D Boss Darshan Life Story: ಆಕರ್ಷಕ ನಿಲುವಿನ ಎತ್ತರ ಕಾಯದ ಆ ಹುಡುಗನ ಕಣ್ಣಲ್ಲಿ ಕನಸಿತ್ತು ಏನನ್ನಾದರೂ ಸಾಧಿಸಬೇಕೆಂಬ ಚೆಲವಿತ್ತು ಎಲ್ಲದಕ್ಕೂ ಮಿಗಿಲಾಗಿ ತನ್ನ ಶ್ರಮದ ಮೇಲೆ ನಂಬಿಕೆ ಇತ್ತು ಚಿತ್ರರಂಗದ ನಂಟ್ ಇದ್ದರೂ ಕೂಡ ನಾನಾಥರದ ಕೆಲಸವನ್ನು ಮಾಡುತ್ತಿದ್ದ ಹಾಲು ಮಾರುವುದರಿಂದ ಹಿಡಿದು ಪೇಪರ್ ಹಾಕುವುದು (Shooting) ಶೂಟಿಂಗ್ ನಲ್ಲಿ ಎಲ್ಲ ವಿಭಾಗದ ಸಣ್ಣ ಸಣ್ಣ ಕೆಲಸವನ್ನು ನಿರ್ವಹಿಸಿದ್ದ. ಒಳ್ಳೆಯ ಅಧಿಕಾರಿಯಾಗಿ ಕುಟುಂಬವನ್ನು ಸಾಕೋಣವೆಂದರೆ ಹೆಚ್ಚೇನೂ ಓದಿಲ್ಲವೆಂದು ಹಿಂಜರಿಕೆ ಇತ್ತು.

D Boss Darshan Life Story, ನಟ ದರ್ಶನ್ ಜೀವನ ಕಥೆ

ಕಡೆಗೂ ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರದ ಅವಕಾಶ ಸಿಕ್ಕಾಗ ಎಲ್ಲವನ್ನು ಒಪ್ಪಿಕೊಂಡು ಮಾಡುತ್ತಿದ್ದ ಆತ ಒಮ್ಮೆ ಹಣಕ್ಕಾಗಿ ಸ್ಟಾರ್ ನಟರು ತಿರಸ್ಕರಿಸಿದ ಏಳು ಸಿನಿಮಾದಲ್ಲಿ ತಾನೇ ನಟಿಸಲು ಸಿದ್ಧವಾಗಿದ್ದ ಅದು ಬರಿ ಒಂದು ಲಕ್ಷ ರೂಪಾಯಿಗಳಿಗೆ. ಈಗ ಒಂದು ಕೋಟಿಯವರೆಗೆ ದುಡಿಯುವ ವ್ಯಕ್ತಿ ಹೆಸರೇ ಹೇಮಂತ್ ಕುಮಾರ್ ಅಲಿಯಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್.

ದರ್ಶನ್ ಅವರು ಬೆಳೆದು ಬಂದ ಹಾಗೆಯೇ ಕಷ್ಟಕರವಾಗಿತ್ತು ಅವರಿಗೆ ತುಂಬಾ ಸವಾಲುಗಳು ಎದುರಾಗಿತ್ತು ಮತ್ತು ದರ್ಶನ್ ಈಗ ಬೆಳೆದಿರುವ ಮಟ್ಟ ಇತಿಹಾಸ. ಈಗ ಅತ್ಯಂತ ದೊಡ್ಡ ನಿರ್ಮಾಪಕನಾಗಿ ಗುರುತಿಸಿಕೊಂಡು ಜನಗಳ ಪ್ರೀತಿಯ ದಾಸನಾಗಿ 50 ಸಿನಿಮಾಗಳ ಸರದಾರನ ಪಟ್ಟ ಹೊತ್ತಿರುವ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್.

