Ultimate magazine theme for WordPress.

2 ರೂಪಾಯಿ ಈ ವಿಶೇಷ ನಾಣ್ಯ ಇದ್ರೆ 5 ಲಕ್ಷ ರೂಪಾಯಿ ಗಳಿಸಬಹುದು

0 15,973

ಹವ್ಯಾಸವೇ ಹಾಗೆ ಒಬ್ಬೊಬ್ಬರಲ್ಲೂ ವಿಭಿನ್ನ ವಾಗಿರುತ್ತದೆ. ಸಾಹಿತ್ಯ, ಛಾಯಾಗ್ರಹಣ, ಕಲೆ, ರಂಗಭೂಮಿ ಹೀಗೆ ತಮ್ಮದೇ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದೇ ರೀತಿ ನೋಟು ಹಾಗೂ ನಾಣ್ಯಗಳ ಸಂಗ್ರಹ ಕೂಡಾ ಒಂದು ಹವ್ಯಾಸವೇ ಆಗಿದೆ. ನಮ್ಮ ಇಂದಿನ ಜೀವನ ಶೈಲಿಯಲ್ಲಿ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ ತಂದುಕೊಡುತ್ತವೆ.

ಹಳೆಯ ಕಾಲದ ನಾಣ್ಯಗಳು ಕಳೆದುಹೋದ ದಿನಗಳು, ಆ ದಿನಗಳ ಜೀವನಶೈಲಿ, ಹಣದ ಮೌಲ್ಯದ ಬಗ್ಗೆ ಸಾರಿ ಹೇಳುತ್ತವೆ. 1 ನಯಾಪೈಸೆ, 2 ನಯಾ ಪೈಸೆ, 3 ನಯಾ ಪೈಸೆ, 5 ಪೈಸೆ, 10 ಪೈಸೆಯಂತಹ ನಾಣ್ಯಗಳು ಈಗ ಗತಕಾಲ ಸೇರಿವೆ. ಅದೆ ರೀತಿ ಈಗ ಮೊದಲಿನ ಒಂದು ಹಾಗೂ ಎರಡು ರೂಪಾಯಿಯ ನಾಣ್ಯಗಳೂ ಸಹ ಸಾಕಷ್ಟು ಹೊಸ ರೂಪು ರೇಷೆಗಳನ್ನು ಪಡೆದು ಚಲಾವಣೆಯಲ್ಲಿ ಇವೆ.

ಒಂದುವೇಳೆ ನಿಮ್ಮ ಬಳಿ ಕೂಡಾ ಎರಡು ರೂಪಾಯಿಯ ಈ ಒಂದು ನಾಣ್ಯ ನಿಮ್ಮ ಬಳಿ ಇದ್ದರೆ ನೀವು ಕೂಡಾ ಎರಡು ರೂಪಾಯಿಯ ಬದಲಿಗೆ ಲಕ್ಷ ರೂಪಾಯಿ ಹಣ ಗಳಿಸಬಹುದು. ಎರಡೂ ರೂಪಾಯಿಯಿಂದ ಲಕ್ಷ ಹಣ ಗಳಿಸುವುದು ಸಾಧ್ಯವಾ!? ಎಂದು ಆಶ್ಚರ್ಯ ಆಗಬಹುದು ಆದರೆ ಇದು ಸತ್ಯ. ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಾಣ್ಯಗಳ ಸಂಗ್ರಹದ ಅಭ್ಯಾಸ ನಿಮಗಿದ್ದರೆ ನಿಮ್ಮ ಈ ಹವ್ಯಾಸವೇ ಲಕ್ಷ ಲಕ್ಷ ಸಂಪಾದನೆಗೆ ದಾರಿ ಮಾಡಿಕೊಡಬಹುದು. ಹಳೆಯ ಅಪರೂಪದ ನಾಣ್ಯಗಳನ್ನು ಖರೀದಿಸುವ ಅನೇಕರು ನಮ್ಮ ಮಧ್ಯೆಯೇ ಇದ್ದಾರೆ. ಈ ಅಪರೂಪದ ನಾಣ್ಯಗಳಿಗಾಗಿ ಎಷ್ಟು ಹಣ ಕೊಟ್ಟು ಬೇಕಾದರೂ ಖರೀದಿಗೆ ಮುಂದಾಗುತ್ತಾರೆ. ಹಳೇಯ ಒಂದು ಮತ್ತು ಎರಡು ರೂಪಾಯಿಗಳ ನಾಣ್ಯಗಳು ನಿಮ್ಮ ಬಳಿ ಇದ್ದರೆ ನಿಮ್ಮನ್ನು ಇಂದು ಕುಳಿತಲ್ಲಿಯೇ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು.

