Ultimate magazine theme for WordPress.

ಗೌರಿ ಹಬ್ಬದ ಪ್ರಯುಕ್ತ ಬಾಗೀನವನ್ನು ಮೊರದಲ್ಲಿ ಹೇಗೆ ಜೋಡಿಸಿಕೊಳ್ಳುವುದು ನೋಡಿ

0 9

ಗೌರಿ ಹಬ್ಬದ ಪ್ರಯುಕ್ತ ಮರದ ಬಾಗೀನವನ್ನು ಮೊರದಲ್ಲಿ ಯಾವ ರೀತಿ ಜೋಡಿಸಿಕೊಳ್ಳಬಹದು ಎನ್ನುವುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿವಾಹಿತ ಮಹಿಳೆ ತನ್ನ ಮಾಂಗಲ್ಯ ಭಾಗ್ಯದ ರಕ್ಷಣೆಗಾಗಿ, ತನ್ನ ಪತಿಯ ಶ್ರೇಯಸ್ಸಿಗಾಗಿ ಏಳ್ಗೆಗಾಗಿ ತನ್ನ ಸಂಸಾರದ ಪ್ರತೀ ಹೆಜ್ಜೆಯಲ್ಲೂ ಒಳ್ಳೆಯದು ಆಗಲೀ ಎಂದು ಪಾರ್ವತೀ ದೇವಿಯ ಸ್ವರೂಪವಾದ ಗೌರಿಗೆ ಪ್ರಾರ್ಥನೆ ಮಾಡಿಕೊಂಡು ವಿವಾಹಿತ ಮಹಿಳೆಗೆ ಬಾಗೀನ ಕೊಡುವ ಪದ್ಧತಿ ಇದೆ. ಅವಿವಾಹಿತ ಸ್ತ್ರೀಯರು ಬಾಗೀನ ನೀಡಬಾರದು. ವಿವಾಹಿತ ಸ್ತ್ರೀಯರು ಮಾತ್ರ ತನ್ನ ತವರಿಗೆ ಅಂದರೆ ತನ್ನ ತಾಯಿಗೆ ಈ ಗೌರಿ ಬಾಗಿನವನ್ನು ನೀಡಬೇಕು.

ಮೊದಲು ಹೊಸ ಮೊರಗಳನ್ನು ತಂದು ಅದನ್ನು ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಟ್ಟುಕೊಳ್ಳಬೇಕು. ನಂತರ ಒಣಗಿದ ಮರಕ್ಕೆ ನೀರಿನಲ್ಲಿ ಕರಡಿದ ಅರಿಶಿನವನ್ನು × ಈ ಆಕಾರದಲ್ಲಿ ಎರಡೂ ಕಡೆ ಹಚ್ಚಬೇಕು ಹಾಗೇ ಕುಂಕುಮವನ್ನು ಅರಿಶಿನ ಹಚ್ಚಿದ ನಾಲ್ಕು ಮೂಲೆಗಳಿಗೆ ಹಾಗೂ ಮಧ್ಯದಲ್ಲಿ ಹಚ್ಚಬೇಕು. ನಂತರ ಇದರ ಮೇಲೆ ಬಾಳೆ ಎಲೆ ಇಟ್ಟು ಅದರ ಮೇಲೆ ಎರಡು ವೀಳ್ಯದ ಎಲೆ ಹಾಗೂ ಅಡಿಕೆ, ಬಾಳೆಹಣ್ಣು, ದಕ್ಷಿಣೆ ಅಂದರೆ ಯಾಥಾನುಷಕ್ತಿ ಹಣವನ್ನು ಇಡಬಹುದು.

ಇನ್ನು ಬಿಚ್ಚೋಲೆ ಅಂದರೆ ಇದರಲ್ಲಿ ಕಾಡಿಗೆ, ಬಾಚಣಿಗೆ, ಅರಿಶಿನ ಕುಂಕುಮ, ಕನ್ನಡಿ, ಅರಿಶಿನದ ಕೊಂಬು, ಹಸಿರು ಗಾಜಿನ ಬಳೆಗಳು, ಒಂದು ತೆಂಗಿನಕಾಯಿ, ಧಾನ್ಯಗಳು ಅದರಲ್ಲಿ ಬೆಲ್ಲದ ಅಚ್ಚು, ಅಕ್ಕಿ ತೊಗರಿ ಬೇಳೆ ರವೆ ಗೋಧಿ ಹೆಸರು ಬೇಳೆ ಕಡಲೆ ಬೇಳೆ ಬ್ಲೌಸ್ ಪೀಸ್, ಹಣ್ಣುಗಳು ( ಬಾಳೆ ಹಣ್ಣು ಸೇರಿ 3 ಅಥವಾ 5 ವಿಧದ ಹಣ್ಣುಗಳು) ಹೂವು ಹಾಗೇ ಅನುಕೂಲ ಇದ್ದರೆ ಸೀರೆಯನ್ನು ಇಟ್ಟು ಕೊಡಬಹುದು. ಇಷ್ಟನ್ನೂ ಇಟ್ಟುಕೊಂಡ ನಂತರ ಇನ್ನೊಂದು ಮೊರವನ್ನು ಉಲ್ಟಾ ಮಾಡಿ ಮುಚ್ಚಬೇಕು ಹಾಗೆ ಅದರ ಮೇಲೆ ಹಸಿ ದಾರವನ್ನು ಕಟ್ಟಿ, ಅದರ ಮೇಲೆ ಮತ್ತೆ ಎರಡು ವೀಳ್ಯದ ಎಲೆ ಅಡಿಕೆ ಬಾಳೆಹಣ್ಣು ಹೂವು ಇತ್ತು ಪೂಜೆ ಮಾಡಿ ಬಾಗೀನ ಕೊಡಬಹುದು. ಇದರ ಜೊತೆಗೆ ಕೆಲವು ಕಡೆ ಹುಣಿಸೆ ಹಣ್ಣು, ಉಪ್ಪು, ಸೌತೆಕಾಯಿ ಮುಂತಾದ ತರಕಾರಿ ಹಾಗೂ ಸ್ವೀಟ್ ಕೂಡಾ ಇಟ್ಟು ಕೊಡುವ ಸಂಪ್ರದಾಯ ಕೂಡಾ ಇರುತ್ತದೆ.

Leave A Reply

Your email address will not be published.