ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಒಂದು ವಾರದಲ್ಲಿ ಸೌರಮಂಡಲದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿಕೊಂಡು ವಾರ ಭವಿಷ್ಯ ಹೇಳಲಾಗುತ್ತದೆ. ಈ ವಾರ ಭವಿಷ್ಯ ಹೆಚ್ಚು ಉಪಯೋಗಕಾರಿ. ಯಾಕೆಂದರೆ ನಮಗೆ ಬರುವಂತಹ ಸಮಸ್ಯೆಗಳು, ಎದುರಾಗುವ ಆಪತ್ತು ಇತ್ಯಾದಿಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಡೆದು ಕೊಳ್ಳಬಹುದು. ತಿಂಗಳ ಭವಿಷ್ಯವೂ ಅದೇ ರೀತಿಯಾಗಿದೆ. ತಿಂಗಳ ಕಾಲ ಗ್ರಹಗತಿಗಳು ಯಾವ ರೀತಿಯಲ್ಲಿ ಇರುವುದು ಎನ್ನುವುದನ್ನು ತಿಳಿದು ಜ್ಯೋತಿಷ್ಯ ಹೇಳಲಾಗುತ್ತದೆ. ನವೆಂಬರ್ 28ಕ್ಕೆ ವೃಶ್ಷಿಕ ರಾಶಿಗೆ ಬುಧನ ಸಂಚಾರ ಆಗಿದ್ದು , ನವೆಂಬರ್ ತಿಂಗಳ ರಾಶಿ ಭವಿಷ್ಯವು ಹೇಗೆ ಇರಲಿದೆ ? ಮತ್ತು ಇದರಿಂದ 12 ರಾಶಿಗಳ ಮೇಲಾಗುವ ಪರಿಣಾಮ ಎಂತದ್ದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗ್ರಹಗಳ ಸ್ಥಾನದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ತುಂಬಾ ವಿಶೇಷವಾಗಿದೆ. ನೆವಂಬರ್ 28ಕ್ಕೆ ಬುಧನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸುತ್ತದೆ. ಈ ಸಂಚಾರದ ಪ್ರಭಾವ ಡಿಸೆಂಬರ್‌ 17ರವರೆಗೆ ಇರುತ್ತದೆ. ಜ್ಯೋತಿಷ್ಯದಲ್ಲಿ ಬುಧನನ್ನು ಬುದ್ಧಿಯ ಗ್ರಹವೆಂದು ಹೇಳಲಾಗುತ್ತದೆ.
ಬುಧ ಬಲವಾದ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ತಾರ್ಕಿಕ ಸಾಮಾರ್ಥ್ಯ ಹಾಗೂ ಮಧುರ ಧ್ವನಿಯನ್ನು ಒದಗಿಸುತ್ತದೆ, ಅದೇ ದುರ್ಬಲ ಸ್ಥಾನದಲ್ಲಿದ್ದರೆ ತಾರ್ಕಿಕ ಸಾಮಾರ್ಥ್ಯ ಹದಗೆಡುವುದು ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಬರುವುದು. ಈ ಸಮಸ್ಯೆಯನ್ನು ನಿವಾರಿಸಲೂ ವೈದಿಕ ಶಾಸ್ತ್ರದಲ್ಲಿ ಪರಿಹಾರವಿದೆ.

ಮೊದಲಿಗೆ ಮೇಷ ರಾಶಿ. ಈ ರಾಶಿಯವರಲ್ಲಿ ಬುಧನು ಎಂಟನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಸಂಶೋದನೆ, ಅನಿಶ್ಚಿತ, ಬದಲಾವಣೆಯ ಮನೆಯಂದು ಪರಿಗಣಿಸಲಾಗಿದೆ. ಆದ್ದರಿಂದ ಬುಧನ ಈ ಸಾಗಣೆ ಮೇಷ ರಾಶಿಯವರಿಗೆ ಅಷ್ಟು ಅನುಕೂಲಕರವಾಗಿಲ್ಲ. ಇದರ ಪ್ರಭಾವದಿಂದಾಗಿ ಕೋಪ, ಹತಾಶೆ ಹೆಚ್ಚಾಗಿ ಕಾಡುವುದು, ನಿಮ್ಮ ವರ್ತನೆ ಮನೆಯವರಿಗೆ ನೋವುಂಟು ಮಾಡುವುದು. ಮನೆಯವರ ಕೋಪ ಮಾತು ಆಡುವಾಗ ಮಾತುಗಳ ಮೇಲೆ ಹಿಡಿತವಿರಲಿ. ಈ ಸಾಗಣೆಯ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ಕೈಗೊಳ್ಳಬೇಡಿ. ಇದಕ್ಕೆ ಪರಿಹಾರ ಅಗ್ಯತವಿರುವ ಮಕ್ಕಳಿಗೆ ಅವರಿಗೆ ಏನು ಕೊಳ್ಳಲು ಸಾಧ್ಯವಿಲ್ಲವೋ ಅದನ್ನು ನೀಡಿ.