ದಿವಂಗತರಾದ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ. ದರ್ಶನ್ ಅವರು ಫೆಬ್ರವರಿ 16 1977ರ ಶಿವರಾತ್ರಿಯಂದು ಹೊನ್ನಂ ಪೇಟಿಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಜನಿಸಿದ ದರ್ಶನ್ ಅವರ ಜನ್ಮನಾಮ ಹೇಮಂತ್ ಕುಮಾರ್. ದರ್ಶನ್ ರವರಿಗೆ ದಿನಕರ್ ಎನ್ನುವ ಸಹೋದರ ಮತ್ತು ದಿವ್ಯ ಎಂಬ ಅಕ್ಕ ಇದ್ದಾರೆ. ದರ್ಶನ್ ಅವರ ಬಾಲ್ಯ ಮೈಸೂರಲ್ಲೇ ಕಳೆದರು. ಚಿತ್ರರಂಗದಲ್ಲಿ ಖ್ಯಾತ ಕಳನಾಟ ಎಂದು ಗುರುತಿಸಿಕೊಂಡಿರುವ ತೂಗುದೀಪ್ ಶ್ರೀನಿವಾಸ್. 1966 ರಲ್ಲಿ ಅವರು ನಟಿಸಿದ ತೂಗುದೀಪ ಎಂಬ ಸಿನಿಮಾದ ಹೆಸರು ಖ್ಯಾತಿಯೇ ಅವರು ಮುಂದೆ ತೂಗುದೀಪ್ ಶ್ರೀನಿವಾಸ್ ಎಂಬ ಹೆಸರು ಬರಲು ಮೂಲ ಕಾರಣವಾಯಿತು.

ಅವರು ತಮ್ಮ ಸಿನಿಮಾ ಕೆರಿಯರ್ ನ ಸಹಾಯದಿಂದ ಕುಟುಂಬವನ್ನು ಚೆನ್ನಾಗಿ ಪೋಷಿಸುತ್ತ ಇದ್ದರು. 90ರ ದಶಕದ ಆರಂಭದಲ್ಲಿ, ಅವರು ಗಂಭೀರ ಅನಾರೋಗ್ಯಕ್ಕೆ ಒಳಗಾದರೂ ಅವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು ಅವರ ಪತ್ನಿ ಮೀನಾ ರವರು ತಮ್ಮ ಕಿಡ್ನಿಯನ್ನು ಪತಿ ಶ್ರೀನಿವಾಸ್ ಅವರಿಗೆ ಕೊಟ್ಟರು ಆದರೂ ಕೂಡ ಶ್ರೀನಿವಾಸ್ ಅವರು ಹೆಚ್ಚು ಕಾಲ ಉಳಿಯಲಿಲ್ಲ 1995 ರಲ್ಲಿ ತಮ್ಮ 52ನೇ ವರ್ಷಕ್ಕೆ ಅವರು ವಿಧಿವಶರಾದರು.

ತಮ್ಮ ಪತ್ನಿ ಒಳಿತಿಗಾಗಿ ಪತ್ನಿ ಮೀನಾರವರು ಮಾಡದಿರುವ ತ್ಯಾಗವೇ ಇಲ್ಲ. ಅವರು ತಾವು ವಾಸವಿದ್ದ ಚಿಕ್ಕ ಮನೆ ಒಂದನ್ನು ಬಿಟ್ಟು ಮಿಕ್ಕ ಎಲ್ಲಾ ವಸ್ತುವನ್ನು ಗಂಡನ ಚಿಕಿತ್ಸೆಗೋಸ್ಕರ ಮಾರಿದರು. ದರ್ಶನ್ ಅವರ ಕುಟುಂಬಕ್ಕೆ ಇದು ಬಹುದೊಡ್ಡ ಆಗತ ಮನೆಯಲ್ಲಿ ದುಡಿಯುವವರು ಯಾರು ಸಹ ಇರಲಿಲ್ಲ ಕುಟುಂಬಕ್ಕೆ ಆಧಾರವಾಗಿರುವ ಶ್ರೀನಿವಾಸ್ ಅವರು ಅಕಾಲ ಮೃತ್ಯುವಿಗೆ ಇಡಾಗಿದ್ದರು.

ಕುಟುಂಬದ ಜವಾಬ್ದಾರಿ ಹಿರಿ ಮಗ ದರ್ಶನ್ ರವರ ಮೇಲೆ ಬಿತ್ತು ದರ್ಶನ್ ರವರ ತಾಯಿ ಜೀವನಾಧಾರಕ್ಕೆ ಒಂದು ಚಿಕ್ಕ ಮೆಸ್ಸ(mess) ತೆಗೆದಿದ್ದರು ದರ್ಶನ್ ಅವರು ಒಂದು ದನವನ್ನು ಖರೀದಿಸಿ ದಿನವೂ ಅದರ ಹಾಲು ಕರೆದು ಮನೆ ಮನೆಗೆ ಕೊಡುತ್ತಿದ್ದರು. ತಂದೆ ಇಲ್ಲದ ಜೀವನ ಎಷ್ಟು ಭಯಾನಕ ಎಂಬುದರ ಅರಿವು ಅವರಿಗೆ ಆಗಿತ್ತು.ಮುಂದೆ ಯಾವತ್ತಾದರೂ ಇಂತಹ ಪರಿಸ್ಥಿತಿ ಬರಬಹುದು ಎನ್ನುವ ಕಾರಣಕ್ಕೆ ತಂದೆ ಚೆನ್ನಾಗಿ ಓದು ಒಳ್ಳೆ ಸ್ಥಾನಕ್ಕೆ ಸೇರು ಎಂದು ಬುದ್ಧಿ ಮಾತುಗಳು ದರ್ಶನ್ ರವರಿಗೆ ನೆನಪಾಯಿತು.

