Kareena Kapoor fitness viral video: ಸ್ನೇಹಿತರೆ ಕೆಲವೊಂದು ಚಿತ್ರರಂಗದ ನಟಿಯರು ಸಂತೂರ್ ಸಾಬೂನಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅಮ್ಮಂದಿರಂತೆ ಮದುವೆಯಾಗಿ ಮಕ್ಕಳಾಗಿ ಹಲವಾರು ವರ್ಷಗಳಾಗಿದ್ದರೂ ಕೂಡ ಸುಂದರ ವತಿಯರಾಗಿರುತ್ತಾರೆ. ದಕ್ಷಿಣ ಭಾರತ ಚಿತ್ರರಂಗದ ನಟಿಯರಿಗಿಂತ ಹೆಚ್ಚಾಗಿ ಈ ರೀತಿಯ ಗುಣಲಕ್ಷಣಗಳು ನಮಗೆ ಹೆಚ್ಚಾಗಿ ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕಂಡುಬರುತ್ತದೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಕರೀನಾ ಕಪೂರ್ ಖಾನ್ ಅವರ ಬಗ್ಗೆ.

2012 ರಲ್ಲಿ ನಟಿ ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗುತ್ತಾರೆ. ಇನ್ನು ಇವರಿಗೆ ಮೂರು ಜನ ಮಕ್ಕಳಿದ್ದು ವಯಸ್ಸು ಈಗಾಗಲೇ 42 ವರ್ಷ ವಯಸ್ಸಾಗಿದೆ. ಆದರೆ ನಟಿ ಕರೀನಾ ಕಪೂರ್ ಅವರನ್ನು ನೋಡಿದರೆ ಖಂಡಿತವಾಗಿ ಅವರಿಗೆ ಅಷ್ಟೊಂದು ವಯಸ್ಸು ಆಗಿದೆ ಎಂಬುದಾಗಿ ಯಾರು ಕೂಡ ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟೊಂದು ಯಂಗ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ಅವರು ಗರ್ಭಾವಸ್ಥೆಯ ಕುರಿತಂತೆ ಒಂದು ಪುಸ್ತಕವನ್ನು ಕೂಡ ಬರೆದು ಬಿಡುಗಡೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ನಟ ಅಮೀರ್ ಖಾನ್ ಅವರ ಜೊತೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಬೇಡಿಕೆಯನ್ನು ಕಾಯ್ದಿರಿಸಿಕೊಂಡಿರುವ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ನಟಿ ಕರೀನ ಕಪೂರ್. ಇಂದಿಗೂ ಚಿತ್ರರಂಗದಲ್ಲಿ ಟಾಪ್ ನಟಿಯರಿಗೆ ಸ್ಪರ್ಧೆಯನ್ನು ಒಡ್ಡುವಂತಹ ಬೇಡಿಕೆಯನ್ನು ಕರೀನಾ ಕಪೂರ್ ಹೊಂದಿದ್ದಾರೆ. ಅದೇ ರೀತಿ ತಮ್ಮ ದೈಹಿಕ ಯೋಗಭ್ಯಾಸ ಹಾಗೂ ವರ್ಕೌಟ್ ನಿಂದ ದೈಹಿಕ ಹಾಗೂ ಮುಖದ ಸೌಂದರ್ಯವನ್ನು ಕೂಡ ಕಾಯ್ದಿರಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಕರೀನಾ ಕಪೂರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ತಾವು ಯೋಗಭ್ಯಾಸ ಮಾಡುತ್ತಿರುವಂತಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ತಮ್ಮ ಫಿಟ್ನೆಸ್ ಹಾಗೂ ಸೌಂದರ್ಯದ ರಹಸ್ಯ ಇದೇ ಎಂಬುದನ್ನು ಹಂಚಿಕೊಂಡಿದ್ದಾರೆ. ದೈಹಿಕ ಕಸರತ್ತು ಹಾಗೂ ಆಹಾರದಲ್ಲಿ ಅವರು ನಿಗಾ ವಹಿಸುವ ಜಾಗೃತೆಯೇ ಅವರನ್ನು ಇಂದಿಗೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಇರುವಂತೆ ಮಾಡಿರುವುದು ಹಾಗೂ ವಯಸ್ಸಾಗಿದ್ದರೂ ಕೂಡ ಚಿರ ಯುವತಿಯಂತೆ ಕಾಣುವಂತೆ ಮಾಡಿರುವುದು. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. Video Credit for Fever Fm

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!