ನಿಮ್ಮಲ್ಲಿ ಇಂಥ ಅಪರೂಪದ ನಾಣ್ಯಗಳಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ. ಆ ನಾಣ್ಯಗಳನ್ನು ಎಲ್ಲಿ ಮಾರಾಟ ಮಾಡಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಎರಡು ರೂಪಾಯಿಯ ಈ ಒಂದು ನಾಣ್ಯ ನಿಮ್ಮ ಬಳಿ ಇದ್ದರೆ ನಿಮ್ಮನ್ನು ಕುಳಿತಲ್ಲಿಯೇ ಮಿಲಿಯನೇರ್ ಮಾಡಿಬಿಡಬಹುದು. 1994 ರಲ್ಲಿ ಮುದ್ರಣ ಮಾಡಲಾಗಿರುವ ಈ ನಾಣ್ಯದ ಹಿಂಭಾಗದಲ್ಲಿ ಭಾರತದ ಧ್ವಜ ಇದೆ. ಈ ಅಪರೂಪದ ನಾಣ್ಯಗಳ ಬೆಲೆಯನ್ನು ಕ್ವಿಕರ್  ವೆಬ್‌ಸೈಟ್‌ನಲ್ಲಿ (quikr website)  5 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿದೆ. 

ಈ ನಾಣ್ಯಗಳನ್ನು ಇ-ಕಾಮರ್ಸ್ ಸೈಟ್ ಕ್ವಿಕರ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಯಾವ ಬೆಲೆಗೆ ಈ ನಾಣ್ಯಗಳು ಮಾರಾಟವಾಗುತ್ತವೆ ಎನ್ನುವುದು ಮಾರಾಟಗಾರ ಮತ್ತು ಖರೀದಿದಾರರಿಗೆ ಬಿಟ್ಟ ವಿಷಯ. ಆದರು ಈ ನಾಣ್ಯಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದಂತೂ ಸುಳ್ಳಲ್ಲ. ನಮ್ಮ ದೇಶದ ಸ್ವಾತಂತ್ರ್ಯದ ಮೊದಲು ಮುದ್ರಿಸಲಾಗಿರುವ ವಿಕ್ಟೋರಿಯಾ ರಾಣಿಯ ಚಿತ್ರ ಇರುವ ಒಂದು ರೂಪಾಯಿ ಬೆಳ್ಳಿ ನಾಣ್ಯದ ಮೌಲ್ಯವು ಎರಡು ಲಕ್ಷ ರೂಪಾಯಿಗಳಾಗಿವೆ.

ಇನ್ನು ಜಾರ್ಜ್ ವಿ ಕಿಂಗ್ ಚಕ್ರವರ್ತಿಯ ಚಿತ್ರ ಇರುವ 1918ರಲ್ಲಿ ಮುದ್ರಣವಾದ ಒಂದು ರೂಪಾಯಿ ಬ್ರಿಟಿಷ್ ನಾಣ್ಯದ ಮೌಲ್ಯವು ಒಂಭತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ನಮ್ಮ ಬಳಿ ಇಂತಹ ನಾಣ್ಯಗಳು ಇವೆ ಹಾಗಿದ್ದರೆ ನಾವು ಆ ನಾಣ್ಯಗಳನ್ನು ಎಲ್ಲಿ ಮಾರಾಟ ಮಾಡಬಹುದು? ಎನ್ನುವ ಪ್ರಶ್ನೆ ನಿಮಗೆ ಬಂದರೆ ಇಲ್ಲಿ ನೋಡಿ. ನಿಮ್ಮ ಬಳಿ ಇರುವ ಮೇಲೆ ಹೇಳಿದ ನಾಣ್ಯಗಳನ್ನು ನೀವು ಮಾರಾಟ ಮಾಡಲು ಬಯಸಿದರೆ, ಮೊದಲು ಆನ್ಲೈನ್ ಸೈಟ್ ಗೆ ಹೋಗಿ ನಿಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬೇಕು.

ನಂತರ ನಿಮ್ಮ ಬಳಿ ಇರುವ ಆ ನಾಣ್ಯದ ಫೋಟೋ ಕ್ಲಿಕ್ ಮಾಡಿ ಅದನ್ನು ಸೈಟ್‌ಗೆ ಅಪ್ಲೋಡ್ ಮಾಡಬೇಕು. ಇಲ್ಲಿ ನೀವು ನಾಣ್ಯದ ಫೋಟೋವನ್ನು ಅಪ್ಲೋಡ್ ಮಾಡಿದ ನಂತರ ನಾಣ್ಯವನ್ನು ಖರೀದಿಸುವ ವ್ಯಕ್ತಿಗಳು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅಲ್ಲಿಂದ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಾಣ್ಯವನ್ನು ಮಾರಾಟ ಮಾಡಬಹುದು.

Leave A Reply

Your email address will not be published.