Darshan life Story In Kannada
Darshan And wife vijayalakshmi

ದರ್ಶನ್ ಶಾಲೆಯಲ್ಲಿರುವಾಗ ಅಷ್ಟೇನು ಪ್ರತಿಭಾವಂತ ವಿದ್ಯಾರ್ಥಿ ಆಗಿರಲಿಲ್ಲ ಅವರಿಗೆ ಓದು ಯಾಕೋ ಅಷ್ಟಾಗಿ ತಲೆಗೆ ಹತ್ತಲಿಲ್ಲ ತಂದೆಯ ಒತ್ತಾಯಕ್ಕೆ ಹೈಸ್ಕೂಲಿನವರೆಗೆ ಓದಿದರು ಮುಂದೆ ದರ್ಶನ್ ರವರನ್ನು ಡಿಪ್ಲೋಮೋ ಮಾಡಿಸಬೇಕೆಂದುಕೊಂಡಿದ್ದರು ಆದರೆ ದರ್ಶನ್ ರವರಿಗೆ ಡಿಪ್ಲೋಮೋ ಕೂಡ ಕಬ್ಬಿಣದ ಕಡಲೆ ಆಗಿತ್ತು. ತಂದೆಯ ಅನಾರೋಗ್ಯದ ಸಮಯದಲ್ಲಿ ದಿನವೂ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಅವರ ದಿನಚರಿಯಾಗಿತ್ತು ದರ್ಶನ್ ರವರಿಗೆ ಒಳ್ಳೆಯ ನಟನಾಗಬೇಕು ಎನ್ನುವ ಆಸೆ ತುಂಬಾ ಇತ್ತು.

ನಂತರ (Darshan) ದರ್ಶನ್ ರವರು ನಟನೆಯ ಶಾಸ್ತ್ರೀಯ ಕಲಿಕೆಗಾಗಿ ಶಿವಮೊಗ್ಗದ ನಟನಾ ಕೇಂದ್ರಕ್ಕೆ ಸೇರಿಕೊಂಡರು ತೂಗುದೀಪ ಅವರು ತಮ್ಮ ಮಕ್ಕಳಲ್ಲಿ ಯಾರು ನಟನೆಯ ಕ್ಷೇತ್ರಕ್ಕೆ ಬರಬೇಕೆಂದು ಅಂದುಕೊಂಡಿರಲಿಲ್ಲ ಅವರಿಗೆ ಇಷ್ಟವಿರಲಿಲ್ಲ. ದರ್ಶನ್ ಅವರಿಗೆ ತರಬೇತಿ ಕೊಟ್ಟವರು ನಟ ಮಂಡ್ಯ ರಮೇಶ್ ಕಲಿತು ಮುಗಿಸಿ 1996ರಲ್ಲಿ ಬೆಂಗಳೂರಿಗೆ ಬಂದರು ಖ್ಯಾತ ಛಾಯಾಗ್ರಹಕರಾದ ಶ್ರೀ ಗೌರಿಶಂಕರ ಅವರ ಪರಿಚಯ ಸಿಕ್ಕಿತು ಇವರು ದರ್ಶನವರನ್ನು ಸಹಾಯಕ ಛಾಯಾಗ್ರಾಹಕನನ್ನಾಗಿ ನೇಮಿಸಿಕೊಂಡರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಾಡ್ಲಿಂಗ್ ಶೋ ಅಲ್ಲಿ ಕೂಡ ಭಾಗಿಯಾಗಿದ್ದರು ಅವರಿಗೆ ಕಿರುತೆರೆಯಲ್ಲಿ ಮೊಟ್ಟಮೊದಲು ಅವಕಾಶ ನೀಡಿದವರು ಎಸ್ ನಾರಾಯಣ್. ಮೊದಲು ಅಂಬಿಕಾ ಎನ್ನುವ ಧಾರಾವಾಹಿಯಲ್ಲಿ ನಟಿಸಿದರು ನಂತರ ಮಹಾಭಾರತ ಎಂಬ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಒಳ್ಳೆಯ ಸ್ಥಾನ ದೊರಕಿತ್ತು ನಂತರ ತುಂಬಾ ಸಿನಿಮಾದಲ್ಲಿ ನಟಿಸಿದರು ಆದರೂ ಕೂಡ ಚಿತ್ರರಂಗದಲ್ಲಿ ಸ್ವಲ್ಪ ಕಷ್ಟಪಟ್ಟರು ಖ್ಯಾತ ನಟರ ಮಗನಾದರು ಕೂಡ ಕೈಗೆ ಸಿಕ್ಕ ಕೆಲಸವನ್ನು ಹಿಂಜರಿಕೆಯಿಂದ ಮಾಡಲಿಲ್ಲ,

