪರ್ಚೆಸ್ ಮಾಡಿ. ಇನ್ನು ಬಾತ್ ರೂಮ್ ಗೆ PVC ಡೋರ್ ಮತ್ತು ಅಲ್ಯೂಮಿನಿಯಂ ಕಿಟಕಿ ಹಾಕಿಸಿ. ಜೊತೆಗೆ ಪ್ಯಾರಗನ್ ಅಥವಾ ಮಾರ್ವಲ್ ಈ ಫಿಟಿಂಗ್ ಗಳನ್ನು ಬಳಸಿ. 4 ಅಥವಾ 5 ಪ್ಲಗ್ ಪಾಯಿಂಟ್ ಮಾತ್ರ ಇರಲಿ. 500 ಲೀಟರ್ ಡಬಲ್ ಲೇಯರ್ ಟ್ಯಾಂಕ್ ಹಾಕಿಸಿ, ಈ ರೀತಿ ಮನೆ ಕಟ್ಟಿಸಿದರೆ ಹೆಚ್ಚು ಹಣ ಹೂಡಿಕೆ ಮಾಡಬಹುದು.