ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಯುಗಾದಿ ಸಂಭ್ರಮ ಹೇಗಿತ್ತು ನೋಡಿ

0 2

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ನಂತಹ ಸಿನಿಮಾ ಮಾಡುವ ಮೂಲಕ ಎಲ್ಲರೂ ಅವರತ್ತ ತಿರುಗಿ ನೋಡುವಂತೆ ಮಾಡಿದರು. ಅವರ ಹೆಂಡತಿ ರಾಧಿಕಾ ಪಂಡಿತ್ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ ಜೊತೆಗೆ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ರಾಧಿಕಾ ಪಂಡಿತ್ ಅವರ ಮನೆಯಲ್ಲಿ ನಡೆದ ಯುಗಾದಿ ಹಬ್ಬದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೆ ಖ್ಯಾತಿಯಾಗಿರುವ, ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ನಟಿ ರಾಧಿಕಾ ಪಂಡಿತ್ ಧಾರಾವಾಹಿಗಳಲ್ಲಿ ನಟಿಸುತ್ತಾ ಜನಪ್ರಿಯತೆ ಪಡೆದು ನಂತರ 2008 ರಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

ಕನ್ನಡ ಚಿತ್ರರಂಗದ ಪ್ರಿನ್ಸೆಸ್ ಆಗಿ ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದರು. ಈ ವರ್ಷ ರಾಧಿಕಾ ಪಂಡಿತ್ ಮತ್ತು ಯಶ್ ಅವರ ಮನೆಯಲ್ಲಿ ಸಾಮಾನ್ಯವಾಗಿ ಹಬ್ಬದ ಆಚರಣೆ ಜೋರಾಗಿರುತ್ತದೆ. ರಾಧಿಕಾ ಅವರು ಒಂದು ದಶಕಗಳ ಕಾಲ ಒಳ್ಳೆಯ ಪಾತ್ರಗಳಲ್ಲಿ ನಟಿಸಿ, ಯಶಸ್ಸು, ಅವಾರ್ಡ್ ಮತ್ತು ಜನಪ್ರಿಯತೆ ಗಳಿಸಿದ ನಂತರ 2016 ರ ಅಂತ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ರೊಡನೆ ವಿವಾಹವಾದರು.

ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ, ಬಹುತೇಕ ಎಲ್ಲಾ ಸಮಯವನ್ನು ಕುಟುಂಬಕ್ಕಾಗಿ ನೀಡಿದರು. ರಾಕಿಂಗ್ ದಂಪತಿಗೆ 2018ರಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು. ಮಗಳಿಗೆ ಆಯ್ರಾ ಎಂದು ಹೆಸರಿಟ್ಟರು. ನಂತರ 2019 ರಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದರು. ಮಕ್ಕಳಾದ ಮೇಲಂತೂ ಅವರು ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳ ಪಾಲನೆ ಪೋಷಣೆಯಲ್ಲಿಯೆ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಯಶ್ ರಾಧಿಕಾ ದಂಪತಿಯ ಮಕ್ಕಳ ಫೋಟೋಗಳು ಬಹಳ ವೈರಲ್ ಆಗುತ್ತವೆ. ಮದುವೆ ನಂತರ ನಟನೆ ಕಡಿಮೆ ಮಾಡಿದ ರಾಧಿಕಾ ಪಂಡಿತ್ ನಟಿಸಿದ ಕೊನೆಯ ಸಿನಿಮಾ ಆದಿಲಕ್ಷ್ಮಿ ಪುರಾಣ. ಈ ಸಿನಿಮಾದಲ್ಲಿ ರಂಗಿತರಂಗ ಸಿನಿಮಾ ಖ್ಯಾತಿಯ ನಟ ನಿರೂಪ್ ಭಂಡಾರಿ ನಟರಾಗಿದ್ದರು. ಚಿತ್ರರಂಗದಿಂದ ರಾಧಿಕಾ ಪಂಡಿತ್ ಅವರು ದೂರವಾಗಿದ್ದರೂ ಸಹ ಈಗಲೂ ಅವರಿಗೆ ಇರುವ ಬೇಡಿಕೆಯೇನು ಕಡಿಮೆಯಾಗಿಲ್ಲ. ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇದೀಗ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಅದ್ಧೂರಿಯಾಗಿ ಯುಗಾದಿ ಹಬ್ಬದ ಆಚರಣೆ ನಡೆದಿದೆ.

ಯಶ್ ಅವರು ಸಹ ಕೆಜಿಎಫ್ ಸಿನಿಮಾ ಪ್ರೊಮೋಷನ್ ಇಂದ ಬ್ರೇಕ್ ಪಡೆದು, ಮನೆಯಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಯುಗಾದಿ ಹಬ್ಬ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ಸಾಮಾನ್ಯವಾಗಿ ಎಲ್ಲಾ ಹಬ್ಬಗಳನ್ನು ಸಂತೋಷದಿಂದ, ಸಂಭ್ರಮದಿಂದ ಆಚರಿಸುತ್ತಾರೆ. ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನೆಯ ಯುಗಾದಿ ಹಬ್ಬದ ಸೆಲೆಬ್ರೇಷನ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವರ್ಷ ಬೇವಿಗಿಂತ ಬೆಲ್ಲ ಜಾಸ್ತಿ ಇರಲಿ. ತುಂಬಾ ಒಬ್ಬಟ್ಟು ತಿನ್ನಿ.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.. ಎಂದು ಬರೆದಿದ್ದಾರೆ. ರಾಧಿಕಾ ಪಂಡಿತ್, ಯಶ್ ಅವರ ಮಕ್ಕಳು ನೆಲದ ಮೇಲೆ ಕುಳಿತುಕೊಂಡು ಬಾಳೆಎಲೆಯಲ್ಲಿ ಊಟ ಮಾಡುತ್ತಿರುವ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು.

Leave A Reply

Your email address will not be published.