ಕೆಲವು ಆಹಾರ ಪದಾರ್ಥಗಳಿಗೆ ಕರಿ ಬೆವಿನ ಒಗ್ಗರಣೆ ಬಿತ್ತು ಎಂದರೆ ಸಾಕು. ಅದರ ರುಚಿ ಹಾಗೂ ಪರಿಮಳದ ಗಮ್ಮತ್ತೇ ಬೇರೆ ಇರುತ್ತದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಹುತೇಕ ಮಹಿಳೆಯರು ಆಹಾರ ಪದಾರ್ಥಗಳಿಗೆ ಕರಿ ಬೇವಿನ ಒಗ್ಗರಣೆಯನ್ನು ಹಾಕುತ್ತಾರೆ. ಅದು ನೈಸರ್ಗಿಕವಾಗಿ ಅನೇಕ ಆರೋಗ್ಯ ಲಾಭಗಳನ್ನು ನೀಡುವುದರ ಜೊತೆಗೆ ಅಡುಗೆಯ ಮೆರಗನ್ನು ಹೆಚ್ಚಿಸುವುದು.

ಕರಿ ಬೇವಿನ ಎಲೆ ಔಷಧೀಯ ಗುಣವನ್ನು ಹೊಂದಿರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವುದು. ಇದರ ಬಳಕೆಯು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕರಿಬೇವನ್ನು ಬೆಳಸಿಕೊಂಡು ಸಾಕಷ್ಟು ಔಷಧ, ಸೌಂದರ್ಯ ವರ್ಧಕ ಉತ್ಪನ್ನ ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು.

ಕರಿಬೇವು ಕೂದಲ ಆರೈಕೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುವುದು. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವಾದ ಔಷಧೀಯ ಗುಣವನ್ನು ಕರಿಬೇವು ಪಡೆದುಕೊಂಡಿದೆ. ಇದರಲ್ಲಿ ನೈಸರ್ಗಿಕವಾದ ಮೆಲನಿನ್ ವರ್ಣ ದ್ರವ್ಯವನ್ನು ಒಳಗೊಂಡಿರುವುದರಿಂದ ಕೂದಲನ್ನು ಪುನಃಸ್ಥಾಪಿಸುವುದು ಹಾಗೂ ಕೂದಲನ್ನು ಕಪ್ಪಾಗಿಸುತ್ತದೆ. ಹಾಗಾಗಿ ಅಕಾಲಿಕವಾಗಿ ಬಣ್ಣವನ್ನು ಕಳೆದುಕೊಳ್ಳುವ ಕೂದಲು, ಕೂದಲು ಉದುರುವಿಕೆ, ಹೊಟ್ಟುಗಳಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಆರೈಕೆ ನೀಡುವುದು.

ಕರಿಬೇವಿನ ಎಲೆಯನ್ನು ಆಹಾರದಲ್ಲಿ ಸೇರಿಸುವುದರಿಂದ ಅಧಿಕ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು. ಇದು ದೇಹದಲ್ಲಿ ರಕ್ತವನ್ನು ಶುದ್ಧಿಕರಿಸುವುದರ ಜೊತೆಗೆ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚಿಸುವುದು. ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಮೂಲಕ ಉತ್ತಮ ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡುವುದು. ದೇಹದಲ್ಲಿ ನಂಜು ಹಾಗೂ ವಿಷ ಪೂರಿತ ಅಂಶಗಳನ್ನು ಹೊರಹಾಕುವುದು. ಚರ್ಮಗಳಿಗೆ ಹಾಗೂ ಕೂದಲಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದರ ಮೂಲಕ ಆರೈಕೆ ಮಾಡುವುದು. ವಯಸ್ಕರಲ್ಲಿ, ಹದಿಹರೆಯದವರಲ್ಲಿ ಹಾಗೂ ವೃದ್ಧರಲ್ಲಿ ಕೂದಲು ಬಿಳಿಯಾಗುವುದು ಅಥವಾ ಬಣ್ಣವನ್ನು ಕಳೆದುಕೊಳ್ಳುವುದು ಸಾಮಾನ್ಯವಾದ ಸಮಸ್ಯೆಯಾಗಿದೆ.

ಈ ಸಮಸ್ಯೆಗೆ ಮನೆಯಲ್ಲಿಯೇ ನೈಸರ್ಗಿಕವಾದ ಆರೈಕೆಯನ್ನು ಪಡೆದುಕೊಳ್ಳಬಹುದು. ಕರಿಬೇವಿನ ಆರೈಕೆಯು ನಿಮ್ಮ ಕೂದಲಿಗೆ ಶಕ್ತಿ, ಬಣ್ಣ ಹಾಗೂ ಹೊಳಪನ್ನು ನೀಡುವುದು. ಅಂತಹ ಅದ್ಭುತ ಶಕ್ತಿಯ ಬಿಳಿಕೂದಲಿನ ಶಾಶ್ವತ ಪರಿಹಾರ ವಿಧಾನ ಹಾಗೂ ಅದರ ಬಳಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡುತ್ತಿದ್ದೇವೆ.
ಕರಿ ಬೇವಿನ ಎಲೆಯು ಅಧಿಕ ಪೋಷಕಾಂಶವನ್ನು ಪಡೆದುಕೊಂಡಿದೆ. ಹಾಗಾಗಿ ಕರಿಬೇವಿನ ಎಲೆಯನ್ನು ಕಚ್ಚಾ ರೂಪದಲ್ಲಿ ಅಥವಾ ಒಣಗಿಸಿ ಪುಡಿ ಮಾಡಿಯೂ ಸಹ ಬಳಸಬಹುದು.

ಇಲ್ಲಿ ನಾವು ಒಂದು ಬಗೆಯ ಪರಿಹಾರ ಕ್ರಮದ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಅದು ನಿಮ್ಮ ಸಮಸ್ಯೆಗಳ ನಿವಾರಣೆಗೆ ಅತ್ಯುತ್ತಮ ರೀತಿಯಲ್ಲಿ ಸಹಕಾರ ನೀಡುವುದು. ಒಂದು ಹಿಡಿ ಕರಿಬೇವಿನ ಎಲೆಗಳನ್ನು ಕಪ್ಪಾಗುವವರೆಗೆ ಒಣಗಿಸಬೇಕು ಅಥವಾ ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹುರಿದು ಮಿಕ್ಸಿಯಲ್ಲಿ ಪುಡಿ ತಯಾರಿಸಿಕೊಳ್ಳಬೇಕು. ತ

ಯಾರಿಸಿದ ಈ ಪುಡಿಗೆ ಅಲೋವೆರಾ ಜೆಲ್ ಸೇರಿಸಿ ವಾರಕ್ಕೆ ಒಮ್ಮೆ ಅಂತೆ ನಿಮ್ಮ ಕೂದಲಿಗೆ ಹಚ್ಚಿ 2 ಗಂಟೆ ಬಿಟ್ಟು ತಲೆ ಕೂದಲು ತೊಳೆದುಕೊಳ್ಳುವುದರಿಂದ ಉತ್ತಮ ಪಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಬಳಕೆಯಿಂದ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ ಕೊಳ್ಳಬಹುದು.

Leave a Reply

Your email address will not be published. Required fields are marked *