ಎರಡನೆಯದಾಗಿ ವೃಷಭ ರಾಶಿ. ವೃಷಭ ರಾಶಿಯವರಲ್ಲಿ ಬುಧನು ಏಳನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ಈ ಸಂಗಾತಿ, ಸಂಬಂಧ, ಪಾಲುದಾರಿಕೆಯ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಬುಧನ ಈ ಸಂಚಾರ ವೃಷಭ ರಾಶಿಯವರಿಗೆ ತುಂಬಾ ಅದೃಷ್ಟ ತರುತ್ತದೆ.ಈ ಸಮಯದಲ್ಲಿ ಉದ್ಯಮಿಗಳಿಗೆ ಅಥವಾ ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ನಿಮ್ಮ ಆಡಳಿತ ಕಲೆ ಮತ್ತಷ್ಟು ಸುಧಾರಿಸುವುದು, ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಈ ಸಂಚಾರ ನಿಮ್ಮ ಸಂಬಂಧವನ್ನು ಕೂಡ ಬಲ ಪಡಿಸುತ್ತದೆ. ಆದರೆ ಅಹಂ ನಿಮ್ಮ ಸಂಬಂಧ ಹಾಳು ಮಾಡದಂತೆ ನೋಡಿಕೊಳ್ಳಿ. ಇದಕ್ಕೆ ಪರಿಹಾರ ಬಲಗೈಯಲ್ಲಿ ಹರಳಿನ ಉಂಗುರ ಧರಿಸುವುದು ಒಳ್ಳೆಯದು.

ಮೂರನೆಯದಾಗಿ ಮಿಥುನ ರಾಶಿ. ಮಿಥುನ ರಾಶಿಯವರಲ್ಲಿ ಬುಧನು 6ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇದು ಕಾಯಿಲೆ, ಶತ್ರು, ಅಡಚಣೆಯ ಮನೆಯಂದು ಪರಿಗಣಿಸಲಾಗಿದೆ. ಆದರಿಂದ ಈ ಸಮಯದಲ್ಲಿ ನೀವು ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಅಲ್ಲದೆ, ಈ ಸಮಯದಲ್ಲಿ ಯಾವುದೇ ಸಂಘರ್ಷ ಅಥವಾ ವಾದದಿಂದ ದೂರವಿರಲು ಪ್ರಯತ್ನಿಸಿ. ಇಲ್ಲದಿದ್ದರೆ ತೊಂದರೆಗೆ ಸಿಲುಕಿಕೊಳ್ಳುವಿರಿ. ಇದಕ್ಕೆ ಪರಿಹಾರ ಪ್ರತೀ ದಿನ ಬೆಳಗ್ಗೆ ವಿಷ್ಣುವನ್ನು ಪೂಜಿಸಿ.

