ನಿಮ್ಮ ಹೊಲದ ಪಹಣಿ ಜಾಯಿಂಟ್ ಪಹಣಿ ಇದೆಯಾ? ಪಾರಂ ನಂಬರ್ 10 ಕ್ಕೆ ಅರ್ಜಿ ಸಲ್ಲಿಸೋದು ಹೇಗೆ ನೋಡಿ

0 14

ರೈತರಲ್ಲಿ ಅನೇಕರು ತಮ್ಮ ಪಹಣಿಗಳನ್ನು ಪಾರಂ ನಂಬರ್ ಹತ್ತರಲ್ಲಿ ಸೇರಿಸಲು ಅರ್ಜಿ ಸಲ್ಲಿಸಿರುತ್ತಾರೆ. ಒಂದೆ ಸರ್ವೆ ನಂಬರ್ ನಲ್ಲಿ ನಮ್ಮ ಜಮೀನಿನ ಸುತ್ತ ಮುತ್ತ ಇರುವ ಜಮೀನುಗಳು ಎಲ್ಲರದ್ದು ಸೇರಿರುವ ಪಹಣಿಗಳು ಇರುತ್ತವೆ. ಅವುಗಳನ್ನು ಹಿಸ್ಸೆಯ ಪ್ರಕಾರ ಬೇರೆ ಬೇರೆ ಮಾಡಲು ಅರ್ಜಿಗಳನ್ನು ನಾಡ ಕಚೇರಿ ಅಥವಾ ಭೂಮಾಪನ ಅಥವಾ ಭೂದಾಖಲೆಗಳ ಕಂದಾಯ ಇಲಾಖೆಗೆ ಸಲ್ಲಿಸಿರುತ್ತಾರೆ. ಪಹಣಿ ನಂಬರ್ ಹತ್ತಕ್ಕೆ ಸೇರಿಸಲು ಹಲವಾರು ರೈತರು ಅರ್ಜಿ ಸಲ್ಲಿಸಿರುತ್ತಾರೆ . ಯಾಕೆಂದರೆ ಕೆಲವರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ತಮ್ಮ ಪಹಣಿಯನ್ನು ಪಾರಂ ನಂಬರ್ ಹತ್ತನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾರೆ. ಹೀಗೆ ಮಾಡಲು ಪ್ರಮುಖ ಕಾರಣವೆಂದರೆ ಜಮೀನು ಖರೀದಿಸುವಾಗ ಜಾಯಿಂಟ್ ಪಹಣಿಯಲ್ಲಿರುವ ಎಲ್ಲರ ಸಹಿ ಬೇಕಾಗಿರುತ್ತದೆ. ಹಾಗೆಯೆ ಜಮೀನು ಖರೀದಿಸುವವರಿಗೆ ಇತ್ತೀಚೆಗೆ ಪ್ರತ್ಯೇಕವಾಗಿ ಬೇರೆ ಹಿಸ್ಸಾದಲ್ಲಿ ಒಬ್ಬರ ಹೆಸರಿನಲ್ಲಿಯೆ ಇರಬೇಕೆಂದು ಬಯಸುತ್ತಾರೆ.

ಹಾಗೆಯೆ ಒಂದೆ ಸರ್ವೆ ನಂಬರ್ ನಲ್ಲಿ ಬಹಳಷ್ಟು ಪಹಣಿಗಳು ಇರುವುದರಿಂದ ಹಾಗೂ ಎಲ್ಲರೊಂದಿಗೆ ಜಾಯಿಂಟ್ ಆಗಿರುವುದರಿಂದ ತಮ್ಮ ವ್ಯವಹಾರದಲ್ಲಿ ರೈತರಿಗೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಬಿಟ್ಟು ಇನ್ನೂ ಹಲವಾರು ತೊಂದರೆಗಳು ಕೂಡ ಇವೆ. ಅದೇನೆ ಇದ್ದರೂ ಕೂಡಾ ಒಂದೆ ಸರ್ವೇ ನಂಬರ್ ನಲ್ಲಿ ಬೇರೆ ಬೇರೆ ಭಾಗಗಳಾಗಿ ಅಂದರೆ ಹಿಸ್ಸಾ ಹಾಗೂ ಬಟಗಳಾಗಿ ಮಾಡಿಕೊಳ್ಳಲು ರೈತರು ಅರ್ಜಿಯನ್ನು ಸಲ್ಲಿಸಿದ ಮೇಲೆ ರೈತರಿಗೆ ಒಂದು ರಶೀದಿ ನೀಡುತ್ತಾರೆ. ಆ ರಶೀದಿಯ ಮೂಲಕ ರೈತರು ತಮ್ಮ ಫೈಲ್ ಎಲ್ಲಿದೆ, ಯಾವ ಅಧಿಕಾರಿಯ ಬಳಿ ಬಾಕಿ ಇದೆ ಎಂದು ತಿಳಿದುಕೊಳ್ಳಬಹುದು. ಅದರ ಬಗೆಗೆ ಇಲ್ಲಿದೆ ಮಾಹಿತಿ.

ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ಸರ್ಚ್ ಪೇಜ್ ಅನ್ನು ಒಪನ್ ಮಾಡಿಕೊಳ್ಳಬೇಕು. ನಂತರ ಸರ್ಚ್ ಬಾಕ್ಸ್ ನಲ್ಲಿ SSLR ಎಂದು ಬರೆಯಬೇಕು. ಸರ್ಚ್ ಮಾಡಿದಾಗ ಮೇಲೆ ಬರುವ SSLR ಅನ್ನುವ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಅದನ್ನು ಆಯ್ಕೆ ಮಾಡಿದಾಗ ಡಿಪಾರ್ಟ್ಮೆಂಟ್ ಆಫ್ ಸರ್ವೆ ಸೆಟಲ್ಮೆಂಟ್ ಆ್ಯಂಡ್ ಲ್ಯಾಂಡ್ ರೆಕಾರ್ಡ್ ಎಂಬ ಒಂದು ಆಫಿಶಿಯಲ್ ಪೇಜ್ ಒಪನ್ ಆಗುತ್ತದೆ. ನಂತರ ಆ ಪೇಜಿನ ಕೆಳಗೆ ಅರ್ಜಿ ಸಂಖ್ಯೆ ದಾಖಲಿಸಿ ಮತ್ತು ನಿಮ್ಮ ಅರ್ಜಿಯು ಯಾವ ಹಂತದಲ್ಲಿ ಇದೆ ಎಂಬುದನ್ನು ನೋಡಲು ಬಟನ್ ಕ್ಲಿಕ್ ಮಾಡಿ ಎಂದು ಬರೆದಿರುತ್ತದೆ. ಅದರ ಕೆಳಗೆ ಇರುವ ಒಂದು ಬಾಕ್ಸ್ ನಲ್ಲಿ ನಿಮ್ಮ ರಶೀದಿ ನಂಬರ್ ನಮೂದಿಸಿ ಅಲ್ಲಿ ಕೆಳಗೆ ಕನ್ನಡ ಹಾಗೂ ಇಂಗ್ಲೀಷ್ ವೆಂಬ ಎರಡು ಆಯ್ಕೆ ಇರುತ್ತದೆ. ಅದರಲ್ಲಿ ನಿಮಗೆ ಯಾವ ಭಾಷೆ ಬೇಕು ಎಂದು ಆಯ್ಕೆ ಮಾಡಿಕೊಂಡು ಆ ಭಾಷೆಯಲ್ಲಿ ಯಾವ ಹಂತದಲ್ಲಿದೆ ಎಂದು ನೋಡಬಹುದು. ಭಾಷೆಯನ್ನು ಆಯ್ಕೆ ಮಾಡಿದಾಗ ಯಾವ ಸಿಬ್ಬಂದಿಯ ಬಳಿ ನಮಗೆ ಸಂಬಂಧಿಸಿದ ಪೈಲ್ ಇದೆ ಎಂಬುದನ್ನು ಅದು ತೋರಿಸುತ್ತದೆ. ಹೀಗೆ ರೈತರು ತಮ್ಮ ಪಹಣಿಗಳನ್ನು ಪಾರಂ ನಂಬರ್ ಹತ್ತಕ್ಕೆ ಬದಲಾಯಿಸಿಕೊಳ್ಳಬಹುದು.

Leave A Reply

Your email address will not be published.