ಈ ಆಟಗಾರರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ? ನಾವುಗಳು ಅನ್ಕೊಂಡಿದ್ದಕಿಂತ ಜಾಸ್ತಿನೇ ಇದೆ

0 0

ಭಾರತೀಯ ಕ್ರಿಕೆಟ್ ಆಟಗಾರರ ಸಂಬಳ ಎಷ್ಟು, ಇನ್ನಿತರ ಬಹುಮಾನಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕ್ರಿಕೆಟ್ ಜಗತ್ತಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ ದೇಶ ಎಂದರೆ ಅದು ನಮ್ಮ ಭಾರತ. ಬಡತನದಲ್ಲಿ ಹುಟ್ಟಿ ಪ್ರತಿಭೆಯನ್ನು ಹೊಂದಿದ್ದರೆ ಸಾಕು ಕ್ರಿಕೆಟ್ ಜಗತ್ತಿನಲ್ಲಿ ಅವರ ಜೀವನ ಬದಲಾಗುತ್ತದೆ. ಪ್ರತಿಯೊಂದು ದೇಶದಲ್ಲಿ ಕ್ರಿಕೆಟ್ ಗೆ ಸಂಬಂಧಿಸಿ ಒಂದು ಕಮಿಟಿ ಇರುತ್ತದೆ. ನಮ್ಮ ದೇಶದಲ್ಲಿ ಬಿ.ಸಿ.ಸಿ.ಐ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ. ಇದು ಎಲ್ಲ ಆಟಗಾರರಿಗೂ ಒಂದೇ ರೀತಿಯ ಸಂಬಳ ಕೊಡುವುದಿಲ್ಲ. ನಾಲ್ಕು ಕೆಟಗರಿ ಮಾಡಲಾಗುತ್ತದೆ. ಎ ಪ್ಲಸ್ ಕೆಟಗೆರಿಯಲ್ಲಿ ಬರುವ ಆಟಗಾರರಿಗೆ ಒಂದು ವರ್ಷಕ್ಕೆ 7 ಕೋಟಿ ಕೊಡಲಾಗುತ್ತದೆ. ಎ ಕೆಟಗೆರಿಯಲ್ಲಿ ಬರುವ ಆಟಗಾರರಿಗೆ ವರ್ಷಕ್ಕೆ 5 ಕೋಟಿ ಕೊಡುತ್ತಾರೆ. ಬಿ ಕೆಟಗೆರಿಯಲ್ಲಿ ಬರುವ ಆಟಗಾರರಿಗೆ ಒಂದು ವರ್ಷಕ್ಕೆ 3 ಕೋಟಿ ಕೊಡಲಾಗುತ್ತದೆ. ಸಿ ಕೆಟಗೆರಿಯಲ್ಲಿ ಬರುವ ಆಟಗಾರರಿಗೆ ಒಂದು ವರ್ಷಕ್ಕೆ 1 ಕೋಟಿ ಕೊಡಲಾಗುತ್ತದೆ.

ಟೆಸ್ಟ್ ಮ್ಯಾಚ್ ನಲ್ಲಿ ಒಬ್ಬ ಆಟಗಾರನಿಗೆ ಡಾಲರ್ ಲೆಕ್ಕದಲ್ಲಿ 23,000 ಡಾಲರ್ ಅಂದರೆ 16,10,000ರೂ ಸಿಗುತ್ತದೆ. ಈ ಸಂಬಳದಲ್ಲಿ ಏರು ಪೇರಾಗುತ್ತದೆ ಕೆಟಗೆರಿಯಲ್ಲಿಯೂ ಬದಲಾಗುತ್ತದೆ ಅವರವರ ಆಟದ ಮೇಲೆ ಅವಲಂಬನೆ. ಒನ್ ಡೇ ಮ್ಯಾಚ್ ಆಡಿದರೆ ಒಬ್ಬ ಆಟಗಾರನಿಗೆ 9,000 ಡಾಲರ್ ಅಂದರೆ 6,30,000ರೂ ಹಣ ಸಿಗುತ್ತದೆ. ಅಲ್ಲದೇ ಒನ್ ಡೇ ಮ್ಯಾಚ್ ನಲ್ಲಿ ಶತಕ ಬಾರಿಸಿದರೆ 5 ಲಕ್ಷ ಹಣವನ್ನು ಬೋನಸ್ ಆಗಿ ಕೊಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಸ್ಪಾನ್ಸರ್‌ ಗಳು, ಗಿಫ್ಟ್ ಗಳ ರೂಪದಲ್ಲಿ ಹಣ ಬರುತ್ತಿರುತ್ತದೆ. ಎರಡು ಶತಕ ಬಾರಿಸಿದರೆ 7 ಲಕ್ಷ ಹಣವನ್ನು ಬಹುಮಾನವಾಗಿ ಕೊಡಲಾಗುತ್ತದೆ. ಬೌಲರ್ ಗೆ ಒಂದು ಮ್ಯಾಚ್ ನಲ್ಲಿ 5 ವಿಕೆಟ್ ತೆಗೆದುಕೊಂಡರೆ ಆತನಿಗೆ 5 ಲಕ್ಷ ಬೋನಸ್ ಹಣ ಸಿಗುತ್ತದೆ. ಟೆಸ್ಟ್ ಮ್ಯಾಚ್ ನಲ್ಲಿ 10 ವಿಕೆಟ್ ತೆಗೆದುಕೊಂಡರೆ 7 ಲಕ್ಷ ರೂ ಬಹುಮಾನ ಸಿಗುತ್ತದೆ. ಬಿ.ಸಿ.ಸಿ.ಐ ಪ್ರಪಂಚದಲ್ಲೇ ಅತಿ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಹೆಸರು ಪಡೆದಿದೆ. ಇದರ ಜೊತೆಗೆ ಹೆಚ್ಚು ಜನಪ್ರಿಯನಾದ ಜಾಹೀರಾತಿನ ಮೂಲಕ ಅಥವಾ ಒಂದು ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗುವುದು ಇದರಿಂದ ಅವನಿಗೆ ನೂರಾರು ಕೋಟಿ ಬರುತ್ತದೆ. ಹಾಗಾಗಿ ಭಾರತೀಯ ಕ್ರಿಕೆಟ್ ಆಟಗಾರರು ಬಹುತೇಕ ಶ್ರೀಮಂತರೇ ಆಗಿರುತ್ತಾರೆ.

Leave A Reply

Your email address will not be published.