ಭೂಮಿಯ ಮೇಲೆ ಯಾವ ರೀತಿಯ ಕಟ್ಟಡಗಳನ್ನು ಬೇಕಾದರೂ ಕಟ್ಟಬಹುದು. ಆದರೆ ಇದೇ ರೀತಿ ಬ್ರಿಡ್ಜ್ ಗಳನ್ನು ನೀರಿನ ಮೇಲೆ ಕಟ್ಟುವುದು ಸುಲಭವಾದ ಮಾತಲ್ಲ. ಸಮುದ್ರದ ಕೊನೆಯ ಭಾಗದಲ್ಲಿ ಸ್ವಿಮ್ಮಿಂಗ್ ಫೂಲ್ ಗಳನ್ನು ಕಟ್ಟಿರುತ್ತಾರೆ. ಆದರೆ ಸಮುದ್ರದ ಮಧ್ಯಭಾಗದಲ್ಲಿ ಕಟ್ಟಿರುವುದಿಲ್ಲ. ನೀರಿನ ಮೇಲೆ ಸೇತುವೆಗಳನ್ನು ಹೇಗೆ ಕಟ್ಟುತ್ತಾರೆ ಎನ್ನುವುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬ್ರಿಡ್ಜ್ ನಲ್ಲಿ ಮೂರು ಹಂತಗಳು ಇರುತ್ತವೆ. ಬೀಮ್ ಬ್ರಿಡ್ಜ್, ಸಸ್ಪೆಶನ್ ಬ್ರಿಡ್ಜ್ ಮತ್ತು ಹಾರ್ಸ್ ಬ್ರಿಡ್ಜ್ ಎನ್ನುವುದು. ನೀರಿನ ಮೇಲೆ ಬ್ರಿಡ್ಜ್ ಕಟ್ಟುವಾಗ ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಮೊದಲು ನೀರಿನ ಆಳ ಎಷ್ಟು ಇದೆ ಎಂದು ನೋಡಬೇಕು. ಎರಡನೆಯದಾಗಿ ನೀರಿನ ವೇಗವನ್ನು ಪರೀಕ್ಷೆ ಮಾಡಿಕೊಳ್ಳಬೇಕು. ಸೈಜ್ ನ ಸಾಮರ್ಥ್ಯವನ್ನು ನೋಡಿಕೊಳ್ಳಬೇಕು. ಬ್ರಿಡ್ಜ್ ಲೋಡ್ ನ ಬಗ್ಗೆ ಚೆಕ್ ಮಾಡಿಕೊಳ್ಳಬೇಕು. ಇದಕ್ಕೆಲ್ಲಾ ಒಂದು ರಿಪೋರ್ಟ್ ತಯಾರಾದ ನಂತರ ನಿರ್ಮಾಣವನ್ನು ಶುರು ಮಾಡಬೇಕು. ನೀರಿನಲ್ಲಿ ಬ್ರಿಡ್ಜ್ ಫಿಲ್ಲರ್ಸ್ ಹಾಕಲು ಬ್ರಿಡ್ಜ್ ಗೆ ಕಾಪಾರ್ಡ್ಯಾಮ್ ನ್ನು ಬಳಸುತ್ತಾರೆ.
ಇವು ಆಯತ ಮತ್ತು ಚೌಕ ಆಕಾರದಲ್ಲಿ ಇರುತ್ತವೆ. ಇದು ತುಂಬಾ ಗಟ್ಟಿಯಾಗಿ ಇರುತ್ತದೆ. ನೀರಿನಿಂದ ಒಂದು ಹನಿ ನೀರು ಸಹ ಹೊರಗೆ ಬರುವುದಿಲ್ಲ. ಕಾಪಾರ್ಡ್ಯಾಮ್ ನ್ನು ಕ್ರೇನ್ ಮೂಲಕ ನೀರಿಗೆ ಬಿಡಲಾಗುತ್ತದೆ. ಇದನ್ನು ಕೆಲವು ಮಿಷನ್ ಗಳನ್ನು ಬಳಸಿ ಕೂಡಿಸುತ್ತಾರೆ. ಕಾಪಾರ್ಡ್ಯಾಮ್ ನಲ್ಲಿರುವ ನೀರನ್ನು ಮೋಟಾರ್ ಬಳಸಿ ಹೊರಗೆ ತೆಗೆಯುತ್ತಾರೆ. ಆಗ ನೀರು ಇರುವುದಿಲ್ಲ. ನಿರ್ಮಾಣದ ಕಾರ್ಯವನ್ನು ಶುರು ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಕಾಪಾರ್ಡ್ಯಾಮ್ ಹಾಕುವುದು ಬಹಳ ಕಷ್ಟವಾಗಿರುತ್ತದೆ. ಹಾಗಾಗಿ ಇಂಜಿನಿಯರ್ ಗಳು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಹೆಚ್ಚಾಗಿ ಕಲ್ಲುಗಳನ್ನು ಹಾಕುತ್ತಾರೆ. ದೊಡ್ಡದಾಗಿ ಇರುವ ಕಾಪಾರ್ಡ್ಯಾಮ್ ಗಳನ್ನು ಶಿಪ್ ಗಳ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಆದ್ದರಿಂದ ನೀರಿನಲ್ಲಿ ಬ್ರಿಡ್ಜ್ ಕಟ್ಟುವುದು ಸುಲಭವಾದ ಮಾತಲ್ಲ.