ಕರ್ಕ ರಾಶಿ. ಕರ್ಕ ರಾಶಿಯವರಲ್ಲಿ ಬುಧನು 5ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಬುದ್ಧಿವಂತಿಕೆ, ಪ್ರೀತಿ, ರೊಮ್ಯಾನ್ಸ್‌ ಮನೆಯಂದು ಪರಿಗಣಿಸಲಾಗಿದೆ.ಈ ಸಂಚಾರವು ಕರ್ಕರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ವಿದೇಶದಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಆಸೆ ಈಡೇರುವುದು. ಮಕ್ಕಳಿರುವವರು ಅವರ ಆರೋಗ್ಯದ ಕಡೆ ಗಮನ ನೀಡಬೇಕಾಗುತ್ತೆ. ಮತ್ತೊಂದೆಡೆ, ಸೃಜನಶೀಲತೆ ಮತ್ತು ಕಲಾ ಕ್ಷೇತ್ರದಲ್ಲಿರುವವ ಕೌಶಲ್ಯ ಗುರುತಿಸಿಕೊಳ್ಳುವುದರಿಂದ ಉತ್ತಮ ಅವಕಾಶ ಪಡೆಯುತ್ತಾರೆ. ಇನ್ನು ಸಂಬಂಧದಲ್ಲಿ ಸ್ವಲ್ಪ ಈಗೋ ಕಾಣಿಸಿಕೊಳ್ಳಬಹುದು, ಆದರೆ ಸಂಗಾತಿ ಜೊತೆ ಮಾತನಾಡಿ ಭಿನ್ನಾಭಿಪ್ರಾಯ ತಪ್ಪಿಸಬಹುದು. ಇದರಿಂದ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಇದಕ್ಕೆ ಪರಿಹಾರ ಸರಸ್ವತಿಯನ್ನು ಪೂಜಿಸಬೇಕು.

ಸಿಂಹ ರಾಶಿಯವರಲ್ಲಿ ಬುಧನು ನಾಲ್ಕನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ತಾಯಿ, ಆಸ್ತಿ, ಐಶ್ವರ್ಯ ಮನೆಯಂದು ಪರಿಗಣಿಸಲಾಗಿದೆ. ಈ ಸಮಯ ಸಿಂಹ ರಾಶಿಯವರಿಗೆ ತುಂಬಾ ಉತ್ತಮವಾಗಿದೆ.ಈ ಸಂಚಾರದ ಸಮಯದಲ್ಲಿಉತ್ತಮ ಫಲಿತಾಂಶವನ್ನು ಪಡೆಯುವಿರಿ. ನಿಮಗೆ ಹೊಸ ಅನುಭವ ಪಡೆಯಲು ಅವಕಾಶ ಸಿಗುವುದು. ವೃತ್ತಿ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಕಾಣುವಿರಿ. ಈ ಅವಧಿಯಲ್ಲಿ ನೀವು ಆಸ್ತಿ ಅಥವಾ ಯಾವುದೇ ವಾಹನವನ್ನು ಖರೀದಿಸುವ ಮನಸ್ಸು ಮಾಡಿದರೆ ಅದು ಸಾಧ್ಯವಾಗುತ್ತದೆ. ಪರಿಹಾರವಾಗಿ ಬುಧ ಬೀಜ ಮಂತ್ರ ಪಠಿಸಬೇಕು.

ಕನ್ಯಾ ರಾಶಿಯವರಲ್ಲಿ ಬುಧನು ಮೂರನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಧೈರ್ಯ, ಸಹೋದರ/ರಿ, ಪ್ರಯಾಣ, ಸಂವಹನದ ಮನೆಯಂದು ಪರಿಗಣಿಸಲಾಗಿದೆ. ನಿಮ್ಮ ಗುರಿ ಸಾಧಿಸಲು ನೀವು ಹಿಂದೇಟು ಹಾಕುವುದಿಲ್ಲ. ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಇದಲ್ಲದೆ ವ್ಯವಹಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರು ಉತ್ತಮ ಪ್ರಯೋಜನ ಪಡೆಯಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಸುವುದು, ಎಲ್ಲರೂ ಸಂತೋಷದಿಂದ ಇರುವಿರಿ. ಪರಿಹಾರವಾಗಿ ಬುಧವಾರ ಬಲಗೈಯ ಉಗುರಿಗೆ ಹರಳಿನ ಉಂಗುರ ಧರಿಸಬೇಕು.

