Ultimate magazine theme for WordPress.

ವೃಷಭ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟ ಸಂಖ್ಯೆ

0 1

ಅಲಂಕಾರ ಪ್ರಿಯರಾಗಿರುವ ವೃಷಭ ರಾಶಿಯವರು ವೈಭೋಗದ ಜೀವನವನ್ನು ಸಾಗಿಸಲು ಇಷ್ಟ ಪಡುವವರಾಗಿರುತ್ತಾರೆ ಅಲ್ಲದೆ ಜೀವನದುದ್ದಕ್ಕೂ ಸಾಕ್ಷಾತ್ ಮಹಾಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನಿಮಗೆ ಬಡತನ ಎಂಬುದು ತುಂಬಾ ಕಡಿಮೆ ಕರ್ಮಫಲದಾಯಕನಾದ ಶನಿಯು ನಿಮಗೆ ಬಹು ದೊಡ್ಡ ಉದ್ಯೋಗ ಪ್ರಾಪ್ತಿಯಾಗುವಲ್ಲಿ ಸಹಕರಿಸುತ್ತಾನೆ ಮತ್ತು ನಿಮ್ಮ ಮಾತೇ ನಿಮಗೆ ಬಂಡವಾಳವಾಗಿರುತ್ತದೆ ಅಲ್ಲದೇ ನಿಮ್ಮ ಸುತ್ತಮುತ್ತಲಿನ ಎಲ್ಲರನ್ನೂ ಪ್ರೀತಿಸುವ ನೀವು ಇತರರಲ್ಲಿನ ನಂಬಿಕೆಗೆ ಪಾತ್ರರಾಗಿರುವುದರಲ್ಲಿ ಎರಡು ಮಾತಿಲ್ಲ

ಗುಪ್ತ ಪ್ರೀತಿ ಪ್ರೇಮಗಳು ನಿಮಗೆ ಅರಿವಿಲ್ಲದಂತೆಯೇ ನಡೆದುಹೋಗುತ್ತವೆ ನೀವು ಏನಿದ್ದರೂ ತೋರಿಕೆಯ ದೈಹಿಕ ಪ್ರೇಮವನ್ನು ಬಯಸುವವರಾಗಿರುತ್ತಿರಿ, ನೀವು ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಒಂದೇ ವ್ಯಕ್ತಿಯನ್ನು ಪ್ರೀತಿಸಲಾರಿರಿ ಹಲವಾರು ಪ್ರೇಮ ಪ್ರಸಂಗಗಳು ನಿಮ್ಮ ಜೀವನದುದ್ದಕ್ಕೂ ಜರುಗುತ್ತಲೇ ಇರುತ್ತವೆ ಎಲ್ಲರನ್ನೂ ಪ್ರೀತಿಸುವುದರೊಂದಿಗೆ ಆನಂದದಿಂದ ನಿಮ್ಮ ಜೀವನವನ್ನು ಕಳೆಯುವಿರಿ ಮತ್ತು ತೋರಿಕೆಯ ಜೀವನ ನಿಮ್ಮದಾದ್ದರಿಂದ ತೋರಿಕೆಗಾಗಿ ನಿಮ್ಮ ಸಂಗಾತಿಯ ವಿಷ್ಯದಲ್ಲಿ ಎಂತಹ ಖರ್ಚನ್ನು ಸಹ ನೀವು ನಿಭಾಯಿಸಲು ತಯಾರಾಗಿರುವಿರಿ.

ಆದರೆ ನೀವು ನಿಮ್ಮ ಸಂಗಾತಿಗೆ ನೀಡುವ ಪ್ರೀತಿಯನ್ನು ನೀವು ನಿಮ್ಮ ಸಂಗಾತಿಯಿಂದ ಪಡೆಯಲಾಗದ ಸಂದರ್ಭದಲ್ಲಿ ನೀವು ಮಾನಸಿಕ ಸಮತೋಲನವನ್ನು ಕಳೆದುಕೊಂಡು ಬಹಳ ಬೇಗನೆ ಉದ್ವೇಗಕ್ಕೆ ಒಳಗಾಗುವುದರಲ್ಲಿ ಸಂಶಯವಿಲ್ಲ, ನಿಮ್ಮಲ್ಲಿ ಸಾಕಷ್ಟು ಹಣವಿರುವ ಕಾರಣ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರು ಸದಾ ನಿಮ್ಮ ಹಿಂದೆಯೇ ಸುತ್ತುತ್ತಿರುತ್ತಾರೆ ಅಲ್ಲದೇ ಸಂಪತ್ತಿನ ವಿಷಯದಲ್ಲಿ ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ಚಿಕ್ಕದೊಂದು ಸಾಲ ಪುಟ್ಟದೊಂದು ಸಮಸ್ಯೆ ನಿಮ್ಮ ಜೀವನದುದ್ದಕ್ಕೂ ಇದ್ದೇ ಇರುತ್ತದೆ.

