ಸ್ಪೆಷಲ್ ವಿಮಾನ, ಸ್ಪೆಷಲ್ ಮನೆ, ರಾಕ್ ಬಗ್ಗೆ ನೀವು ತಿಳಿಯದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ.

0 3

WWE ನ ದೈತ್ಯ ಶಕ್ತಿ ರಾಕ್ ಈತ ತನ್ನ ಹುಬ್ಬೇರಿಸಿ ಜಗತ್ತನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ ಆತನ ಕಟ್ಟುಮಸ್ತಾದ ದೇಹಕ್ಕೆ ಮರುಳಾಗದವರೇ ಇಲ್ಲ. ಈಗ ಇವರು ಜಗತ್ತಿನ ನಂಬರ್ ಒನ್ ನಟ ಇವರ ಬಗ್ಗೆ ಲೇಖನ ಮೂಲಕ ತಿಳಿಯೋಣ.

ಹಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ರಾಕ್. ರಾಕ್ ಎಂದರೆ ನೆನಪಾಗುವುದೆ ಅವರು ಹಾಕಿಸಿಕೊಂಡಿರುವ ಟ್ಯಾಟೊ ರಾಕ್ ನ ಒಂದು ಕೈಯಲ್ಲಿ ಬುಲ್ ಚಿತ್ರವನ್ನು ಚಿತ್ರಿಸಲಾಗಿದೆ. ಈ ಬುಲ್ ರಾಕ್ ತಮ್ಮ ಜೀವನದಲ್ಲಿ ಎದುರಿಸಿದ ಸಂಘರ್ಷವನ್ನು ತೋರಿಸುತ್ತದೆ. ಈ ಟ್ಯಾಟೊವನ್ನು ವಿಶ್ವ ಪ್ರಸಿದ್ಧ ಟ್ಯಾಟೊ ಆರ್ಟಿಸ್ಟ್ ನಿಕ್ಕೊ ಹೋ ಲೆಂಡ್ ಚಿತ್ರಿಸಿದ್ದಾರೆ. ಅವರ ಎದೆಯ ಮೇಲೆ ಇರುವ ಟ್ಯಾಟೊ ಅವರ ಕುಟುಂಬದ ಚಿತ್ರಣವನ್ನು ತೋರಿಸುವ ಚಿತ್ರವಂತೆ. ಇವರು ತಮ್ಮ ಕುಟುಂಬದವರನ್ನು ಬಹಳ ಪ್ರೀತಿಸುತ್ತಾರೆ. ಕುಟುಂಬದವರಿಗಾಗಿ ಫ್ಲೋರಿಡಾದಲ್ಲಿ ಒಂದು ಬಂಗಲೆಯನ್ನು ಖರೀದಿಸಿದ್ದಾರೆ. ಈ ಬಂಗಲೆಯಲ್ಲಿ ಎಲ್ಲವೂ ಇದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ಮ್, 6 ಬೆಡ್ ರೂಮ್ ಗಳಿದೆ ಥಿಯೇಟರ್ ಕೂಡ ಇದೆ. ಇವರ ತಂದೆಯ ಆಸೆಯನ್ನು ರಾಕ್ ಪೂರೈಸಿದ್ದಾರೆ. ಅವರ ತಂದೆ ಈಗಿಲ್ಲ. ರಾಕ್ ಅವರು ತಂದೆ ತಾಯಿಗೆ ಸರ್ ಪ್ರೈಸ್ ಗಿಫ್ಟ್ ಕೊಡುತ್ತಿದ್ದರು. ಹೀಗೆ ಒಮ್ಮೆ ಅಮ್ಮನಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟಾಗ ಖುಷಿಯಿಂದ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಇದನ್ನು ರಾಕ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ರಾಕ್ ಬಳಿ ಪ್ರೈವೇಟ್ ಜೆಟ್ ಇದೆ ಈ ಜೆಟ್ ನ ಬೆಲೆ ಬರೋಬ್ಬರಿ 50 ಮಿಲಿಯನ್ ಡಾಲರ್.

