ವಿದೇಶಿ ಬ್ರಾಂಡ್ ಗಳನ್ನೂ ಹಿಂದಕ್ಕಿದ, ಭಾರತದ ಟಾಪ್ ಬ್ರಾಂಡ್ ಗಳಿವು

0 8

ಹೆಚ್ಚಾಗಿ ಎಲ್ಲರೂ ಬ್ರಾಂಡೆಡ್ ವಸ್ತುಗಳನ್ನೇ ಬಳಸಲು ಇಚ್ಛಿಸುತ್ತಾರೆ. ಬ್ರಾಂಡ್ ಇದ್ದರೆ ಉತ್ತಮ ಬಾಳಿಕೆ ಬರುತ್ತದೆ ಮತ್ತು ನೋಡಲು ಸುಂದರವಾಗಿ ಕಾಣುತ್ತದೆ ಎನ್ನುವುದು ಒಂದು ಕಾರಣ. ಜನರಲ್ಲಿ ಅವರಿಗೆ ಯಾವ ಬ್ರಾಂಡ್ ಇಷ್ಟ ಎಂದು ಕೇಳಿದಾಗ ಹೆಚ್ಚಿನ ಜನರು ವಿದೇಶದ ವಸ್ತುಗಳನ್ನು ಹೇಳುತ್ತಾರೆ ಆದರೆ ಸ್ವದೇಶಿ ವಸ್ತುಗಳು ಕೂಡ ಈ ವಿದೇಶಿ ಬ್ರಾಂಡ್ ಗಳನ್ನು ಹಿಂದಿಕ್ಕುವಂತಹ ಶಕ್ತಿಯನ್ನು ಕೂಡಾ ಹೊಂದಿದೆ. ಹಾಗಾಗಿ ನಾವು ಈ ಲೇಖನದ ಮೂಲಕ ಸ್ವದೇಶಿ ಬ್ರಾಂಡೆಡ್ ವಸ್ತುಗಳು ಯಾವುದು ಎಂದು ಅವುಗಳ ಪರಿಚಯವನ್ನು ಮಾಡಿಕೊಳ್ಳೊಣ.

ಮೊದಲಿಗೆ ಸ್ವದೇಶಿ ಬ್ರಾಂಡ್ ಗಳಲ್ಲಿ ಒಂದಾದ ಟಾಟಾ ಗ್ರೂಪ್. ಪ್ರತಿಯೊಬ್ಬ ಭಾರತೀಯನಿಗೂ ಟಾಟಾ ಗ್ರೂಪ್ ಪರಿಚಿತ. 1860 ರಲ್ಲಿ ಈ ಟಾಟಾ ಗ್ರೂಪ್ ಅನ್ನು ಜೆಮ್ ಶೇರ್ ಜಿ ಟಾಟಾ ಅವರು ಆರಂಭಿಸುತ್ತಾರೆ. ಭಾರತದ ಎಲ್ಲಾ ಕ್ಷೇತ್ರದಲ್ಲಿ ಟಾಟಾ ಗ್ರೂಪ್ ನ ಛಾಪು ಕಾಣಿಸುತ್ತಿದ್ದು ಆಟೋಮೊಬೈಲ್, ಐಟಿ, ಕೆಮಿಕಲ್ ಕಂಪನಿಗಳು ಇದೆ. ಇಷ್ಟೇ ಅಲ್ಲದೇ ಕೃಷಿ ಕ್ಷೇತ್ರದಲ್ಲಿ ಕೂಡ ಇವರ ಕೊಡುಗೆ ಇದೆ. ಇಂಜನಿಯರಿಂಗ್, ಸ್ಟೀಲ್ ಇವುಗಳಲ್ಲಿ ಟಾಟಾ ಕಂಪನಿ ಇದೆ‌. ಸ್ವದೇಶಿಯವರನ್ನು ಅಷ್ಟೆ ಅಲ್ಲದೆ ವಿದೇಶಿಯರನ್ನು ಸೆಳೆದಿದೆ. ಜಗತ್ತಿನ ಪ್ರತಿಯೊಂದು ಕಡೆಯಲ್ಲಿ ಟಾಟಾ ಗ್ರೂಪ್ ಹೆಸರು ಮಾಡಿದೆ. 7 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳು ಕೆಲಸ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಟಾಟಾ ಕಂಪನಿ ಗಳಿಸಿದಂತೆ ದಾನವನ್ನು ಕೂಡಾ ಸಾಕಷ್ಟು ಮಾಡುತ್ತಾ ಬಂದಿದೆ. ಎಷ್ಟೊ ಜನರಿಗೆ ಸಹಾಯಹಸ್ತ ಚಾಚಿದೆ. ಪ್ರತಿಯೊಬ್ಬ ಭಾರತೀಯನಿಗೂ ಟಾಟಾ ಕಂಪನಿ ಭಾರತದ್ದು ಎಂಬ ಹೆಮ್ಮೆ ಇದೆ. ಬ್ರಾಂಡ್ ನ ಮತ್ತೊಂದು ಹೆಸರು ರಾಯಲ್ ಎನ್ ಫೀಲ್ಡ್. ರಾಯಲ್ ಎನ್ ಫೀಲ್ಡ್ ನ ಗತ್ತು, ಗಾಂಭಿರ್ಯ ಬೇರೆಯೆ ಇದೆ. 