women property Rihgts: ಭಾರತ ಹಿಂದಿನ ಕಾಲದಿಂದಲೂ ಪುರುಷ ಪ್ರಧಾನ ರಾಷ್ಟ್ರವಾಗಿದೆ ಮೊದಲಿನಿಂದಲೂ ಎಲ್ಲಾ ವಿಷಯಗಳಲ್ಲಿಯೂ ಮಹಿಳೆಯರಿಗಿಂತ ಹೆಚ್ಚಿನ ಆದ್ಯತೆಯನ್ನು ಪುರುಷರಿಗೆ ನೀಡುತ್ತಾ ಬಂದಿದೆ ಅದೇ ರೀತಿ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿಯೂ ಕೂಡ ಪುರುಷರಿಗೆ ಮೊದಲ ಆದ್ಯತೆಯನ್ನು ನೀಡಿದ್ದು ಈ ಮೊದಲು ಹೆಣ್ಣು ಮಕ್ಕಳಿಗೆ ಯಾವುದೇ ಅಧಿಕಾರವನ್ನು ನೀಡಿರಲಿಲ್ಲ ಆದರೆ ಇದೀಗ ಈ ನಿಯಮಗಳಲ್ಲಿ ಬದಲಾವಣೆ ಉಂಟಾಗಿದೆ ವರ್ಷ ಕಳೆದಂತೆ ಕಾನೂನುಗಳಲ್ಲಿ ಉಂಟಾದಂತಹ ಹಲವಾರು ರೀತಿಯ ಗಮನಾರ್ಹ ಬದಲಾವಣೆಗಳನ್ನ ನಾವು ಕಾಣಬಹುದು.

2005ರ ನಂತರ ಎಲ್ಲಾ ಲಿಂಗಿಗಳಿಗೆ ಸಮಾನ ಹಕ್ಕುಗಳನ್ನು ಪಡೆಯಲು ಸರ್ಕಾರ ಹಲವಾರು ಸುಧಾರಣೆಗಳನ್ನ ತಿದ್ದುಪಡಿ ಮಾಡಿತು. ಈಗಲೂ ಸಹ ಆ ಪ್ರಕ್ರಿಯೆ ಮುಂಚೂಣಿಯಲ್ಲಿದ್ದು ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಹೆಣ್ಣು ಮಕ್ಕಳು ಸಹ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲನ ಹೊಂದಬಹುದಾಗಿದೆ ಕಾನೂನಿನ ಮೂಲಕ ತಮ್ಮ ಪಾಲಿನ ಆಸ್ತಿಯನ್ನು ಹೆಣ್ಣು ಮಕ್ಕಳು ಬಡೆದುಕೊಳ್ಳಬಹುದು 2005ರಲ್ಲಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಈ ಮಹತ್ವದ ಬದಲಾವಣೆಯನ್ನ ಜಾರಿಗೆ ತರಲಾಯಿತು ಈ ಕಾಯ್ದೆಯ ಪ್ರಕಾರ ಪುರುಷ ಮತ್ತು ಮಹಿಳೆಯರಿಗೆ ಆಸ್ತಿ ಸಮವಾಗಿ ಭಾಗವಾಗಬೇಕು ಮತ್ತು ಮಹಿಳೆಯರು ಪುರುಷರ ತರಹ ಎಲ್ಲಾ ವಿಷಯಗಳನ್ನು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ತಿಳಿದು ಬಂದಿತು.

