1000 Rupee Note: ಒಂದು ಸಾವಿರ ಮುಖಬೆಲೆಯ ನೋಟು ಇದೀಗ ಮತ್ತೆ ಚಾಲ್ತಿಗೆ ಬರಲಿದೆ ಎಂದು ಹರಿದಾಡುತ್ತಿರುವ ಸುದ್ದಿಗೆ ಇದೀಗ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ ಇತ್ತೀಚಿಗಷ್ಟೇ ಮತ್ತೊಂದು ವಿಶೇಷ ಸುದ್ದಿ ಹರಿದಾಡುತ್ತಿತ್ತು ಅದೇನೆಂದರೆ 2000 ಮುಖಬೆಲೆಯ ನೋಟುಗಳನ್ನ ನಿಷ್ಕ್ರಿಯಗೊಳಿಸಲು ಆರ್ ಬಿ ಐ ನಿರ್ಧಾರ ಮಾಡಿದೆ ಎಂಬುದಾಗಿತ್ತು ಇದರ ಜೊತೆಗೆ ಇದೇ ಬರುವ ಸೆಪ್ಟೆಂಬರ್ 30ರ ಬಳಿಕ ಎರಡು ಸಾವಿರ ರೂಗಳ ನೋಟುಗಳು ಬ್ಯಾನ್ ಆಗುತ್ತದೆ ಎಂಬ ಮಾಹಿತಿ ಕೂಡ ಸ್ಪಷ್ಟವಾಗಿತ್ತು.

ಸದ್ಯಕ್ಕೆ ದೇಶದಲ್ಲಿ ಅತಿ ಹೆಚ್ಚು ಬೆಲೆಯುಳ್ಳ ಮುಖಬೆಲೆಯ ನೋಟು ಎಂದರೆ ಅದು 500 ರೂಪಾಯಿ ಇದೀಗ ಅದರೊಂದಿಗೆ ಮೊದಲು ಬ್ಯಾನ್ ಆಗಿರುವಂತಹ ಹಳೆಯ ಒಂದು ಸಾವಿರ ಮುಖಬೆಲೆಯ ನೋಟುಗಳು ಮರು ಚಲಾವಣೆಗೆ ಬರುತ್ತವೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ ಆದರೆ ಈ ಸುದ್ದಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದರ ಬಗ್ಗೆ ಆರ್ ಬಿ ಐ ನ ಗವರ್ನರ್ ಶಕ್ತಿಕಾಂತ್ ದಾಸ್ ಈಗ ಹೇಳಿಕೆ ನೀಡಿದ್ದಾರೆ.

ನೋಟು ಹಿಂಪಡೆಯುವಿಕೆಯಿಂದ ಉಂಟಾಗುವ ಆರ್ಥಿಕ ನಷ್ಟ ಅಂತರಾಷ್ಟ್ರೀಯ ವ್ಯವಹಾರಕ್ಕೆ ಅಡಚಣೆ ಇನ್ನೂ ಇತರ ಅನೇಕ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ನೋಟು ಹಿಂಪಡೆಯುವಿಕೆಯು ಆರ್ಥಿಕ ವ್ಯವಹಾರದ ಮೇಲೆ ದುಷ್ಪರಿಣಾಮವನ್ನು ಬೀರುವುದಿಲ್ಲ ಅಷ್ಟೇ ಅಲ್ಲದೆ ಜನರ ವ್ಯವಹಾರಕ್ಕೆ ಸದ್ಯಕ್ಕೆ ಅಧಿಕ ಮುಖಬೆಲೆಯನ್ನ ಹೊಂದಿರುವ ನೋಟುಗಳ ಅವಶ್ಯಕತೆ ತುಂಬಾ ಕಡಿಮೆ ಈಗಂತೂ ಎಲ್ಲರಲ್ಲಿಯೂ ಮೊಬೈಲ್ ಬ್ಯಾಂಕಿಂಗ್ ಇದ್ದೇ ಇರುತ್ತದೆ ಮೊಬೈಲ್ ಬ್ಯಾಂಕಿಂಗ್ ಉಪಯೋಗಿಸದೆ ಇರುವ ಜನರಿಗೂ ಕೂಡ ಅಷ್ಟೊಂದು ಮುಖಬೆಲೆಯ ನೋಟಿನ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಸಾವಿರದ ನೋಟು ಮತ್ತೆ ಜಾರಿಗೆ ಬರುತ್ತದೆ ಎಂಬ ಗೊಂದಲವನ್ನು ಮೂಡಿಸಬೇಡಿ ಎಂದು ಗವರ್ನರ್ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ದೇಶದಲ್ಲಿ ಎರಡು ಸಾವಿರ ರೂ ಮುಖಬೆಲೆಯ ನೋಟಿನ ಚಲಾವಣೆಗೆ ಮಿತಿಯನ್ನ ವಿಧಿಸಿದ್ದು ಈ ಬೆನ್ನಲ್ಲೇ ಈ ಹಿಂದೆ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ನೋಟನ್ನ ಚಲಾವಣೆ ಮಾಡದೆ ಸಂಗ್ರಹಿಸಿ ಇಟ್ಟವರಿಗೆ ಇದೀಗ ದೊಡ್ಡ ತಲೆ ನೋವಾಗಿದೆ ಈ ಬಾರಿ ಎರಡು ಸಾವಿರದ ನೋಟನ್ನು ಬ್ಯಾಂಕ್ ನಲ್ಲಿ ಚಲಾವಣೆ ಮಾಡಲು ಬಯಸುವವರು ಒಮ್ಮೆ 10 ನೋಟುಗಳನ್ನು ಮಾತ್ರ ಕಾನೂನಾತ್ಮಕ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಇದಕ್ಕಿಂತ ಹೆಚ್ಚಿನ ಹಣ ಉಳ್ಳವರು ತಮ್ಮ ಹಣವನ್ನು ಉಳಿಸಿಕೊಳ್ಳಲು ಇತರೆ fd ಮಾಡಿಕೊಳ್ಳಬೇಕಾಗುತ್ತದೆ ಅದೇನೇ ಆದರೂ ಒಂದು ಸಾವಿರ ಮುಖಬೆಲೆಯ ಹಳೆಯ ನೋಟು ಮತ್ತೆ ಚಾಲ್ತಿಗೆ ಬರುವುದಿಲ್ಲ ಎಂಬುದು ಆರ್ ಬಿ ಐ ಗವರ್ನರ್ ನೀಡಿದ ಸ್ಪಷ್ಟನೆಯಿಂದ ತಿಳಿದು ಬರುತ್ತದೆ. ಇದನ್ನೂ ಓದಿ: Home Loan: ಗೃಹ ಸಾಲ ಪಡೆಯಲು ಮುಖ್ಯವಾಗಿ ಯಾವ ದಾಖಲೆಗಳು ಬೇಕು? ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!