Ultimate magazine theme for WordPress.

ವಿಚ್ಛೇದನ ಪಡೆದ ನಂತರ ನಟಿ ಸಮಂತಾ ಹೆಚ್ಚಾಗಿ ಬೋಲ್ಡ್ ಅವತಾರಗಳಲ್ಲಿ, ಅಭಿಮಾನಿಗಳು ಏನ್ ಅಂದ್ರು ನೋಡಿ

0 2

ಕನ್ನಡ ಚಿತ್ರರಂಗವಿರಲಿ ಅಥವಾ ಇತರೆ ಚಿತ್ರರಂಗದಲ್ಲಿಯೂ ಸಹ ಕೆಲವು ನಟ, ನಟಿಯರ ವ್ಯೆಯಕ್ತಿಕ ಜೀವನ ಸುಖವಾಗಿರುವುದಿಲ್ಲ. ಫೇಮಸ್ ನಟಿ ಸಮಂತಾ ಅಕ್ಕಿನೇನಿ ಅವರು ನಾಗಚೈತನ್ಯ ಅವರಿಗೆ ವಿಚ್ಚೇದನ ನೀಡಿದ್ದಾರೆ. ಇವರಿಬ್ಬರ ವಿಚ್ಛೇದನದ ನಂತರ ಸಮಂತಾ ಅವರಿಗೆ ಹೆಚ್ಚಿನ ಆಫರ್ ಗಳು ಬಂದಿವೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕಳೆದ ಕೆಲವು ತಿಂಗಳ ಹಿಂದೆ ಟಾಲಿವುಡ್ ನ ಟಾಪ್ ನಟಿ ಸಮಂತಾ ತಮ್ಮ ವಿಚ್ಛೇದನ ವಿಷಯವಾಗಿ ಹಾಗೂ ತಮ್ಮ ಹೂ ಅಂಟಾವ ಮಾಮ ಉಹು ಅಂಟಾವ ಎಂಬ ಹಾಡಿನ ಮೂಲಕವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಮದ್ಯಪಾನದ ಜಾಹಿರಾತು ಒಂದರಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ವಿಚ್ಛೇದನ ಪಡೆದ ನಂತರ ನಟಿ ಸಮಂತಾ ತುಸು ಹೆಚ್ಚಾಗಿ ಬೋಲ್ಡ್ ಅವತಾರಗಳಲ್ಲಿ ಕ್ಯಾಮೆರಾ ಮುಂದೆ ಬರುತ್ತಿದ್ದಾರೆ ಅಲ್ಲದೆ ಅತಿಹೆಚ್ಚಿನ ಸಿನಿಮಾಗಳ ಆಫರ್ ಅವರಿಗೆ ಲಭಿಸಿರುವುದು ಎಲ್ಲರಿಗೂ ತಿಳಿದಿದೆ.

ಫ್ಯಾಮಿಲಿ ಮ್ಯಾನ್ ಟು ವೆಬ್ ಸಿರೀಸ್ ನಲ್ಲಿ ಸಖತ್ ಬೋಲ್ಡ್ ಆಗಿ ನಟನೆ ಮಾಡುವ ಮೂಲಕ ಜನಮನಗೆದ್ದ ನಟಿ ಸಮಂತಾ ತಮ್ಮ ವೈಯಕ್ತಿಕ ಬದುಕಿನ ಇರಿಸುಮುರಿಸುನಿಂದಾಗಿ ನಟ ನಾಗಚೈತನ್ಯರವರೊಂದಿಗೆ ವಿಚ್ಛೇದನ ಪಡೆದು ನಾಗಾರ್ಜುನ ಕುಟುಂಬದಿಂದ ಸಂಪೂರ್ಣ ಹೊರನಡೆದರು. ನಂತರ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಹೂ ಅಂಟವಾ ಮಾಮಾ ಉಹು ಅಂಟವಾ ಎಂಬ ಐಟಂ ಸಾಂಗ್ ನಲ್ಲಿ ಸಖತ್ತಾಗಿ ಸ್ಟೆಪ್ ಹಾಕುವ ಮೂಲಕ ಬಾರಿ ವೈರಲ್ ಆಗಿದ್ದರು.

ಈ ಒಂದೆ ಒಂದು ಐಟಂ ಸಾಂಗ್ ನಿಂದಾಗಿ ನಟಿ ಸಮಂತಾ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದಿದ್ದು. ವಿಚ್ಛೇದನ ಪಡೆದ ನಂತರ ಸಮಂತಾ ಬ್ಯೂಸಿಯಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಲಿದೆ. ಹೀಗಿರುವಾಗ ಹಲವಾರು ವರ್ಷಗಳಿಂದಲೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ನಟಿ ಸಮಂತಾ ಈಗ ವಿಶೇಷವಾಗಿ ಜನರ ಮುಂದೆ ಬಂದಿದ್ದಾರೆ.

ಮದ್ಯಪಾನದ ಜಾಹೀರಾತೊಂದಕ್ಕೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಈ ಜಾಹೀರಾತು ಬಿಡುಗಡೆಯಾದ ಕೆಲವೆ ಕೆಲವು ಕ್ಷಣಗಳಲ್ಲಿ ಇತರರಿಗೆ ಮಾದರಿಯಾಗಬೇಕಾಗಿರುವ ಟಾಪ್ ನಟಿಯರು ಈ ರೀತಿ ಅರ್ಧಂಬರ್ಧ ಬಟ್ಟೆ ಧರಿಸಿ ಮದ್ಯಪಾನದಂತಹ ವಸ್ತುಗಳಿಗೆ ಜಾಹೀರಾತು ಮಾಡುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ.

ಇನ್ನಿತರರು ಸಮಂತಾ ಅವರ ಬೋಲ್ಡ್ ಅವತಾರಕ್ಕೆ ಬೆರಗಾಗಿ ಹೋಗಿದ್ದಾರೆ, ಅಲ್ಲದೆ ಇನ್ಸ್ಟಾಗ್ರಾಮ್, ಫೇಸ್ಬುಕ್, ಯುಟ್ಯೂಬ್ ನಂತಹ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ನಟಿ ಸಮಂತಾ ಅವರ ಟ್ರೋಲ್ ಗಳನ್ನೆ ನೋಡಬಹುದಾಗಿದೆ. ನಟಿ ಸಮಂತಾ ಕಾಣಿಸಿಕೊಂಡಿರುವ ಈ ಜಾಹೀರಾತಿನ ಕುರಿತು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಂತಾ ಅವರ ಜಾಹೀರಾತಿನ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿ.

Leave A Reply

Your email address will not be published.