ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡಿ ದೇಶದಲ್ಲಿಯೆ ಆರ್ ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವ ಸಾಕಷ್ಟು ಜನರಿದ್ದಾರೆ. ಐಪಿಎಲ್ ಸಮಯದಲ್ಲಿ ಆರ್ ಸಿಬಿ ಜೆರ್ಸಿ ಹಾಕಿಕೊಂಡು ಬೆಂಬಲ ನೀಡುವವರು ಬಹಳಷ್ಟು ಜನರು ಸಿಗುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ರಾಜೀನಾಮೆ ನೀಡುತ್ತಿರುವ ವಿಷಯ ಹೊರಬಿದ್ದಿದೆ ಹಾಗೆಯೆ ಮುಂದಿನ ನಾಯಕರು ಯಾರಾಗುತ್ತಾರೆ ಎಂಬ ಚರ್ಚೆ ಎಲ್ಲಾಕಡೆ ಕಂಡು ಬರುತ್ತಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಆರ್ ಸಿಬಿ ಎಂದು ಕರೆಯಲ್ಪಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಆರ್ ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಮುಂದಿನ ಸೀಸನ್ ವೇಳೆಗೆ ನಾನು ಆರ್ ಸಿಬಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದೇನೆ ಎಂದು ವಿರಾಟ್ ಕೊಹ್ಲಿ ಘೋಷಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ರಾಜೀನಾಮೆ ನೀಡುವ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡದ ನಾಯಕನ ಸ್ಥಾನಕ್ಕೆ ಅನೇಕರ ಹೆಸರು ಕೇಳಿಬರುತ್ತಿದೆ. ಎಬಿಡಿ, ಗ್ಲೈನ್ ಮ್ಯಾಕ್ಸವೆಲ್, ಕೆ ಎಲ್ ರಾಹುಲ್, ಕಿರಾನ್ ಪೊಲಾರ್ಡ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಆರ್ ಸಿಬಿ ತಂಡದ ಬೌಲರ್ ಯಜ್ವೆಂದ್ರ ಚಹಲ್ ಹೆಸರು ಈಗ ಈ ಸಾಲಿಗೆ ಸೇರಿದೆ. ಐಪಿಎಲ್ 2022 ರಲ್ಲಿ ನಾಯಕರಾಗಿ ಆರ್ ಸಿಬಿ ತಂಡವನ್ನು ಯಾರು ಮುನ್ನಡೆಸಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೆ ನಡೆದಿದೆ. ಕಳೆದ ಆರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಯಜ್ವೆಂದ್ರ ಚಹಲ್ ಪ್ರಮುಖ ಪಾತ್ರವಹಿಸಿದ್ದಾರೆ.

106 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಇರುವ ಆಟಗಾರರ ಜೊತೆಗೆ ಆಡಿರುವ ಅನುಭವವನ್ನು ಯಜ್ವೆಂದ್ರ ಚಹಲ್ ಹೊಂದಿದ್ದಾರೆ. ಹೀಗೆ ಕೆಲವು ಕಾರಣಗಳಿಂದ ಯಜ್ವೆಂದ್ರ ಚಹಲ್ ಆರ್ ಸಿಬಿ ತಂಡದ ಮುಂದಿನ ನಾಯಕರಾಗಲಿ ಎಂಬುದು ಹಲವರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಆರ್ ಸಿಬಿ ತಂಡದ ನಾಯಕ ಯಾರಾದರೂ ತಂಡದ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಕನ್ನಡಿಗರು ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ನೀಡುತ್ತಾರೆ. ಆರ್ ಸಿಬಿ ಮೇಲಿನ ಪ್ರೀತಿ ಹೀಗೆ ಮುಂದುವರೆಯಲಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *