ಆಚಾರ್ಯ ಚಾಣಕ್ಯರು ನಮ್ಮ ಭಾರತ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿಗಳಲ್ಲಿ ಒಬ್ಬರು ಎಂದರು ತಪ್ಪಾಗಲಾರದು. ಕೇವಲ ರಾಜನೀತಿ ಮತ್ತು ಆರ್ಥಿಕ ಶಾಸ್ತ್ರ ಮಾತ್ರವಲ್ಲದೆ ಒಬ್ಬ ಮನುಷ್ಯ ಜೀವನದಲ್ಲಿ ಹೇಗಿರಬೇಕು ಎನ್ನುವ ಸಂಪೂರ್ಣ ವಿವರ ಹಾಗೂ ವಿಚಾರಗಳನ್ನು ಚಾಣಕ್ಯ ಶಾಸ್ತ್ರ ಗ್ರಂಥದಲ್ಲಿ ಬರೆದಿದ್ದಾರೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಯೊಬ್ಬರು ಹೇಳುತ್ತಾರೆ ಆದರೆ ಮಹಿಳೆಯರನ್ನು ಆಕರ್ಷಿಸಲು ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಎಂಬುದನ್ನು ತಮ್ಮ ಪುಸ್ತಕದಲ್ಲಿ ಆಚಾರ್ಯ ಚಾಣಕ್ಯರು ಬರೆದಿಟ್ಟಿದ್ದಾರೆ. ಹಾಗಿದ್ದರೆ ಆ ಗುಣಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಪ್ರತಿಯೊಬ್ಬರೂ ಕೂಡ ಸಂಬಂಧದಲ್ಲಿ ತಮ್ಮ ಸಂಗಾತಿ ತಮಗೆ ನಿಷ್ಠರಾಗಿ ಹಾಗೂ ಪ್ರಾಮಾಣಿಕರಾಗಿರಬೇಕು ಎಂಬುದಾಗಿ ಭಾವಿಸುತ್ತಾರೆ. ಒಂದು ವೇಳೆ ಮಹಿಳೆಯರಿಗೆ ತಮ್ಮ ಪುರುಷ ಸಂಗಾತಿ ಪ್ರೀತಿಯಲ್ಲಿ ಪ್ರಾಮಾಣಿಕನಾಗಿದ್ದಾನೆ ಎಂದರೆ ಖಂಡಿತವಾಗಿ ಆತನ ಮೇಲೆ ವಿಶೇಷವಾದ ಗೌರವ ಹಾಗೂ ಪ್ರೀತಿ ಇರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಗ್ರಂಥದಲ್ಲಿ ಉಲ್ಲೇಖವಾಗಿದೆ. ನಂಬಿಕೆಯಿಂದಲೇ ನಡೆಯುವ ಈ ಜೀವನ ನಿಜಕ್ಕೂ ಪ್ರಾಮಾಣಿಕತೆಯನ್ನು ಪ್ರಮುಖವಾಗಿ ಅಪೇಕ್ಷಿಸುತ್ತದೆ ಎನ್ನಬಹುದು.

ಪ್ರಮುಖವಾಗಿ ಒಬ್ಬ ವ್ಯಕ್ತಿ ಹೆಣ್ಣಿಗೆ ಗೌರವಿಸುತ್ತಾನೆ ಎಂದರೆ ಖಂಡಿತವಾಗಿ ಅಂತಹ ಪುರುಷನನ್ನು ಹೆಚ್ಚಾಗಿ ಮಹಿಳೆಯರು ಇಷ್ಟ ಪಡುತ್ತಾರೆ. ಪುರುಷನಷ್ಟೇ ಸಮಾನವಾಗಿ ಹೆಣ್ಣಿಗೂ ಕೂಡ ಬೆಲೆ ನೀಡುತ್ತಾರೆ ಎನ್ನುವುದರಲ್ಲಿ ಆತನ ವ್ಯಕ್ತಿತ್ವವನ್ನು ಒಬ್ಬ ಮಹಿಳೆ ಅಳತೆ ಮಾಡಬಹುದಾಗಿದೆ. ಇದರಲ್ಲಿ ಆತ ಮಹಿಳೆಯ ಮೇಲೆ ಅನುಮಾನ ಕೂಡ ಪಡಬಾರದು. ಇಲ್ಲಿ ಸಮಾನತೆ ಹಾಗೂ ಗೌರವ ಪರಸ್ಪರ ಸಮಾನವಾಗಿ ಹಂಚಿಕೆ ಆಗಬೇಕಾಗಿರುವುದು ಮಹಿಳೆಯರಿಗೆ ಹಾಗೂ ಸಂಬಂಧಕ್ಕೆ ನೀಡುವ ಪ್ರಮುಖ ಗೌರವವಾಗಿದೆ ಎಂದು ಹೇಳಬಹುದು.

ಇನ್ನು ಪ್ರಮುಖವಾಗಿ ಈ ವಿಚಾರವನ್ನು ಮಹಿಳೆಯರು ಪ್ರಮುಖವಾಗಿ ಪುರುಷನಲ್ಲಿ ಗಮನಿಸುತ್ತಾರೆ. ಅದೇನೆಂದರೆ ಸಂಬಂಧದಲ್ಲಿ ಪುರುಷರು ಕೂಡ ಒಳ್ಳೆಯ ಕೇಳುಗನಾಗಿರಬೇಕು. ಹೌದು ಗೆಳೆಯರೇ ಯಾಕೆಂದರೆ ಸಂಬಂಧದಲ್ಲಿ ಯಾವತ್ತೂ ಕೂಡ ಪುರುಷಣೆ ಡಾಮಿನೇಟ್ ಆಗಿರಬಾರದು.

ಅಲ್ಲಿ ಹೆಣ್ಣಿನ ಭಾವನೆ ಹಾಗೂ ನಿರ್ಧಾರ ಮತ್ತು ಸ್ವಾತಂತ್ರ್ಯವನ್ನು ಅಭಿವ್ಯಕ್ತ ಪಡಿಸುವುದಕ್ಕೆ ಅವಕಾಶ ನೀಡಬೇಕು. ಹೀಗಾಗಿ ಆಕೆಯ ನಿರ್ಧಾರ ಹಾಗೂ ಮಾತು ಅನಿಸಿಕೆಗಳನ್ನು ಕೂಡ ಕೇಳಿ ಒಪ್ಪಿಕೊಳ್ಳುವುದಕ್ಕೆ ಪುರುಷ ಸಿದ್ದನಾಗಿದ್ದರೆ ಆತನ ಕುರಿತಂತೆ ಅವಳಿಗೆ ಸ್ವಯಂ ಚಾಲಿತ ಗೌರವ ಹೆಚ್ಚಾಗುತ್ತದೆ. ಈ ಎಲ್ಲ ಗುಣಗಳನ್ನು ಪುರುಷನಲ್ಲಿ ಒಬ್ಬ ಮಹಿಳೆ ನಿರೀಕ್ಷೆ ಮಾಡುತ್ತಾಳೆ ಎನ್ನಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!