ಯಾವುದೇ ರೀತಿಯ ಕೆಲಸವನ್ನಾದರೂ ಮಾಡಲು ಸಿದ್ದರಿದ್ದರು. (Mejestic) ಮೆಜೆಸ್ಟಿಕ್ ನ ಗೆಲುವಿನ ಬಳಿಕ ಚಿತ್ರರಂಗದಲ್ಲಿ ಮನೆಮಾತಾದರು. ಅವರಿಗೆ ಸಾಲು ಸಾಲು ಅವಕಾಶಗಳು ಬರಲಾರಂಬಿಸಿದವು ಮೆಜೆಸ್ಟಿಕ್ ನ ಬಳಿಕ ಮತ್ತು ಹೊಸದಾದ ಸಿನಿಮಾಗಳನ್ನು ಕೂಡ ಮಾಡಿದರು ನಂತರ 2003ರಲ್ಲಿ ಕರಿಯ ಚಿತ್ರ ಒಳ್ಳೆ ಹೆಸರನ್ನು ತಂದು ಕೊಟ್ಟಿತು ಕರಿಯ ಚಿತ್ರದ ನಂತರ ದರ್ಶನ್ ರವರು ಒಂದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು.

2005ರಲ್ಲಿ ಕಲಾಸಿಪಾಳ್ಯ ಚಿತ್ರ ಮತ್ತೊಮ್ಮೆ ಇವರನ್ನು ಗೆಲುವಿನ ಕಡೆ ಕರೆದುಕೊಂಡು ಹೋಯಿತು ಮುಂದೆ ದಾಸ ಮಂಡ್ಯ,ಅಯ್ಯಾ ಸಿನಿಮಾಗಳನ್ನು ಮಾಡಿದರು. 2007 ರಲ್ಲಿ ಅನಾಥ ಎನ್ನುವ ಸಿನಿಮಾವನ್ನ ಉಪೇಂದ್ರ ಜೊತೆಗೆ ಮೊದಲ ಸಲ ವೇದಿಕೆಯನ್ನು ದರ್ಶನ್ ಹಂಚಿಕೊಂಡರು. ಅದೇ ವರ್ಷ ಈ ಬಂಧನದ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ಅವರ ಮಗನಾಗಿ ಚಿತ್ರದಲ್ಲಿ ಅಭಿನಯಿಸಿದರು.

ಬಿಸಿ ಪಾಟಿಲ್ ಮಗಳು ದರ್ಶನ್ ಗೆ ಪ್ರೊಡ್ಯೂಸರ್ ಯಾವ ಸಿನಿಮಾ ಗೊತ್ತಾ

ಸ್ವಚ್ಛ ಮನಸ್ಸಿನ ನೇರ ನಡೆಯ ದರ್ಶನ್ ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ನಟ ತಮ್ಮ ಇವತ್ತಿನ ಚಿತ್ರ ಕುರುಕ್ಷೇತ್ರದಲ್ಲಿ ಕೌರವನ ಪಾತ್ರ ಅವರ ಅಭಿನಯ ಕೌಶಲ್ಯಕೊಂದು ಕನ್ನಡಿ. ದರ್ಶನ್ ಸಿನಿಮಾ ಹೊರತಾಗಿ ಒಬ್ಬ ಮಾನವತಾವಾದಿ, ಸ್ನೇಹಮಯ ವ್ಯಕ್ತಿ ಹಾಗೂ ಒಬ್ಬ ಒಳ್ಳೆಯ ಹೃದಯದ ಮನುಷ್ಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!