MRI ಸ್ಕ್ಯಾನ್ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ. ಐಕ್ಯೂ ಎಂದರೇನು, ಅದನ್ನು ಹೇಗೆ ಕಂಡುಹಿಡಿಯಲಾಗುತ್ತದೆ. ವೈರಸ್ ಎಂದರೇನು, ಅದು ಹೇಗಿರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

MRI ಎಂದರೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇದನ್ನು ಮನುಷ್ಯನ ದೇಹದ ಅಂಗಗಳನ್ನು ನೋಡಲು ಬಳಸುತ್ತಾರೆ. ಇದರ ಸಹಾಯದಿಂದ ಶಸ್ತ್ರ ಚಿಕಿತ್ಸೆ ಮಾಡದೆ ರೋಗಿಯ ಸಮಸ್ಯೆಯನ್ನು ತಿಳಿಯಬಹುದು. ಇದನ್ನು MRT ಎಂತಲೂ ಕರೆಯುತ್ತಾರೆ. 1946 ರಲ್ಲಿ ಫ್ಲೆಕ್ಸ್ ಬ್ಲಾಕ್ ಎಂಬ ವಿಜ್ಞಾನಿ MRI ನ್ನ ಕಂಡುಹಿಡಿಯುತ್ತಾರೆ ಆಗ ಅದು ಅಷ್ಟು ಅಭಿವೃದ್ಧಿಯಾಗಲಿಲ್ಲ ನಂತರ ಹಲವರು ಇದರ ಮೇಲೆ ಸಂಶೋಧನೆ ಮಾಡುತ್ತಾರೆ. ಇದನ್ನು ಮನುಷ್ಯರ ಮೇಲೆ 1977 ರಲ್ಲಿ ಪ್ರಯೋಗ ಮಾಡಲಾಗುತ್ತದೆ. ಮಾನವನ ದೇಹದಲ್ಲಿ 60% ನೀರು ಇರುತ್ತದೆ ಈ ನೀರಿನ ಹೈಡ್ರೋಜನ್ ಅಣುಗಳಲ್ಲಿ ಪ್ರೋಟಾನ್ ಇರುತ್ತದೆ ಇವು ಅಯಸ್ಕಾಂತ ತರಂಗಗಳಿಗೆ ಪ್ರಭಾವವಾಗುತ್ತದೆ. MRI ಯಂತ್ರದ ಒಳಗೆ ಮನುಷ್ಯನನ್ನು ಕಳುಹಿಸಿದಾಗ ಮನುಷ್ಯನ ದೇಹದ ಒಳಗೆ ಅಯಸ್ಕಾಂತದ ತರಂಗಗಳು ಪ್ರವೇಶಿಸುತ್ತವೆ. ಈ ತರಂಗಗಳಿಂದ ನಮ್ಮ ದೇಹದ ಒಳಗೆ ಇರುವ ಹೈಡ್ರೋಜನ್ ಅಣುಗಳು ಪ್ರಭಾವಿತವಾಗುತ್ತವೆ. ಅಣುಗಳಲ್ಲಿರುವ ಪ್ರೋಟಾನ್ ಗಳು ಅಯಸ್ಕಾಂತದ ತರಂಗಗಳು ಬರುವ ದಿಕ್ಕಿಗೆ ಸಾಲಾಗಿ ನಿಂತು ಕೊಳ್ಳುತ್ತದೆ. ಈ ರೀತಿ ನಿಂತ ಪ್ರೋಟಾನಗಳ ಸಹಾಯದಿಂದ ಅಯಸ್ಕಾಂತದ ಶಕ್ತಿ ದೇಹದೊಳಗೆ ಪ್ರವೇಶಿಸುತ್ತದೆ. ಈ ಸಂದರ್ಭದಲ್ಲಿ ರೇಡಿಯೋ ಪ್ರಿಕ್ವೆನ್ಸಿ ಅಯಸ್ಕಾಂತದ ತರಂಗಗಳನ್ನು ಹೊರಹಾಕುತ್ತದೆ. ಇವುಗಳನ್ನು ಸ್ವೀಕರಿಸಿ ಆ ತರಂಗಗಳನ್ನು ಕಂಪ್ಯೂಟರ್ ಗೆ ಕಳುಹಿಸಿ ಹುರಿಯರ ಟ್ರಾನ್ಸಪಾರ್ಮರ ಪದ್ಧತಿಯಿಂದ ಮನುಷ್ಯನ ದೇಹದ ಒಳಗೆ ಇರುವ ಅಂಗಗಳನ್ನು ಸ್ರಷ್ಟಿ ಮಾಡುತ್ತಾರೆ. ಈ ಪ್ರಕ್ರಿಯೆ ನಡೆಯಲು ಕೇವಲ ಕ್ಷಣಗಳು ಸಾಕು. ಹೊರಬಂದ ತರಂಗಗಳಿಂದ ಮನುಷ್ಯನ ಅಂಗಗಳನ್ನು ಸೃಷ್ಟಿ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ.

ಐಕ್ಯೂ ಎಂದರೆ ಇಂಟೆಲಿಜೆಂಟ್ ಕೊಷ್ಚನ್ಸ್. ಐಕ್ಯೂ ಪ್ರತಿಯೊಬ್ಬರಲ್ಲೂ ಇರುತ್ತದೆ. ಇದನ್ನು ನಂಬರ್ಸ್ ಮೂಲಕ ತೋರಿಸುತ್ತಾರೆ. ಇದರ ಲೆಕ್ಕಾಚಾರವೆಂದರೆ ಉದಾಹರಣೆಗೆ 5 ವರ್ಷದ ಬಾಲಕ 15 ವರ್ಷದಲ್ಲಿ ಓದಬೇಕಾದ SSLC ಪುಸ್ತಕವನ್ನು ಓದಿ ಅರ್ಥಮಾಡಿಕೊಂಡರೆ ಆ ಬಾಲಕನನ್ನು ತುಂಬಾ ಬುದ್ಧಿವಂತ ಎಂದು ಕರೆಯುತ್ತೇವೆ. ಇಲ್ಲಿ ಬಾಲಕನ ಫಿಸಿಕಲ್ ಏಜ್ 5 ವರ್ಷ, ಮೆಂಟಲ್ ಏಜ್ 15 ವರ್ಷ. ಐಕ್ಯೂ ಲೆಕ್ಕಾಚಾರ ಮಾಡಲು ಫಾರ್ಮುಲಾ ಇದೆ ಐಕ್ಯೂ ‌ಇಸಿಕೋಲ್ಟು ಮೆಂಟಲ್ ಏಜ್ ಬೈ ಫಿಸಿಕಲ್ ಏಜ್ ಇಂಟು ಹಂಡ್ರೆಡ್. ಐಕ್ಯೂ ಲೆವೆಲ್ 70 ಕ್ಕಿಂತ ಕಡಿಮೆ ಇದ್ದರೆ ಅವರನ್ನು ದಡ್ಡರು ಅಂತ ಹೇಳುವರು. ಐಕ್ಯೂ ಲೆವೆಲ್ ಹೆಚ್ಚು ಇದ್ದರೆ ಬುದ್ಧಿವಂತರು ಎಂದು ಹೇಳುವರು. ಐನ್ ಸ್ಟೈನ್ ಅವರ ಐಕ್ಯೂ ಲೆವೆಲ್ 140-190 ಇತ್ತು. ವೈರಸ್ ಎನ್ನುವುದು ಲ್ಯಾಟಿನ್ ಭಾಷೆಯಿಂದ ಬಂದಿದೆ. ಲ್ಯಾಟಿನ್ ಭಾಷೆಯಲ್ಲಿ ವೈರಸ್ ಎಂದರೆ ವಿಷ ಎಂದರ್ಥ. ಇದು ಬಹಳ ಚಿಕ್ಕದಾಗಿರುತ್ತದೆ ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಇಂತಹ ವೈರಸ್ ಸೈಜ್ 40-400 ನ್ಯಾನೋ ಮೀಟರ್. ಕೊರೋನ ವೈರಸ್ ನ ಸೈಜ್ 80-220 ನ್ಯಾನೋ ಮೀಟರ್. ವೈರಸ್ ನ ಸಂತಾನಾಭಿವೃದ್ಧಿ ನಮ್ಮ ಸೆಲ್ಸ್ ಮೂಲಕ ನಡೆಯುತ್ತದೆ. ಇವು ಗಾಳಿಯ ಮೂಲಕ ಮಾತ್ರ ಚಲಿಸುತ್ತವೆ. ಇದು ಒಂದು ಜನೆಟಿಕ್ ಮಟೀರಿಯಲ್ ಮಾತ್ರ 1 ಅಥವಾ 2 ಲೈನ್ ಇರುವ ಡಿ.ಎನ್.ಎ ಅಥವಾ ಆರ್.ಎನ್.ಎ ಇದರ ಒಳಗೆ ಇರುತ್ತದೆ. ಇದರ ಸುತ್ತ ರಕ್ಷಣೆಗೆ ಪ್ರೊಟೀನ್ ನಿಂದ ನಿರ್ಮಾಣವಾದ ಶಲ್ ಇರುತ್ತದೆ. ವೈರಸ್ ನಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಪ್ಪಿಸಿಕೊಳ್ಳಬಹುದು.

Leave a Reply

Your email address will not be published. Required fields are marked *