1901 ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪನಿ ಪ್ರಾರಂಭವಾಗುತ್ತದೆ. ತನ್ನ ವೈಶಿಷ್ಟ್ಯತೆಯಿಂದ ತನ್ನ ಮೇಲಿನ ಕ್ರೇಜ್ ಅನ್ನು ಹೆಚ್ಚಿಸುತ್ತಲೆ ಬರುತ್ತಿದೆ ರಾಯಲ್ ಎನ್ ಫೀಲ್ಡ್ ನ ಬುಲೆಟ್ ವರ್ಷನ್. ಸ್ವಾತಂತ್ರ್ಯ ಪಡೆದಾಗ ಸೈನ್ಯಕ್ಕೆ ಬೇಕೆಂದು ಉತ್ತಮ ಬೈಕ್ ಹುಡುಕುತ್ತಿದ್ದ ಸರ್ಕಾರಕ್ಕೆ ರಾಯಲ್ ಎನ್ ಫೀಲ್ಡ್ ಕಂಪನಿ ಕಾಣಿಸುತ್ತದೆ. 800 ಬೈಕ್ ಆರ್ಡರ್ ಸರ್ಕಾರ ರಾಯಲ್ ಎನ್ ಫೀಲ್ಡ್ ಕಂಪನಿಗೆ ನೀಡುತ್ತದೆ. ಮೊದಲು ವಿದೇಶಿ ಕಂಪನಿಯಾಗಿದ್ದ ಇದನ್ನು ಮದ್ರಾಸ್ ಮೊಟಾರ್ಸ್ ಎಂಬ ಭಾರತದ ಕಂಪನಿ ಕೊಂಡುಕೊಳ್ಳುತ್ತದೆ. ಅಲ್ಲಿಂದ ಇದು ಭಾರತದ ಕಂಪನಿಯಾಗಿ ಹೊರ ಹೊಮ್ಮಿ ಈಗ ಮೆಡ್ ಇನ್ ಇಂಡಿಯಾ ಆಗಿ ರಾಯಲ್ ಎನ್ ಫೀಲ್ಡ್ ಬುಲೆಟ್ ಜಗತ್ತಿನ ಮೂಲೆ ಮೂಲೆಗಳಲ್ಲಿ ಹೆಸರು ಮಾಡಿದೆ. ಭಾರತದ ಮತ್ತೊಂದು ಕಂಪನಿ ಪೀಟರ್ ಇಂಗ್ಲೆಂಡ್. ಭಾರತದ ಕಂಪನಿ ಅಲ್ಲ ಇಂಗ್ಲೆಂಡ್ ಕಂಪನಿ ಅಂದುಕೊಂಡರೆ ಅದು ಸುಳ್ಳು. ಸ್ಥಾಪನೆಯಾದದ್ದು ಇಂಗ್ಲೆಂಡ್ ನಲ್ಲಿ ಆದರೂ ಈಗ ಇದು ಭಾರತದ ಕಂಪನಿಯಾಗಿದೆ. ಬ್ರಿಟಿಷ್ ಸೇನೆಗೆ ಬಟ್ಟೆ ತಯಾರಿ ಮಾಡಿ ಕೊಡುತ್ತಿದ್ದ ಕಂಪನಿ ಇದಾಗಿತ್ತು. ಆದರೆ ಈಗ ಭಾರತಿಯರ ಕೈಯಲ್ಲಿ ಇದೆ. ಹೀಗೆ ವಿದೇಶಿ ಕಂಪನಿಯನ್ನು ಆದಿತ್ಯ ಬಿರ್ಲಾ ಅವರ ಗಾರ್ಮೆಂಟ್ ಕಂಪನಿಯೊಂದು ಖರೀದಿಸಿದೆ. ದೊಡ್ಡ ಬ್ರಾಂಡ್ ಆಗಿ ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಗಳಿಸಿದೆ. ಭಾರತದಲ್ಲಿಯೆ ರೆಡಿಯಾದ ಬಟ್ಟೆಯನ್ನು ಇಲ್ಲಿ ಬಳಸುತ್ತಾರೆ. ವಿಶ್ವದ 380 ನಗರಗಳಲ್ಲಿ ಪೀಟರ್ ಇಂಗ್ಲೆಂಡ್ ಹೆಸರು ಗಳಿಸಿದೆ.