ರಾಕ್ 10 ವರ್ಷಗಳ ಕಾಲ ರೆಸ್ಲಿಂಗ್ ನಲ್ಲಿ ಮಿಂಚಿದ್ದರು. ನಂತರ ಹಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟರು ಇದರಿಂದ ಅವರ ಜೀವನ ಬದಲಾಯಿತು. ದ ಮಮ್ಮಿ ರಿಟರ್ನ್ಸ್ ಮೂಲಕ ಹಾಲಿವುಡ್ ಗೆ ಕಾಲಿಟ್ಟರು. ರಾಕ್ ಗೆ ಹೆಸರು ತಂದುಕೊಟ್ಟ ಚಿತ್ರ ದಿ ಸ್ಕಾರ್ಪಿಯನ್ ಕಿಂಗ್ ಈ ಸಿನಿಮಾದಲ್ಲಿ ರಾಕ್ ನಾಯಕ ನಟನಾಗಿ ನಟಿಸಿದ್ದರು. ಅಲ್ಲಿಂದ ದೊಡ್ಡ ಸ್ಟಾರ್ ಆದರು. ಅವರ ಬ್ಯಾಂಕ್ ಅಕೌಂಟ್ ಅವರ ಶರೀರದಂತೆ ಬೆಳೆಯುತ್ತಲೆ ಇದೆ. ವೆಲ್ ಕಮ್ ಟು ದ ಜಂಗಲ್ ಸಿನಿಮಾ ರಾಕ್ ಜೀವನವನ್ನೆ ಬದಲಾಯಿಸಿತು. ಈ ಸಿನಿಮಾದ ನಂತರ ರಾಕ್ ಹಾಲಿವುಡ್ ಜಗತ್ತಿನ ನಂಬರ್ ಒನ್ ಪಟ್ಟಕ್ಕೇರಿದರು. ರಾಕ್ ಬಳಿ ದುಬಾರಿ ಕಾರುಗಳಿವೆ, ದುಬಾರಿ ಸೂಟ್ಸ್ ಗಳಿವೆ. ಮಂತ್ರ ಮುಗ್ಧ ಗೊಳಿಸುವ ವಾಚ್ ಗಳ ಕಲೆಕ್ಷನ್ ಕೂಡ ರಾಕ್ ಬಳಿ ಇದೆ. ರಾಕ್ ಬಹಳ ಜನರಿಗೆ ಸಹಾಯ ಮಾಡುತ್ತಾರೆ ಹಲವು ಚಾರಿಟಿ ಗಳಿಗೆ ಸಹಾಯ ಮಾಡುತ್ತಾರೆ. ಅವರು ಫಿಟ್ ನೆಸ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ರಾಕ್ ದಿನನಿತ್ಯ ಜಿಮ್ ಮಾಡುತ್ತಾರೆ ಫ್ಲೋರಿಡಾದಲ್ಲಿ ಇರುವ ತಮ್ಮ ಮನೆಯಲ್ಲಿ ದೊಡ್ಡ ಜಿಮ್ ನಿರ್ಮಿಸಿಕೊಂಡಿದ್ದಾರೆ. 3 ಲಕ್ಷ ಡಾಲರ್ ನಲ್ಲಿ ಈ ಜಿಮ್ಮ್ ನಿರ್ಮಾಣವಾಗಿದೆ. ಈ ಜಿಮ್ಮ್ ನಲ್ಲಿ ಜಗತ್ತಿನ ದುಬಾರಿ ಟ್ರೈನಿಂಗ್ ಮಷೀನ್ ಗಳಿವೆ. ಅವರ ಬಳಿ ಮೊಬೈಲ್ ಜಿಮ್ಮ್ ಇದೆ ರಾಕ್ ಅವರಿಗೆ ಶೂಟಿಂಗ್ ಇದ್ದ ಸಮಯದಲ್ಲಿ ಮೊಬೈಲ್ ಜಿಮ್ಮ್ ಅವರೊಂದಿಗೆ ಹೋಗುತ್ತದೆ. ರಾಕ್ ಒಂದು ಪ್ರೊಡಕ್ಷನ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಅದರ ಹೆಸರು ಸೆವೆನ್ ಬಕ್ಸ್ ರಾಕ್ ಅವರಿಗೆ ಪುಟ್ಬಾಲ್ ಆಟಗಾರನಾಗಬೇಕೆಂಬ ಕನಸಿತ್ತು ಆದರೆ ಅದು ನನಸಾಗುವುದಿಲ್ಲ ನಂತರ ಇವರು WWE ಗೆ ಬರುತ್ತಾರೆ ಈ ಸಮಯದಲ್ಲಿ ಅವರ ಬಳಿ ಕೇವಲ 7 ಡಾಲರ್ ಇತ್ತು ರಾಕ್ ಸಂಕಷ್ಟಗಳನ್ನು ಎದುರಿಸುತ್ತಾರೆ ಈ 7 ಡಾಲರ್ ನೆನಪಿಗಾಗಿ ಸೆವೆನ್ ಬಕ್ಸ್ ಎಂದು ಹೆಸರಿಡುತ್ತಾರೆ. ಈ ಕಂಪನಿ ರಾಕ್ ಅವರ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ ಇದರಿಂದ ಕೋಟಿ ಕೋಟಿ ಆದಾಯವನ್ನು ಗಳಿಸುತ್ತಿದ್ದಾರೆ. ರಾಕ್ ಬಳಿ ಇಂದು ಎಲ್ಲವೂ ಇದೆ ಆದರೆ ಅದರ ಹಿಂದೆ ಕಲ್ಲುಮುಳ್ಳಿನ ಹಾದಿ ಇತ್ತು.

Leave A Reply

Your email address will not be published.