ತುಲಾ ರಾಶಿಯರವಲ್ಲಿ ಬುಧನು ಎರನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ಐಶ್ವರ್ಯ, ಉಳಿತಾಯ, ಕುಟುಂಬ, ಮಾತಿನ ಮನೆಯಂದು ಪರಿಗಣಿಸಲಾಗಿದೆ. ಈ ಸಂಚಾರದಲ್ಲಿ ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗುವುದು. ನಿಮಗೆ ಅಧಿಕ ಧನ ಲಾಭ ಉಂಟಾಗಲಿದೆ. ಆದರೆ ಈ ಸಮಯದಲ್ಲಿ ಖರ್ಚುಗಳೂ ಬರುವುದು, ಆದ್ದರಿಂದ ಹಣವನ್ನು ಮಿತಿಯಲ್ಲಿ ಖರ್ಚು ಮಾಡಿ..ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದು. ಇದರಿಂದ ನಿಮ್ಮ ಕುಟುಂಬ ಸಂಬಂಧಗಳಲ್ಲಿ ಸಾಮರಸ್ಯವನ್ನು ಹೆಚ್ಚುವುದು. ಈ ಅವಧಿಯಲ್ಲಿ ಕುಟುಂಬದವರೊಂದಿಗೆ ತೀರ್ಥ ಸ್ಥಳಕ್ಕೆ ಪ್ರಯಾಣಿಸುವಿರಿ.

ಬುಧನು ಎಂಟನೇ ರಾಶಿಯಾದ ವೃಶ್ಚಿಕ ರಾಶಿಗೆ ಸಂಚರಿಲಿದ್ದಾನೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶ ಸಿಗುವುದು. ಬುಧನ ಈ ಸಂಚಾರದ ಸಮಯದಲ್ಲಿ ನಿಮ್ಮ ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಲು ಉತ್ತಮ ಸಮಯವಾಗಿದೆ. ಇದರಿಂದ ಮುಂದೆ ಪ್ರಯೋಜನವೂ ಸಿಗುವುದು. ಈ ಸಮಯದಲ್ಲಿನೀವು ಎಲ್ಲಾ ಕಾರ್ಯದಲ್ಲಿ ಪರ್ಫೆಕ್ಟ್ ಬಯಸುವುದು, ಟೀಕಿಸುವುದು ಮಾಡುವುದರಿಂದ ನಿಮಗೇ ತೊಂದರೆ ಉಂಟಾಗುವುದು. ಅದೇ ಸಮಯದಲ್ಲಿ, ವೃತ್ತಿಪರವಾಗಿ ಉತ್ತಮ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಇದ್ದಕ್ಕಿದ್ದಂತೆ ಕೆಲ ಲಾಭ ದೊರೆಯಬಹುದು. ಅಲ್ಲದೆ ಅನಾರೋಗ್ಯಕರವಾದ ಜೀವನಶೈಲಿ ಆರೋಗ್ಯದ ಮೇಲೂ ಪರಿಣಾಮ ಬೀರುವುದು.ಇದಕ್ಕೆ ಪರಿಹಾರವಾಗಿ ಮನೆಯಲ್ಲಿ ಕರ್ಪೂರ ದೀಪ ಹಚ್ಚಬೇಕು.

ಧನು ರಾಶಿಯವರಲ್ಲಿ ಬುಧನು 12ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ವ್ಯವಹಾರ, ಮದುವೆ, ಪಾಲುದಾರಿಕೆಯ ಮನೆಯಂದು ಪರಿಗಣಿಸಲಾಗಿದೆ, ಬುಧನ ಈ ಸಂಚಾರ ನಿಮಗೆ ಶುಭ ಫಲಿತಾಂಶಗಳನ್ನು ನೀಡಲಿದೆ. ಆಮದು-ರಫ್ತು ವ್ಯವಹಾರ ಮಾಡುವವರು ಒಳ್ಳೆಯ ಲಾಭ ಗಳಿಸುವಿರಿ. ಆದಾಗ್ಯೂ, ಸಂಗಾತಿಯ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ನೀವು ಒತ್ತಡ ಅಥವಾ ಆತಂಕಕ್ಕೆ ಗುರಿಯಾಗುತ್ತೀರಿ. ನೀವು ಈ ಸಮಯದಲ್ಲಿ ಔಷಧಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಪರಿಹಾರವಾಗಿ ಇದಕ್ಕೆ ಸಮೀಪದ ದೇವಾಲಯಕ್ಕೆ ಹಸಿರು ತರಕಾರಿ ದಾನ ಮಾಡಬೇಕು.