ಎಷ್ಟೊ ಜನರಿಗೆ ಈ ಕಂಪನಿ ಭಾರತದ್ದು ಎಂದು ತಿಳಿದೆ ಇಲ್ಲ. ಇಂಥದೊಂದು ದೊಡ್ಡ ಕಂಪನಿಯ ಹೆಸರು ಜಾಗ್ವಾರ್. ಭಾರತದ ಟಾಟಾ ಮೋಟಾರ್ಸ್ ಅವರು 2008 ರಲ್ಲಿ ಜಾಗ್ವಾರ್ ಅನ್ನು ಖರೀದಿಸಿದೆ. ಮೊದಲು ಜಾಗ್ವಾರ್ ಫೋರ್ಡ್ ಕಂಪನಿಯ ಅಧೀನದಲ್ಲಿ ಇದ್ದಿತ್ತು. ಈಗ ಪರಿಪೂರ್ಣವಾಗಿ ಭಾರತೀಯ ಕಂಪನಿ ಆಗಿದೆ. ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ ಮಾರಾಟ ಮಾಡುವ ಈ ಕಾರ್ ಭಾರತದ್ದು. ಭಾರತದ ಬ್ರಾಂಡ್ ಕಂಪನಿಗಳಲ್ಲಿ ಎಂ.ಆರ್.ಎಫ್ ಕೂಡಾ ಒಂದು. ಇದು ಟೈಯರ್ ಗಳ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಮದ್ರಾಸ್ ರಬ್ಬರ್ ಫ್ಯಾಕ್ಟರಿ ಎಂಬುದು ಎಂ.ಆರ್.ಎಫ್ ನ ಅರ್ಥ. ಇದು ತುಂಬಾ ಜನರಿಗೆ ತಿಳಿದಿಲ್ಲ. ಆರಂಭದಲ್ಲಿ ಬಲೂನ್ ತಯಾರು ಮಾಡಿ ಮಾರುತ್ತಿದ್ದ ಈ ಕಂಪನಿ ಚೆನ್ನೈ ನಲ್ಲಿ ಸ್ಥಾಪನೆಯಾಗಿತ್ತು. ತದನಂತರದಲ್ಲಿ ರಬ್ಬರ್ ಸಂಬಂಧಿ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ. ಈಗ ಟೈಯರ್ ಕ್ಷೇತ್ರದ ಚರ್ಕವರ್ತಿ ಈ ಎಂ.ಆರ್.ಎಫ್ ಕಂಪನಿ.
