ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅದಕ್ಕೂ ಮೊದಲು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಯಾಕಂದ್ರೆ ಜ್ಞಾನವೇ ಆರೋಗ್ಯ ಅಜ್ಞಾನವೇ ಅನಾರೋಗ್ಯ ಎಂಬ ಮಾತಿದೆ. ನಮ್ಮದೇ ವೈಜ್ಞಾನಿಕ ವರಣೆ ತಿಳಿಯದೆ ಇದ್ದರೆ ನಾವು ತಪ್ಪು ದಾರಿಯಲ್ಲಿ ನಡೆಯುತ್ತೇವೆ. ಸರಿಯಾದ ದಾರಿಯಲ್ಲಿ ಹೋಗಬೇಕು ಅಂದರೆ ನಾವು ಜ್ಞಾವನ್ನ ಹೊಂದಿರಬೇಕು. ಜ್ಞಾನವನ್ನು ಗಳಿಸಿದಾಗ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಉದಾಹರಣೆಗೆ ನಾವೆಲ್ಲರೂ ಬಿಸಿ ನೀರನ್ನ ಸ್ನಾನ ಮಾಡುವುದು ನಮಗೆ ಒಳ್ಳೆಯದು ಎಂದು ತಿಳಿದು ತುಂಬಾ ಬಿಸಿ ಬಿಸಿ ನೀರನ್ನ ತಲೆಗೂ ಸ್ನಾನ ಮಾಡಿ ಬರುತ್ತೇವೆ. ಆದರೆ ಈ ರೀತಿ ಪ್ರತೀ ದಿನ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಶುರು ಆಗುತ್ತದೆ. ಹಾಗಾದ್ರೆ ನಮ್ಮ ದೇಹಕ್ಕೆ ಯಾವ ರೀತಿಯ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯದು, ಅದು ಬಿಸಿ ನಿರೋ, ಉಗುರು ಬೆಚ್ಚಗಿನ ನೀರೋ ಅಥವಾ ತನ್ನ ನೀರೋ ಅನ್ನೋದನ್ನ ನೋಡೋಣ.

ನಾವು ಪ್ರತೀ ದಿನ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನಮ್ಮ ತಲೆಯ ಕೂದಲು ಉದುರೋಕೆ ಆರಂಭ ಆಗುತ್ತದೆ. ಚಿಕಿತ್ಸೆಗಾಗಿ ಬಿಸಿ ನೀರನ್ನು ಬಳಸಬಹುದು. ನೋವುಗಳಿಗೆ, ಡಿಲೆವರಿ ಆದ ಸಂದರ್ಭದಲ್ಲಿ, ರೋಗಿಗಳಿಗೆ, ವಯಸ್ಸಾದವರಿಗೆ, ಚಿಕ್ಕ ಮಕ್ಕಳಿಗೆ ಉಗುರು ಬೆಚ್ಚಗಿನ ನೀರಿನ್ನು ಸ್ನಾನಕ್ಕೆ ಬಳಸಬಹುದೇ ಜೋರಾತು ತುಂಬಾ ಬಿಸಿ ನೀರು ಅಂತೂ ಅಲ್ಲವೇ ಅಲ್ಲ. ಹಾಗಿದ್ರೆ ನಮ್ಮ ದೇಹಕ್ಕೆ ಒಳ್ಳೆಯದು ಯಾವುದು? ಅಂತ ನೋಡುವುದಾದರೆ, ತಣ್ಣೀರ ಸ್ನಾನ. ಏನಾದ್ರು ವ್ಯಾಯಾಮ ಮಾಡಿ ತಣ್ಣೀರು ಸ್ನಾನ ಮಾಡಿದ್ರೆ, ದೇಹ ಚೈತನ್ಯದಿಂದ ಕೂಡಿರತ್ತೆ ಅದೇ ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ ಆ ಕ್ಷಣಕ್ಕೆ ಆರಾಮ ಎನಿಸಿದರೂ ನಂತರದ ಸಮಯದಲ್ಲಿ ಆಸಾಯ ಉಂಟಾಗುತ್ತದೆ. ನಾವಿಲ್ಲಿ ತಾತ್ಕಾಲಿಕ ಸಂತೋಷ ಮುಖ್ಯವೋ ಅಥವಾ ನಂತರದ ನಮ್ಮ ಆರೋಗ್ಯ ಮುಖ್ಯವೋ ಎಂದು ಗಮನಿಸದೆ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತೇವೆ. ಆದರೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ, ಚರ್ಮದ ಆರೋಗ್ಯ ಒಳ್ಳೆಯದಾಗಿ ಇರುತ್ತದೆ.

ತಣ್ಣೀರಿನ ಸ್ನಾನ ಮಾಡಿದರೆ ನಮ್ಮ ರಕ್ತ ನಾಲಗಳು ಹಿಗ್ಗುವುದು ಕುಗ್ಗುವುದು ಆಗುತ್ತದೆ ಇದರಿಂದ ರಕ್ತ ಸಂಚಾರ ವೃದ್ಧಿ ಆಗುತ್ತದೆ. ರಕ್ತ ಸಂಚಾರ ವೃದ್ಧಿ ಆದರೆ ಆ ಚರ್ಮದ ಆರೋಗ್ಯವೂ ಹೆಚ್ಚುತ್ತದೆ. ಕೂದಲಿನ ಆರೋಗ್ಯ, ಮುಖದ ಸೌಂದರ್ಯದ ಆರೋಗ್ಯ ಸಹ ಹೆಚ್ಚುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ.

ವೈರಸ್, ಶೀತ, ನೆಗಡಿ ಇರುವ ಸಂದರ್ಭದಲ್ಲಿ ಮಾತ್ರ ತಣ್ಣೀರಿನಿಂದ ಸ್ನಾನ ಮಾಡಿದರೆ ಆಗುವುದಿಲ್ಲ ಎನ್ನುವವರು ಮಾತ್ರ ಬಿಸಿ ನೀರಿನಲ್ಲಿ ಸ್ನಾನ ಮಾಡಬಹುದು. ಇಲ್ಲವಾದರೆ ಸಾಮಾನ್ಯ ದಿನಗಳಲ್ಲಿ ತಣ್ಣೀರ ಸ್ನಾನವೇ ಉತ್ತಮ. ಹಾಗಾಗಿ ಕೂದಲು ಉದುರುವುದ ತಡೆಯಲು, ಚರ್ಮದ ಆರೋಗ್ಯಕ್ಕಾಗಿ ತಣ್ಣೀರ ಸ್ನಾನವೇ ಉತ್ತಮ. ಪ್ರಕೃತಿ ಚಿಕಿತ್ಸೆಯಲ್ಲಿ ತಣ್ಣೀರ ಸ್ನಾನಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಹೊಟ್ಟೆಯ ರೋಗಗಳ ಸಮಸ್ಯೆ, PCOD ಸಮಸ್ಯೆ, ಕೊಬ್ಬು ಕರಗಿಸಲು ಸಹ ಸಹಾಯ ಆಗುತ್ತದೆ. ಹಾಗಾಗಿ ತಣ್ಣೀರಿನ ಸ್ನಾನ ಉತ್ತಮ.

By

Leave a Reply

Your email address will not be published. Required fields are marked *