ಭಾರತ ದೇಶದಾದ್ಯಂತ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಸ್ವಂತ ಅಂದರೆ ಮಂಜೂರಾದ ಜಮೀನು, ಅತಿಕ್ರಮಣ ಜಮೀನು ಇದ್ದಂತೆ ಗೋಮಾಳ ಜಮೀನನ್ನು ನೋಡಬಹುದು. ಗೋಮಾಳ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ನಮ್ಮ ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ಹೆಚ್ಚಿನ ಸಂಖ್ಯೆಯ ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಕೃಷಿ ಕೆಲಸಗಳಿಗೆ ರೈತರು ಜಾನುವಾರುಗಳನ್ನು ಹೆಚ್ಚಾಗಿ ಬಳಕೆ ಮಾಡುವುದು ರೂಢಿಯಲ್ಲಿದೆ. ಕೆಲವು ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಾರೆ. ಮನುಷ್ಯನಿಗೆ ಬದುಕುವ ಹಕ್ಕು ಇರುವಂತೆ ಜಾನುವಾರುಗಳಿಗೆ ಬದುಕುವ ಹಕ್ಕು ಇರುತ್ತದೆ. ಜಾನುವಾರುಗಳ ರಕ್ಷಣೆಗೆ ಮತ್ತು ಅವುಗಳಿಗೆ ಹುಲ್ಲಿಗಾಗಿ ಗೋಮಾಳ ಜಮೀನು ಎಂದು ಸರ್ಕಾರ ಮಾಡಿರುತ್ತದೆ.
ಗೋವುಗಳು ಮೇಯಲು ಕಾಯ್ದಿರಿಸಿದ ಹುಲ್ಲುಗಾವಲು ಪ್ರದೇಶವನ್ನು ಗೋಮಾಳ ಎನ್ನುವರು. ಗೋಮಾಳ ಸರ್ಕಾರಕ್ಕೆ ಸೇರಿರುತ್ತದೆ. ಗೋಮಾಳವನ್ನು ಭಗರ್ ಹುಕುಂ ಲ್ಯಾಂಡ್ ಎಂತಲೂ ಕರೆಯುತ್ತಾರೆ. ಗೋಮಾಳ ಪ್ರದೇಶಗಳಿಗೆ ಪ್ರತ್ಯೇಕವಾದ ಕಾಯಿದೆ, ಕಾನೂನುಗಳಿವೆ ಅಲ್ಲದೆ ಭೂ ಮಂಜೂರಾತಿ ಸಮಿತಿಗಳಿವೆ. ಸ್ವಂತ ಜಮೀನು ಹೊಂದಿರದೆ ಇರುವ ರೈತರು ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದು ತಮ್ಮ ಕುಟುಂಬವನ್ನು ಆ ಭೂಮಿಯನ್ನು ಅವಲಂಬಿಸಿ ನಿರ್ವಹಿಸುತ್ತಿದ್ದರೆ ಅಂತಹ ಜಮೀನಿನನ್ನು ಸಕ್ರಮ ಮಾಡಿಕೊಳ್ಳಬಹುದು.
ಜಿಲ್ಲಾಧಿಕಾರಿ ಕೆಲವು ನಿಯಮಗಳಿಗೆ ಒಳಪಟ್ಟು ಒಂದು ಗ್ರಾಮದಲ್ಲಿ 100ಜಾನುವಾರುಗಳಿದ್ದರೆ 12ಹೆಕ್ಟೇರ್ ಜಮೀನನ್ನು ಗೋಮಾಳವನ್ನಾಗಿ ಕಾಯ್ದಿಟ್ಟು ಉಳಿದ ಜಮೀನನ್ನು ರೈತರ ಹಿನ್ನಲೆಯನ್ನು ಪರಿಶೀಲಿಸಿ ಮಂಜೂರಾತಿ ಮಾಡಬಹುದು. ಭೂ ನ್ಯಾಯ ಮಂಡಳಿ ಎಂದು ಇರುತ್ತದೆ ಅಥವಾ ನಾಡಕಛೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಗೋಮಾಳ ಸಾರ್ವಜನಿಕ ಜಮೀನಾಗಿದ್ದು ಅದನ್ನು ರಕ್ಷಿಸುವ ಕರ್ತವ್ಯ ನಮ್ಮೆಲ್ಲರದಾಗಿರುತ್ತದೆ. ಗೋಮಾಳ ಜಮೀನನ್ನು ಯಾರಿಗೂ ಮಾರಾಟ ಮಾಡುವಂತಿಲ್ಲ.
ಕೃಷಿ ಹೊರತುಪಡಿಸಿ ಬೇರೆ ಯಾವುದೆ ಕೆಲಸಕ್ಕೆ ಬಳಸುವಂತಿಲ್ಲ. ಗೋಮಾಳ ಜಮೀನನ್ನು ಸಾರ್ವಜನಿಕ ಉದ್ದೇಶಗಳಿಗೆ ಮತ್ತು ಕಂದಾಯ ಗ್ರಾಮಗಳನ್ನು ಸೃಷ್ಟಿಸಲು ಬಳಸಬಹುದಾಗಿದೆ. ಗೋಮಾಳ ಜಮೀನು ಅನುಪಯೋಗಿ ಅಥವಾ ಸರ್ಕಾರಿ ಜಮೀನು ಎಂದು ಹೇಳುತ್ತಾರೆ. ತಾಯಿಯ ಹಾಲಿನ ನಂತರ ನಾವು ಗೋಮಾತೆಯ ಹಾಲನ್ನು ಕುಡಿಯುತ್ತೇವೆ ಹಸುವಿನ ಹಾಲು ಅಮೃತಕ್ಕೆ ಸಮಾನ ಅಂತಹ ಹಸುಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ಗೋಮಾಳ ಜಮೀನನ್ನು ರಕ್ಷಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430