ಈ ಕಂಪನಿಯ ಹೆಸರು ವಿದೇಶಿ ಕಂಪನಿಯಂತೆ ಅನಿಸಿದರೂ ಭಾರತದ ಕಂಪನಿ ಅದು ಬೇರೆ ಯಾವುದು ಅಲ್ಲ ಲ್ಯಾಕ್ಮೆ. ಭಾರತದ ಪುರಾತನ ಸೌಂದರ್ಯವರ್ಧಕ ಕಂಪನಿ ಈ ಲಾಕ್ಮೆ. ಈ ಕಂಪನಿ 1952 ರಲ್ಲಿ ಸ್ಥಾಪನೆ ಮಾಡಲಾಗಿದೆ. ಅಲ್ಲಿಂದ ಇಲ್ಲಿಯ ವರೆಗೂ ಸೌಂದರ್ಯ ವರ್ಧಕಗಳ ತಯಾರಿಕೆ ಮಾಡುತ್ತಿರುವ ಈ ಕಂಪನಿ ಈಗ ವಿಶ್ವದ ಮೂಲೆ ಮೂಲೆಗೂ ತಿಳಿದಿದೆ. ಲಾಕ್ಮೆ ಹಿಂದೂಸ್ತಾನ್ ಯೂನಿವರ್ಸಲ್ ಕಂಪನಿಯ ಸೌಂದರ್ಯವರ್ಧಕ ಕಂಪನಿ. ನಂಬರ್ ಒನ್ ಬ್ರಾಂಡ್ ಆಗಿ ಹೆಸರಿಸಿಕೊಂಡಿದೆ. ಭಾರತದ ಮತ್ತೊಂದು ಕಂಪನಿ ಗೋದ್ರೆಜ್ ಗ್ರೂಪ್. 1897 ರಲ್ಲಿ ಸ್ಥಾಪನೆ ಆದ ಪುರಾತನ ಭಾರತೀಯ ಕಂಪನಿ ಗೋದ್ರೆಜ್. ಸಮಯ ಕಳೆದಂತೆ ಈ ಕಂಪನಿಯು ಬೆಳೆಯುತ್ತಾ ಸಾಗಿತು. ಮಹಾರಾಷ್ಟ್ರದ ಮುಂಬಯಿ ನಲ್ಲಿ ಗೋದ್ರೆಜ್ ಕಂಪನಿಯ ಪ್ರಧಾನ ಕಚೇರಿ ಇದೆ. ಟಾಟಾ ಕಂಪನಿಯಂತೆ ಗೋದ್ರೆಜ್ ಕಂಪನಿ ಕೂಡ ಹಲವಾರು ವಸ್ತುಗಳನ್ನು ತಯಾರಿಸುತ್ತದೆ. ಎಲೆಕ್ಟ್ರಾನಿಕ್, ಕೃಷಿ, ಸ್ಪೇಸ್, ರಿಯಲ್ ಎಸ್ಟೇಟ್, ಫರ್ನಿಚರ್, ಕನ್ ಸ್ಟ್ರಕ್ಷನ್ ಹೀಗೆ ಹಲವಾರು ವಿಧದ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದೆ. ಗೋದ್ರೆಜ್ ಹೆಸರಿನ ಖ್ಯಾತಿ ಜಗತ್ತಿನಾದ್ಯಂತ ಇದೆ.

ಭಾರತದ ಮತ್ತೊಂದು ಕಂಪನಿ ಹೀರೋ ಮೋಟಾರ್ಸ್. 1984 ರಲ್ಲಿ ಹೀರೋ ಹೊಂಡಾ ಎಂಬ ಹೆಸರಿನಿಂದ ಪ್ರಾರಂಭವಾಗುತ್ತದೆ. ಹೀರೊ ಎಂಬ ಹೆಸರಿನೊಂದಿಗೆ ಸೈಕಲ್ ತಯಾರಿಸುತ್ತಿದ್ದ ಈ ಕಂಪನಿ ಜಪಾನಿನ ಹೊಂಡಾ ಕಂಪನಿಯೊಂದಿಗೆ ಕೈ ಜೋಡಿಸಿ ಹೀರೋ ಹೊಂಡವಾಗಿ ಬದಲಾಗಿತ್ತು. ನಂತರ ಬೈಕ್ ಗಳನ್ನು ತಯಾರಿಸುವ ಕೆಲಸಕ್ಕೆ ಕೈ ಹಾಕಿತ್ತು. ಭಾರತದ ಹೀರೋ ಕಂಪನಿ ಹಾಗೂ ಹೊಂಡಾ ಕಂಪನಿ 2010 ರಲ್ಲಿ ಬೇರೆ ಬೇರೆ ಆದ ಮೇಲೂ ಮೊದಲಿಗೆ ಇದ್ದಂತ ಹೆಸರನ್ನು ಉಳಿಸಿಕೊಂಡಿತ್ತು. ಜಗತ್ತಿನಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಬೈಕ್ ತಯಾರಿಸುವ ಕಂಪನಿ ಎಂದು ಹೀರೊ ಕರೆಸಿಕೊಂಡಿದೆ. ಮಹಿಂದ್ರಾ ಆಟೋ ಮೊಬೈಲ್ ಭಾರತದ ಅತ್ಯಂತ ಜನಪ್ರಿಯ ಮಲ್ಟಿ ನ್ಯಾಷನಲ್ ಆಟೋಮೊಬೈಲ್ ಕಂಪನಿ. ಮಹೀಂದ್ರಾ ಆಟೊಮೊಬೈಲ್ ಕಂಪನಿ 1945 ರಲ್ಲಿ ಸ್ಥಾಪನೆ ಆಗಿದೆ. ಜಗದೀಶ್ ಚಂದ್ರ ಮಹೀಂದ್ರ, ಮಲ್ಲಿಕ್ ಗುಲಾಮ್ ಮೊಹಮ್ಮದ್, ಕೈಲಾಶ್ ಚಂದ್ರ ಮಹೀಂದ್ರ ಮೂವರು ಸೇರಿ ಈ ಕಂಪನಿ ಸ್ಥಾಪಿಸಿದರು. ಮಹೀಂದ್ರ ಆ್ಯಂಡ್ ಮೊಹಮ್ಮದ್ ಎಂಬ ಹೆಸರು ಈ ಕಂಪನಿಗೆ ಇತ್ತು. ಮಲ್ಲಿಕ್ ಗುಲಾಮ್ ಪಾಕಿಸ್ತಾನದ ವಿಭಜನೆ ಆದಾಗ ಪಾಕಿಸ್ತಾನಕ್ಕೆ ಹೋಗುತ್ತಾರೆ. ನಂತರ ಈ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಎಂದು ಬದಲಾಯಿಸುತ್ತಾರೆ. ಮೊದಲು ಸ್ಟೀಲ್ ಉತ್ಪಾದನೆ ಮಾಡುತ್ತಿದ್ದ ಮಹೀಂದ್ರ ಕಂಪನಿ ಆಟೋಮೊಬೈಲ್ ಕ್ಷೇತ್ರದ ಕಡೆ ಗಮನ ಹರಿಸಿತು. ಕೆಲವೆ ವರ್ಷಗಳಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಉನ್ನತ ಹೆಸರು ಪಡೆಯುತ್ತದೆ.‌ ಮಹೀಂದ್ರಾ ಶೋರೂಮ್ ಜಗತ್ತಿನ ಎಲ್ಲೆಡೆ ಕಾಣಸಿಗುತ್ತದೆ. ಭಾರತದ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ವಿಪ್ರೋ ಲಿಮಿಟೆಡ್ ಕೂಡ ಒಂದು. ಮೊಹಮ್ಮದ್ ಹಾಶಿಮ್ ಪ್ರೇಮ್ ಜಿ 1945 ರಲ್ಲಿ ಈ ಕಂಪನಿಯ ಸ್ಥಾಪನೆ ಮಾಡಿದರು. ಮೊದಲಿಗೆ ರೀಪೈನ್ಡ್ ಆಯಿಲ್ ಉತ್ಪಾದನೆ ಮಾಡುತ್ತಿತ್ತು. ಮೊಹಮ್ಮದ್ ಪ್ರೇಮ್ ಜಿಯ ಮಗ ಅಜೀಮ್ ಪ್ರೇಮ್ ಜಿ ಕಂಪನಿಯ ಉಸ್ತುವಾರಿ ತೆಗಡದುಕೊಂಡ ನಂತರ ಹೆಲ್ತ್ ಕೇರ್, ಫರ್ನಿಚರ್, ಲೈಟಿಂಗ್, ಐಟಿ ಸರ್ವಿಸ್ ಕ್ಷೇತ್ರದಲ್ಲಿ ಬೇರೆ ಮಟ್ಟಕ್ಕೆ ತೆಗೆದುಕೊಂಡು ಬಂದು ನಿಲ್ಲಿಸುತ್ತಾರೆ.

ಇವೆಲ್ಲವೂ ಅತಿ ಜನಪ್ರಿಯತೆ ಪಡೆದ ಭಾರತೀಯ ಬ್ರಾಂಡ್ ಗಳು. ಕೇವಲ ಸ್ವದೇಶದಲ್ಲಿ ಒಂದೆ ಅಲ್ಲದೇ ಜಗತ್ತಿನ ಮೂಲೆ ಮೂಲೆಗಳಲ್ಲಿ ಹೆಸರು ಪಡೆದ ಬ್ರಾಂಡ್ ಗಳು. ಇವುಗಳು ಭಾರತೀಯ ಬ್ರಾಂಡ್ ಗಳು ಎಂಬುದು ಎಷ್ಟೋ ಜನರಿಗೆ ತಿಳಿದೆ ಇಲ್ಲ. ವಿದೇಶಿ ಬ್ರಾಂಡ್ ಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತೀಯ ಬ್ರಾಂಡ್ ಗಳು ಕೂಡಾ ಹಲವಾರು ಇದೆ.

Leave A Reply

Your email address will not be published.