ಕೊಟ್ಟಿದ್ದು 100 ರೂಪಾಯಿ ಗೆದ್ದಿದ್ದು ಕೋಟಿ.! ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಮಂಡ್ಯದ ಹೈದ

0 2

ಲಾಟರಿ ಟಿಕೆಟ್ ಎನ್ನುವುದು ಒಂದು ಬಗೆಯ ಜೂಜಾಟ ವಾಗಿದೆ. ಇದು ರಾಜ್ಯಗಳ ಅಥವಾ ಆ ದೇಶದ ಒಪ್ಪಿಗೆ ಮೇರೆಗೆ ದೇಶದ ಆದಾಯವನ್ನು ಹೆಚ್ಚಿಸುವ ಒಂದು ಬಗೆಯ ಮಾರ್ಗವಾಗಿದೆ. ಜನರು ಹೆಚ್ಚಾಗಿ ಜೂಜಾಟದಲ್ಲಿ ತೊಡಗುವುದು, ಮೋಜು-ಮಸ್ತಿ ಮಾಡುವುದು ಇಷ್ಟಪಡುತ್ತಾರೆ. ಜನರಿಗೂ ಕೆಲವೊಬ್ಬರ ಅದೃಷ್ಟದ ಮೇಲೆ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಅವಕಾಶವು ಕೂಡ ಇರುತ್ತದೆ. ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇಂತಹ ಒಂದು ಲಾಟರಿ ಟಿಕೆಟ್ ನಲ್ಲಿ ಮಂಡ್ಯದ ವ್ಯಕ್ತಿ ಒಂದು ದಿನದಲ್ಲಿ ಒಂದು ಕೋಟಿಯನ್ನು ಗಳಿಸಿದ್ದಾನೆ. ಇಂತಹ ಒಂದು ಲಾಟರಿಯನ್ನು ಪಡೆದವನು ಸಕ್ಕರೆ ನಾಡಿನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಲರಾಮ್ ಎಂಬ ಉದ್ಯಮಿಯ ಮಗನಾದ ಸೋಹನ್ ಎನ್ನುವವರು ಲಾಟರಿ ಟಿಕೆಟ್ ನಿಂದ 1 ಕೋಟಿ ರೂಗಳನ್ನು ಪಡೆದುಕೊಂಡಿದ್ದಾರೆ. ಸೋಹನ್ ಮತ್ತು ಅವರ ಕುಟುಂಬದವರು ಒಂದು ರವಿವಾರ ಸ್ನೇಹಿತನ ಮದುವೆಗೆಂದು ಕೇರಳದ ಪೂತನಾಥಗೆ ಹೋಗುತ್ತಾರೆ. ಆ ಸಮಯದಲ್ಲಿ ಕೇರಳದಲ್ಲಿ ಭಾಗ್ಯಮತಿ ಎನ್ನುವ ಲಾಟರಿಯನ್ನು ನೂರು ರೂಪಾಯಿಗಳನ್ನು ಕೊಟ್ಟುಕೊಂಡುಕೊಳ್ಳುತ್ತಾರೆ.

ಆ ದಿನ ಕೇರಳದಲ್ಲಿ ಭಾಗ್ಯಮತಿ ಲಾಟರಿ 48 ಲಕ್ಷ ಟಿಕೆಟ್ಗಳು ವ್ಯಾಪಾರವಾಗಿರುತ್ತದೆ. ಅದರಲ್ಲಿ ಮೊದಲನೇ ಬಹುಮಾನವಾದ 1 ಕೋಟಿ ಹಣ ಮಂಡ್ಯ ಜಿಲ್ಲೆಯ ಸೋಹನ್ ಅವರಿಗೆ ದೊರಕುತ್ತದೆ. ಈ ವಿಷಯವನ್ನು ತಿಳಿದ ಮನೆಯವರು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸೋಹನ್ ಅವರು ಈ ಲಾಟರಿಯಲ್ಲಿ ದೊರೆತ ಹಣವನ್ನು ಅವರ ಬಳಿ ಇರುವ ರೈಸ್ ಮಿಲ್ ಅನ್ನು ಇನ್ನೂ ಹೆಚ್ಚಿನ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಹಣವನ್ನು ಬಳಸುತ್ತೇನೆ ಎಂದು ಹೇಳುತ್ತಾರೆ.

ಲಾಟರಿ ಟಿಕೆಟ್ ಗಳಂತಹ ಜೂಜಾಟದಿಂದ ಅನೇಕ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿರುವ ಉದಾಹರಣೆಗಳು ಇವೆ. ಇಂತಹ ಜೂಜಾಟಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳುವುದು ತುಂಬಾ ಕೆಟ್ಟ ಚಟವಾಗಿದೆ. ಮನೋರಂಜನಾ ರೀತಿಯಲ್ಲಿ ಅಪರೂಪದ ದಿನಗಳಲ್ಲಿ ಇದನ್ನು ಆಡುವುದು ಉತ್ತಮ. ಇಂತಹ ಜೂಜಾಟಗಳಲ್ಲಿ ಹಣವನ್ನು ಗಳಿಸುವುದು ತುಂಬಾ ಕಷ್ಟಕರವಾದ ಸಂಗತಿ ಇದಕ್ಕೆ ಅದೃಷ್ಟ ಬಹಳ ಮುಖ್ಯವಾಗಿರುತ್ತದೆ. ಇಂತಹ ಅದೃಷ್ಟದ ಮೂಲಕವೇ ಸೋಹನ್ ಅವರು ಒಂದು ಕೋಟಿ ರೂಗಳನ್ನು ಲಾಟರಿ ಟಿಕೆಟ್ ನ ಮುಖಾಂತರ ಪಡೆದುಕೊಂಡಿದ್ದಾರೆ.

Leave A Reply

Your email address will not be published.