ಭವ್ಯವಾದ ನಮ್ಮದೆ ಸ್ವಂತ ಮನೆ ಕಟ್ಟಬೇಕು ಎನ್ನುವ ಕನಸು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಮನೆ ಕಟ್ಟಲು ಒಳ್ಳೆಯ ಸಿಮೆಂಟ್, ಮರಳು ಇತ್ಯಾದಿ ಸಾಮಗ್ರಿಗಳನ್ನು ಬಳಸಬೇಕಾಗುತ್ತದೆ. ಸಿಮೆಂಟ್ ಇಲ್ಲದೆ ಮನೆ ಕಟ್ಟಲು ಸಾಧ್ಯವೆ ಇಲ್ಲ ನಮ್ಮ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಿಮೆಂಟ್ ಕಂಪನಿಗಳ ಲೀಸ್ಟ್ ನಲ್ಲಿ ಯಾವೆಲ್ಲಾ ಸಿಮೆಂಟ್ ಕಂಪನಿಗಳ ಹೆಸರು ಇದೆ, ಯಾವ ಕಂಪನಿ ಸಿಮೆಂಟ್ ಖರೀದಿಸಿದರೆ ಸೂಕ್ತ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ನಮ್ಮದೆ ಸ್ವಂತ ದೊಡ್ಡದಾದ ಮನೆ ಕಟ್ಟಬೇಕು ಎನ್ನುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಕನಸಿನ ಮನೆ ಕಟ್ಟಬೇಕಾದರೆ ಯಾವ ಕಂಪನಿ ಉತ್ತಮ ಎನ್ನುವುದು ಎಲ್ಲರಿಗೂ ಹೊಳೆಯುವ ಮೊದಲನೆ ಪ್ರಶ್ನೆಯಾಗಿದೆ. ಭಾರತ ದೇಶದಲ್ಲಿರುವ ಬಹುತೇಕ ಸಿಮೆಂಟ್ ಕಂಪನಿಗಳು ಸ್ಟ್ಯಾಂಡರ್ಡ್ ಮೆಂಟೇನ್ ಮಾಡಿಕೊಂಡು ಸಿಮೆಂಟ್ ಉತ್ಪಾದನೆ ಮಾಡುತ್ತದೆ ಆದ್ದರಿಂದ ಎಲ್ಲಾ ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಉತ್ತಮ ಕಂಪನಿಗಳಾಗಿವೆ.

ಇಂಡಿಯನ್ ಸಿಮೆಂಟ್ ಮೆನುಪೆಕ್ಚರ್ ನ ಟಾಪ್ ಲೀಸ್ಟ್ ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಇದೆ, 31% ನಷ್ಟು ಈ ಕಂಪನಿ ಸಿಮೆಂಟನ್ನು ಉತ್ಪಾದಿಸುತ್ತದೆ. ಎರಡನೆ ಸ್ಥಾನದಲ್ಲಿ ಅಂಬುಜಾ ಸಿಮೆಂಟ್ ಇದ್ದು 21% ನಷ್ಟು ಸಿಮೆಂಟ್ ಉತ್ಪಾದಿಸುತ್ತದೆ. ಮೂರನೆ ಸ್ಥಾನದಲ್ಲಿ ಎಸಿಸಿ ಸಿಮೆಂಟ್, 12% ರಷ್ಟು ಸಿಮೆಂಟ್ ಉತ್ಪಾದನೆಯನ್ನು ಈ ಕಂಪನಿ ಮಾಡುತ್ತದೆ.