ನೀವು ಬಹು ದೊಡ್ಡ ಯೋಜನೆಗಳನ್ನು ಹುಟ್ಟುಹಾಕುವುದರಲ್ಲಿ ನಿಸ್ಸೀಮರೂ ಬಹಳ ದೊಡ್ಡ ಮಟ್ಟದ ವಾಣಿಜ್ಯೋದ್ಯಮದ ಪ್ರವರ್ತಕರು ಆಗಬಹುದಾಗಿದೆ ಅಲ್ಲದೇ ಎಂತಹ ಅಸಾಧ್ಯವಾದ ಕೆಲಸವನ್ನಾದರೂ ಸಹ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವಂತಹ ಬುದ್ಧಿವಂತಿಕೆ ನಿಮ್ಮಲ್ಲಿ ಸಾಕಷ್ಟಿರುತ್ತದೆ, ಅದರೊಂದಿಗೆ ನೀವು ನಿಮ್ಮ ಕುಟುಂಬವನ್ನು ತುಂಬಾ ಪ್ರೀತಿಸುವಲ್ಲಿ ಸಂಶಯವಿಲ್ಲ ನೀವು ಬಹಳಷ್ಟು ಜನರ ನಂಬಿಕೆಗೆ ಪಾತ್ರರಾಗಿರುವ ವ್ಯಕ್ತಿಗಳಾಗಿದ್ದರೂ ಸಹ ನಿಮ್ಮ ಪಾಲುದಾರರು ನಿಮ್ಮಲ್ಲಿ ಸಂಶಯದಿಂದಲೇ ಕೂಡಿರುತ್ತಾರೆ.

ನೀವು ದೈಹಿಕವಾಗಿ ಬಲಾಡ್ಯರು ಹಾಗೂ ಶಕ್ತಿಯುತರು ಅಲ್ಲದಿದ್ದರೂ ಕೂಡ ಹೊರ ಜಗತ್ತಿಗೆ ನೀವು ನಿಮ್ಮನ್ನು ಬಲಶಾಲಿಗಳೆಂದೇ ತೋರಿಸಿಕೊಳ್ಳುವಿರಿ ನೀವು ಉತ್ತಮ ಮಾತುಗಾರರಾಗಿರುವುದರಿಂದ ಎಂತಹ ವ್ಯಕ್ತಿಯನ್ನಾದರೂ ಸರಿಯೇ ನಿಮ್ಮ ಮಾತುಗಳಿಂದ ಅವರನ್ನು ಕಟ್ಟುಹಾಕಿ ಬಿಡುವಿರಿ ಮತ್ತು ನಿಮ್ಮ ಮಾತಿನ ಮೋಡಿಗೆ ಅವರನ್ನು ಮರುಳಾಗುವಂತೆ ಮಾಡುವಿರಿ ಬ್ಯಾಂಕಿಂಗ್ ಹುದ್ದೆಯಲ್ಲಿರುವವರು ತಾವು ಆಸಕ್ತಿ ವಹಿಸಿ ಕೆಲಸ ಮಾಡಿದ್ದೇ ಆದಲ್ಲಿ ಉನ್ನತ ಪದವಿಯನ್ನು ಅಲಂಕರಿಸುವಲ್ಲಿ ಸಂಶಯವಿಲ್ಲ.

ನೀವು ಆಧುನಿಕತೆಗೆ ಹೊಂದಿಕೊಂಡು ಕಾಲಕ್ಕೆ ತಕ್ಕಂತೆ ಬದಲಾದರೂ ಸಹ ಇನ್ನೊಂದೆಡೆ ನಿಮ್ಮ ಸಾಂಪ್ರದಾಯಿಕ ಜೀವನವನ್ನು ಕಾಣಬಹುದಾಗಿದೆ ಅಲ್ಲದೇ ಮತ್ತೊಂದೆಡೆ ಸನ್ಯಾಸತ್ವವೂ ಕೂಡ ನಿಮ್ಮನ್ನು ಆಕರ್ಷಿಸುವುದು, 1 4 5 6 8 ನಿಮ್ಮ ಅದೃಷ್ಟದ ಸಂಖ್ಯೆಗಳಾಗಿದ್ದು ನಿಮ್ಮ ಬಲಗೈ ಬೆರಳುಗಳಿಗೆ ವಜ್ರದ ಅಥವಾ ನೀಲ ಮಣಿಯ ಉಂಗುರವನ್ನು ಧರಿಸುವುದು ಒಳಿತು. ನಿಮ್ಮ ಜೀವನದಲ್ಲಿ ಎಂತಹ ಕಠಿಣ ಸಮಸ್ಯೆ ಇರಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಇದ್ರೂ ಕರೆ ಮಾಡಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ ಗುರೂಜಿಯವರೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.