ಗಂಧದ ಗುಡಿ ಶೂಟಿಂಗ್ ವೇಳೆ ಅಪ್ಪು ಜೊತೆ ಪತ್ನಿ ಅಶ್ವಿನಿ ಬೆಟ್ಟ ಸುತ್ತಿದ ಆ ಸುಂದರ ಕ್ಷಣಗಳು ಹೇಗಿದ್ದವು ನೋಡಿ

0 1

ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಕರುನಾಡ ರಾಜಕುಮಾರನ ಕೊನೆಯ ಸಿನಿಮಾ ಗಂಧದಗುಡಿಯ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿರ್ದೇಶಕ ಅಮೋಘ ವರ್ಷ ಅವರ ಜೊತೆಗೆ ಇಡೀ ಕರ್ನಾಟಕದ ವನ್ಯ ಸಂಪತ್ತನ್ನು ಸುತ್ತಾಡಿ ಆ ಅದ್ಭುತ ದೃಶ್ಯವನ್ನು ಸಿನಿಮಾ ರೂಪದಲ್ಲಿ ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಪರಿ ನಿಜಕ್ಕೂ ಕೂಡ ಎಲ್ಲರ ಮನಸ್ಸನ್ನು ಗೆದ್ದಿದೆ. ಯಾವೊಬ್ಬ ನಟನು ಕೂಡ ಭಾರತೀಯ ಚಿತ್ರರಂಗದಲ್ಲಿ ಇಂತಹ ವಿಚಾರವನ್ನು ಕನಸು ಮನಸ್ಸಿನಲ್ಲಿಯೂ ಕೂಡ ನೆನೆಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅವರನ್ನು ಕೊನೆಯ ಬಾರಿ ಈ ಸಿನಿಮಾದ ಮೂಲಕ ನೋಡುತ್ತಿರುವುದು ನಿಜಕ್ಕೂ ಕೂಡ ಅತ್ಯಂತ ಭಾವನಾತ್ಮಕ ವಿಚಾರವಾಗಿದೆ.

ರಾಷ್ಟ್ರಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ಸಿನಿಮಾ ನಿರ್ದೇಶಕ ಆಗಿರುವ ಅಮೋಘ ವರ್ಷ ಅವರ ಜೊತೆಗೆ ಕರ್ನಾಟಕದ ಹಲವಾರು ಪ್ರೇಕ್ಷಣೀಯ ಪ್ರಾಕೃತಿಕ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿನ ಅವ್ಯಕ್ತ ಪ್ರಾಕೃತಿಕ ಸೌಂದರ್ಯವನ್ನು ಪುನೀತ್ ರಾಜಕುಮಾರ್ ಅವರು ಗಂಧದಗುಡಿ ಸಿನಿಮಾದ ಮೂಲಕ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನಿಗೂ ಕೂಡ ಕಟ್ಟಿಕೊಟ್ಟಿದ್ದಾರೆ. ಅಪ್ಪು ಅವರು ಈ ಸಂದರ್ಭದಲ್ಲಿ ಬೇರೆ ಯಾವುದು ಸಿನಿಮಾ ಮಾಡಿ ಹಣವನ್ನು ಗಳಿಸಬಹುದಾಗಿತ್ತು ಆದರೆ ಕರ್ನಾಟಕದ ಪ್ರಾಕೃತಿಕ ಸ್ಥಳಗಳನ್ನು ಡಾಕ್ಯುಮೆಂಟರಿ ಸಿನಿಮಾದ ಮೂಲಕ ಚಿತ್ರೀಕರಿಸುವ ಮೂಲಕ ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕೆ ಸಹಕಾರಿಯಾಗುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಮುಂದೆ ಇಂತಹ ಕೆಲಸಗಳಿಗೆ ಕೈಹಾಕಲು ಹಲವಾರು ಸ್ಟಾರ್ ನಟರಿಗೂ ಕೂಡ ಪ್ರೇರೇಪಣೆ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಕಾಡಿನಲ್ಲಿ ಸುತ್ತಾಡಿದ್ದರೂ ಎನ್ನುವುದು ಹಲವಾರು ಜನರಿಗೆ ತಿಳಿದಿರಲಿಲ್ಲ. ಗಂಧದ ಗುಡಿ ಸಿನಿಮಾದ ಮೇಕಿಂಗ್ ವಿಡಿಯೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ಸುತ್ತಾಡಿರುವ ಕ್ಯೂಟ್ ವಿಡಿಯೋ ಈಗ ಎಲ್ಲರ ಗಮನಕ್ಕೆ ಬಂದಿದೆ.

ಹೌದು ಮಿತ್ರರೇ, ಕಾಳಿ ನದಿಯ ಹತ್ತಿರ ಇರುವಂತಹ ಕಾಡಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ಹಾಗೂ ಗಂಧದಗುಡಿ ತಂಡದ ಜೊತೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಟ್ರೆಕ್ಕಿಂಗ್ ನಲ್ಲಿ ಭಾಗವಹಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲರ ಮೆಚ್ಚುಗೆ ಒಳಗಾಗಿದೆ. ಗಂಡ ಹೆಂಡತಿ ಇಬ್ಬರೂ ಕೂಡ ಕೊನೆಯ ಬಾರಿಗೆ ಪ್ರವಾಸ ಮಾಡಿರುವ ಕ್ಷಣ ಇದೇ ಆಗುತ್ತೆ ಎಂಬುದು ಯಾರು ಕೂಡ ಭಾವಿಸಿರಲಿಲ್ಲ. ಆ ಎಲ್ಲ ದುಃಖದ ಕ್ಷಣಗಳನ್ನು ಮರೆತು ಪುನೀತ್ ರಾಜಕುಮಾರ್ ಅವರ ಅಸ್ತಿತ್ವವನ್ನು ಗಂಧದಗುಡಿ ಸಿನಿಮಾದ ಮೂಲಕ ಆನಂದಿಸೋಣ. video credit for cine buzz

Leave A Reply

Your email address will not be published.