Kambali Baba Gujarat: ಕಂಬಳಿ ಬಾಬಾ ಎಂಬ ಹೆಸರೇ ಕೇಳಲು ವಿಚಿತ್ರವಾಗಿದೆ ಇವರು ಅವರಿಗೆ ಯಾವ ರೋಗವಿದ್ದರೂ ಸಹ ನಿವಾರಣೆಯಾಗಿಬಿಡುತ್ತದೆ ಎಂಬ ನಂಬಿಕೆ ಇದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ಪ್ರಸಿದ್ಧವಾಗಿರುವ ಇವರು ಸ್ತ್ರೀಯರಲ್ಲಿ ಯಾವುದೇ ರೋಗವಿದ್ದರೂ ಅದನ್ನು ಅವರ ಸೊಂಟ ಹಿಡಿದುಕೊಂಡೆ ಗುಣಪಡಿಸುತ್ತಾರೆ.
ಇವರ ಪೂರ್ಣ ಹೆಸರು ಗಣೇಶ ಭಾಯಿ ಗುಜ್ಜಾರ್ ಯಾವುದೇ ರೋಗ ಆದರೂ ಇವರು ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗದೆ ತಮ್ಮದೇ ಆದ ರೀತಿಯಲ್ಲಿ ಗುಣಪಡಿಸುವ ಕೌಶಲ್ಯವನ್ನು ಹೊಂದಿದ್ದಾರಂತೆ ಇದರಿಂದ ಪ್ರತಿದಿನವೂ ಕಂಬಳಿ ಬಾಬಾ ಅವರ ಬಳಿ ನೂರಾರು ಜನ ಆರೋಗ್ಯ ಸಮಸ್ಯೆಯ ಪರಿಹಾರಕ್ಕಾಗಿ ಧಾವಿಸುತ್ತಾರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಇತ್ತೀಚಿಗೆ ಎಲ್ಲೆಡೆ ಪ್ರಚಾರಗೊಳ್ಳುತ್ತಿದೆ.
ಇವರಿಗೆ ಕಂಬಳಿ ಬಾಬಾ ಎಂದು ಹೆಸರು ಬರಲು ಕಾರಣವೇನೆಂದರೆ, ಇವರು ಚಿಕಿತ್ಸೆ ನೀಡುವಾಗ ಕಂಬಳಿಯನ್ನು ಬಳಸಿಕೊಳ್ಳುತ್ತಾರಂತೆ ಈ ಕಂಬಳಿ ಬಾಬಾ ಈಗಾಗಲೇ ಬೇರೆ ಬೇರೆ ಪ್ರದೇಶಗಳಲ್ಲಿ 15 ಶಿಬಿರಗಳನ್ನು ಸಹ ನಡೆಸಿದ್ದಾರಂತೆ ಈ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತಹ ಅನೇಕರು ಇದ್ದಾರೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಹೀಗೆ ಇನ್ನಿತರ ರಾಜ್ಯಗಳಿಂದ ಬಾಬಾ ಅವರನ್ನು ಭೇಟಿಯಾಗಲು ಜನ ಬರುತ್ತಾರೆ.
ಕಂಬಳಿ ಬಾಬಾ ಅವರು ಚಿಕಿತ್ಸೆಗಾಗಿ ಬಳಸುವ ಕಂಬಳಿಯು ಮಾತಾಜಿ ಅವರ ಆಶೀರ್ವಾದದಿಂದ ಮಾವಿನ ಮರದಲ್ಲಿ ಸಿಕ್ಕಿದ ಕಂಬಳಿಯಾಗಿದೆ ಇದೊಂದು ಆಧ್ಯಾತ್ಮಿಕ ಕಂಬಳಿಯಾಗಿದ್ದು ಈ ಕಂಬಳಿಯ ವಿಶೇಷತೆ ಎಂದರೆ ಇದರಿಂದ ಜನರ ನಾಡಿಮಿಡಿತ ನೋಡಿ ಅವರ ಸಮಸ್ಯೆಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಕಂಬಳಿಯನ್ನು ಭುಜದ ಮೇಲೆ ಹೊದ್ದುಕೊಂಡ ಕೂಡಲೇ ಎದುರಿಗಿರುವ ವ್ಯಕ್ತಿಯ ಆರೋಗ್ಯದ ಸಮಸ್ಯೆಯನ್ನ ಸುಲಭವಾಗಿ ಕಂಡುಹಿಡಿಯಬಹುದು ಎಂದು ಕಂಬಳಿ ಬಾಬಾ ಹೇಳಿದ್ದಾರೆ.
ಇದನ್ನೂ ಓದಿ..ಈ ರಾಶಿಯವರು ಪರಸ್ತ್ರೀ ಸಹವಾಸದಿಂದ ದೂರ ಇದ್ರೆ ಒಳ್ಳೇದು ಯಾಕೆಂದರೆ..
ಇನ್ನೂ ಇವರ ಶಿಬಿರದಲ್ಲಿ ಯಾವುದೇ ಪ್ರಚಾರ ಅಥವಾ ಜಾಹೀರಾತಿಗೂ ಒಂದು ರೂಪಾಯಿ ಖರ್ಚು ಮಾಡುವುದಿಲ್ಲ ಏಕೆಂದರೆ ಇಲ್ಲಿಗೆ ಬರುವ ಜನರು ಶಿಬಿರದ ಬಹುತೇಕ ಎಲ್ಲಾ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಾರೆ ಒಟ್ಟಾರೆಯಾಗಿ ಈ ಕಂಬಳಿ ಬಾಬಾ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಪ್ರಚಾರವಾಗಿದ್ದು ನಿಜ. ಅಷ್ಟೇ ಅಲ್ಲದೆ ಈ ಕಂಬಳಿ ಬಾಬಾ ಮಾಡುವಂತ ಶಿಬಿರದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ ಈ ಬಾಬಾ ಮಾಡುತ್ತಿರುವ ಸೇವೆ ನಿಜಕ್ಕೂ ಎಷ್ಟರಮಟ್ಟಿಗೆ ನಿಜವಾಗಿದೆ, ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.