ಮಕರ ರಾಶಿಯವರಲ್ಲಿ ಬುಧನು ಹನ್ನೊಂದನೇ ಮನೆಗೆ ಸಂಚರಿಸಲಿದ್ದಾನೆ. ಇದನ್ನು ಸ್ನೇಹಿತರು, ಸಹೋದರತ್ವದ ಮನೆಯಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಬಹುಕಾಲದ ಸ್ನೇಹಿತರನ್ನು ಭೇಟಿಯಾಗುವಿರಿ.ಈ ಸಂಚಾರದ ಸಮಯದಲ್ಲಿ ನಿಮಗೆ ಶುಭ ಫಲಿತಾಂಶ ಉಂಟಾಗುವುದು. ಈ ಸಮಯದಲ್ಲಿ, ಹಿರಿಯ ಸಹೋದರರು ಮತ್ತು ಸ್ನೇಹಿತರಿಂದ ಉತ್ತಮ ಬೆಂಬಲ ಇರುತ್ತದೆ. ನಿಮಗೆ ಪೂರ್ಣ ಅದೃಷ್ಟ ಸಿಗುತ್ತದೆ. ನೀವು ಕಾನೂನು ವ್ಯಾಜ್ಯದಲ್ಲಿ ಸಿಲುಕಿದ್ದರೆ ಗೆಲ್ಲುವ ಸಾಧ್ಯತೆಯಿದೆ. ಇದಕ್ಕೆ ಪರಿಹಾರ ಗಣೇಶ ಸ್ತೋತ್ರ ಹೇಳಬೇಕು.

ಕುಂಭ ರಾಶಿಯವರನ್ನು ಬುಧನು 10ನೇ ಮನೆಗೆ ಸಂಚರಿಸುತ್ತಿದ್ದಾನೆ. ಇದನ್ನು ವೃತ್ತಿ, ಹಾಗೂ ವ್ಯಕ್ತಿಯ ಸಾಮಾಜಿಕ ಸ್ಥಿತಿಯನ್ನು ಬಿಂಬಿಸುತ್ತದೆ. ಬುಧನ ಈ ಸಂಚಾರದಿಂದಾಗಿ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ. ವೃತ್ತಿಪರವಾಗಿ ನೀವು ಒಳ್ಳೆಯ ಫಲಿತಾಂಶ ಪಡೆಯಬಹುದು.ಈ ಅವಧಿಯಲ್ಲಿ ನಿಮ್ಮ ಕಾರ್ಯವನ್ನು ಮೇಲಾಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಮತ್ತೊಂದೆಡೆ, ವಿವಾಹಿತರು ಈ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.ಯಾವುದೇ ರೀತಿಯ ಸ್ಪರ್ಧಾತ್ಮಕ ಅಥವಾ ಸರ್ಕಾರಿ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಪರಿಹಾರವಾಗಿ ದುರ್ಗಾ ದೇವಿಯನ್ನು ಪೂಜಿಸಬೇಕು.

ಮೀನ ರಾಶಿಯವರಿಗೆ ಬುಧನು 9ನೇ ಮನೆಗೆ ಸಂಚರಿಸುತ್ತಿದ್ದಾನೆ. ಈ ಮನೆಯನ್ನು ಅದೃಷ್ಟ, ಶಿಕ್ಷಣ, ಧಾರ್ಮಿಕತೆಯ ಮನೆಯಂದು ಪರಿಗಣಿಸಲಾಗಿದೆ.ಬುಧನ ಈ ಸಂಚಾರವು ಮೀನ ರಾಶಿಯವರಿಗೆ ಅದೃಷ್ಟ ತರುವುದು. ಈ ಸಮಯದಲ್ಲಿ, ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳ ಕನಸ್ಸು ಈಡೇರುವುದು. ವೃತ್ತಿಪರವಾಗಿ ನೀವು ಬೆಳೆಯಲು ಈ ಸಮಯ ಉತ್ತಮವಾಗಿದೆ. ಈ ಸಮಾಯದಲ್ಲಿ ಆಸ್ತಿ ಖರೀದಿ ಮಾಡುವ ಯೋಗವಿದೆ. ಮತ್ತು ಹೂಡಿಕೆಯಿಂದಾಗಿ ಸಕಾರಾತ್ಮಕವಾದ ಫಲಿತಾಂಶ ಪಡೆಯುವಿರಿ. ಇದಕ್ಕೆ ಪರಿಹಾರವಾಗಿ ಹಸುವಿಗೆ ಮೇವು ನೀಡಬೇಕು.

Leave a Reply

Your email address will not be published. Required fields are marked *