2005 ರ ಹಕ್ಕಿನ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳೋಣ… ಈ ಹಕ್ಕು ಎಲ್ಲಾ ಪ್ರಕರಣಗಳಲ್ಲೂ ಅನ್ವಯವಾಗುವುದಿಲ್ಲ ಏಕೆಂದರೆ ಕಾನೂನು ಜಾರಿಗೆ ಬಂದದ್ದು ಸೆಪ್ಟೆಂಬರ್ 9, 2018 ಈ ಕಾಯ್ದೆ ಜಾರಿಗೆ ಬಂದ ನಂತರ ಉಂಟಾದ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಅದಕ್ಕಿಂತ ಮೊದಲಿನ ವಿಚಾರಗಳಿಗೆ ಇದು ಸಂಬಂಧಿಸಿ ರುವುದಿಲ್ಲ ಅಷ್ಟೇ ಅಲ್ಲದೆ ಈ ತಿದ್ದುಪಡಿಯ ಮೊದಲು ಆಸ್ತಿಯಲ್ಲಿ ಹಕ್ಕು ನೀಡಿಲ್ಲವೆಂದು ಹೆಣ್ಣು ಮಕ್ಕಳು ಕೋರ್ಟ್ ಮೆಟಿಲೇರಿದರೆ ಅವರಿಗೆ ಯಾವುದೇ ರೀತಿಯ ಪಾಲು ಸಿಗುವುದಿಲ್ಲ ಏಕೆಂದರೆ ಈ ಮೊದಲು ಪಿತ್ರಾರ್ಜಿತ ಆಸ್ತಿ ಮಗನಿಗೆ ಮಾತ್ರ ಸೇರಬೇಕು ಎಂಬ ಪದ್ಧತಿ ಇತ್ತು ಆಗಿನ ಕಾನೂನು ಸಹ ಅದೇ ಆಗಿತ್ತು ಹೆಣ್ಣು ಮಕ್ಕಳು ಈ ಆಸ್ತಿಯಲ್ಲಿ ಪಾಲನ ಪಡೆಯುವ ಅರ್ಹತೆಯನ್ನು ಹೊಂದಿರಲಿಲ್ಲ ಇದೀಗ 2005ರ ತಿದ್ದುಪಡಿಯ ನಂತರದಲ್ಲಿ ಈ ಎಲ್ಲಾ ಧೋರಣೆಗಳಿಗೂ ಪರಿಹಾರ ಸಿಕ್ಕಿದ್ದು ಹೆಣ್ಣು ಮಕ್ಕಳು ಕೂಡ ತಂದೆ ಆಸ್ತಿಯಲ್ಲಿ ಪಾಲನ್ನು ಕೇಳಬಹುದಾಗಿದೆ ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳ ಅನುಮತಿ ಇಲ್ಲದೆ ಯಾರು ಸಹ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಆರ್ತಿಗಾಗಿ ಹೋರಾಟ ನಡೆಸುವ ಮೊದಲು ಆಸ್ತಿಯು ಸ್ವಯಂಸ್ವಾಧೀನ ಪಡಿಸಿಕೊಂಡಿದೆಯೇ ಅಥವಾ ಪಿತ್ರಾರ್ಜಿತವಾಗಿದೆ ಎಂಬುದನ್ನ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅಷ್ಟಕ್ಕೂ ಈ ಕಾನೂನಿನ ಮಹತ್ವವೇನೆಂದರೆ ಹೆಣ್ಣು ಮಗು ಅವರ ಪತಿಯ ಕುಟುಂಬದ ಕಷ್ಟಗಳಿಂದಾಗಿ ಅಥವಾ ಪತಿಯ ಕುಟುಂಬದಿಂದ ದೂರವಾದರೆ ಅಂತಹ ಸಮಯದಲ್ಲಿ ತಂದೆ ತಾಯಿಯ ಆಸರೆ ಇಲ್ಲದಿದ್ದರೂ ಸಹ ಈ ಕಾಯ್ದೆಯಿಂದ ಅವರಿಗೆ ಸಹಾಯವಾಗಬಹುದು ಇದರ ಜೊತೆಗೆ ಇದು ಭಾರತದಲ್ಲಿ ಆಸ್ತಿ ಮಾಲಿಕತ್ವದಲ್ಲಿ ಲಿಂಗ ತಾರತಮ್ಯತೆಯನ್ನ ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಲ್ಲಬೇಕಾದಂತಹ ಎಲ್ಲಾ ಹಕ್ಕುಗಳನ್ನ ನ್ಯಾಯಯುತವಾಗಿ ನೀಡುವುದು ಈ ಕಾಯ್ದೆಯ ಉದ್ದೇಶವಾಗಿರುತ್ತದೆ. ಇದನ್ನೂ ಓದಿ: Lunar Eclipse 2023: ಇದೆ ಮೇ 5 ಕ್ಕೆ ಚಂದ್ರಗ್ರಹಣ ಈ ಮೂರು ರಾಶಿಗಳಿಗೆ ಬಾರಿ ಅದೃಷ್ಟ ಒಲಿಯಲಿದೆ

By

Leave a Reply

Your email address will not be published. Required fields are marked *