ನಾಲ್ಕನೆ ಸ್ಥಾನದಲ್ಲಿ ಶ್ರೀ ಸಿಮೆಂಟ್ ಲಿಮಿಟೆಡ್ ಇದ್ದು, 10% ನಷ್ಟು ಸಿಮೆಂಟ್ ಉತ್ಪಾದನೆ ಮಾಡುತ್ತದೆ. 8% ಸಿಮೆಂಟ್ ದಾಲ್ಮಿಯಾ ಸಿಮೆಂಟ್ ಕಂಪನಿಯವರು ಮೆನುಪೆಕ್ಚರ್ ಮಾಡುತ್ತದೆ. ಬಿರ್ಲಾ ಕಾರ್ಪೊರೇಷನ್ ಲಿಮಿಟೆಡ್ 5% ನಷ್ಟು ಸಿಮೆಂಟ್ ಮೆನುಫೆಕ್ಚರ್ ಮಾಡುತ್ತದೆ. ಏಳನೆ ಸ್ಥಾನದಲ್ಲಿ ಇಂಡಿಯಾ ಸಿಮೆಂಟ್ ಲಿಮಿಟೆಡ್ ಇದ್ದು, ಕೊನೆಯದಾಗಿ ಎಂಟನೆ ಸ್ಥಾನದಲ್ಲಿ ರಾಮ್ಕೋ ಸಿಮೆಂಟ್ ಲಿಮಿಟೆಡ್ ಕಂಪನಿ ಬರುತ್ತದೆ. ಹೆಚ್ಚಾಗಿ ಮಾರಾಟವಾಗುವ ಸಿಮೆಂಟ್ ಯಾವುದೆಂದರೆ ಅಲ್ಟ್ರಾಟೆಕ್ ಸಿಮೆಂಟ್, ಅಂಬುಜಾ ಸಿಮೆಂಟ್ ಹಾಗೂ ಎಸಿಸಿ ಸಿಮೆಂಟ್. ಹೆಚ್ಚು ಸ್ಟಾಕ್ ಇರುವ ಕಂಪನಿಯ ಸಿಮೆಂಟ್ ಖರೀದಿಸುವುದರಿಂದ ನಮಗೆ ನಷ್ಟವಾಗುತ್ತದೆ ಆದ್ದರಿಂದ ಹೆಚ್ಚು ಮಾರಾಟವಾಗುವ ಕಂಪನಿಗಳಿಂದ ಸಿಮೆಂಟ್ ಖರೀದಿಸುವುದು ಸೂಕ್ತ.

ಸಿಮೆಂಟ್ ಖರೀದಿಸಿ ಬಹಳ ದಿನಗಳವರೆಗೆ ಬಳಸದೆ ಇಡಬಾರದು ಇದರಿಂದ ಸಿಮೆಂಟ್ ಗಟ್ಟಿಯಾಗಿ ಮರಳಿಗೆ ಸರಿಯಾಗಿ ಹಿಡಿದುಕೊಳ್ಳುವುದಿಲ್ಲ ಆದ್ದರಿಂದ ಸಿಮೆಂಟ್ ಖರೀದಿಸಿ ತಕ್ಷಣ ಬಳಸುವುದು ಉತ್ತಮ. ಮನೆ ಕಟ್ಟುವಾಗ ಒಳ್ಳೆಯ ಕಂಪನಿಯ ಸಿಮೆಂಟ್ ಖರೀದಿಸುವುದರ ಜೊತೆಗೆ ಉತ್ತಮವಾದ ಮರಳನ್ನು ಖರೀದಿಸಬೇಕು ಒಂದು ವೇಳೆ ಮರಳು ಅಥವಾ ಸಿಮೆಂಟ್ ಉತ್ತಮವಾಗಿಲ್ಲದಿದ್ದರೂ ಗೋಡೆಗಳು ಬಿರುಕು ಬರುವ ಸಾಧ್ಯತೆಗಳಿರುತ್ತವೆ. ಒಟ್ಟಿನಲ್ಲಿ ಬಹುಬೇಗನೆ ಮಾರಾಟವಾಗುವ ಕಂಪನಿಯು ತಯಾರಿಸುವ ಸಿಮೆಂಟನ್ನು ಖರೀದಿಸುವುದು ಉತ್ತಮ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *