ಧನಸ್ಸು ರಾಶಿಯವರ ಬುದ್ದಿವಂತಿಕೆಯಿಂದ ಉದ್ಯೋಗದಲ್ಲಿ ಯಾವುದೇ ತೊಂದರೆ ಇರೋದಿಲ್ಲ, ಇವರ ಅದೃಷ್ಟ ಸಂಖ್ಯೆ ಹೀಗಿದೆ.!

0 0

ನಮ್ಮ ಭಾರತೀಯ ಪಂಚಾಂಗದಲ್ಲಿ ಒಟ್ಟಾರೆಯಾಗಿ ಹನ್ನೆರಡು ರಾಶಿಗಳು ಇವೆ. ಒಂದು ರಾಶಿಗೆ ಇಂತಹ ನಕ್ಷತ್ರ ಎಂದು ಜೋಡಿಸಲಾಗಿದೆ. ಆದ್ದರಿಂದ ಒಂದೊಂದು ರಾಶಿಗಳು ಬೇರೆ ಬೇರೆ ನಕ್ಷತ್ರಗಳನ್ನು ಹೊಂದಿರುತ್ತವೆ. ಹಾಗೆಯೇ ಒಂದೊಂದು ರಾಶಿಗಳು ಒಂದೊಂದು ರೀತಿಯ ಭವಿಷ್ಯವನ್ನು ಹೊಂದಿರುತ್ತವೆ. ನಾವು ಇಲ್ಲಿ 2021ರ ಧನಸ್ಸು ರಾಶಿಯ ಬಗ್ಗೆ ವರ್ಷದ ಭವಿಷ್ಯವನ್ನು ತಿಳಿಯೋಣ.

ಧನಸ್ಸು ರಾಶಿಯು ಹನ್ನೆರಡು ರಾಶಿಗಳಲ್ಲಿ ಒಂದು. ಇದರ ಭವಿಷ್ಯ ಮುಂದಿನ ವರ್ಷ ಅಂದರೆ 2021 ತುಂಬಾ ಚೆನ್ನಾಗಿದೆ. ಮೂಲ, ಪೂರ್ವಾಷಾಢ, ಉತ್ತರಾಷಾಢದ ಒಂದನೇ ಪಾದದ ನಕ್ಷತ್ರದವರು ಧನಸ್ಸು ರಾಶಿಗೆ ಸೇರುತ್ತಾರೆ. ಇವರಿಗೆ ಅದೃಷ್ಟದ ಜೊತೆಗೆ ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ. ಇದರಿಂದ ಜೀವನದಲ್ಲಿ ಎಲ್ಲಾ ಸ್ಥಳಗಳಲ್ಲಿ ಉನ್ನತಿಯನ್ನು ಹೊಂದುತ್ತಾರೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ. ಈ ರಾಶಿಯವರು  ತಿನ್ನುವುದನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಸ್ವಲ್ಪ ಹತೋಟಿಯಲ್ಲಿ ಇರಬೇಕು.

ಇವರ ಬುದ್ಧಿವಂತಿಕೆಯಿಂದ ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಸಾರ್ವಜನಿಕ ಸೇವೆ ಸಲ್ಲಿಸಿದ ಇವರು ಉತ್ತಮ ಸ್ಥಾನವನ್ನು ಪಡೆಯುತ್ತಾರೆ. ಎಲ್ಲಾ ರೀತಿಯ ವಿಚಾರಗಳಲ್ಲೂ ಇವರ ತೀರ್ಮಾನವೇ ಕೊನೆಯದಾಗಿ ಇರುತ್ತದೆ. ಇವರ ದಾಂಪತ್ಯ ಜೀವನ ಸುಖವಾಗಿ ಇರುತ್ತದೆ. ಸ್ತ್ರೀಯರು ಯಾವುದಾದರೂ ಸರಕಾರಿ ಹುದ್ದೆ ಅಥವಾ ಒಳ್ಳೆಯ ಉದ್ಯೋಗವನ್ನು ಪಡೆಯುತ್ತಾರೆ. ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಬೇಕು. ರಾಜಕೀಯದಲ್ಲಿ ಒಳ್ಳೆಯ ಅಭಿವೃದ್ಧಿ ಕಾಣಬಹುದು.

ಈ ರಾಶಿಯವರಿಗೆ ಸಹನೆ ಮತ್ತು ಕ್ಷಮಾಗುಣ ಬಹಳ ಇರುತ್ತದೆ. ಇದು ಇವರಿಗೆ ಎಲ್ಲಾ ಕೆಲಸಗಳನ್ನು ಮಾಡುವಾಗ ಜಯ ತಂದುಕೊಡುತ್ತದೆ. ಹಾಗೆಯೇ ಅನಿರೀಕ್ಷಿತವಾಗಿ ಧನಲಾಭ ಆಗುವ ಸಾಧ್ಯತೆ ಇದೆ. ಕುಟುಂಬದ ಆದಾಯದಲ್ಲಿ ಏಳಿಗೆ ಆಗುತ್ತದೆ. ವಾಹನ ಕೊಂಡುಕೊಳ್ಳುವ ಯೋಗ ಇದೆ. ಮಣ್ಣು ಹಿಡಿದರೂ ಕೂಡ ಬಂಗಾರವಾಗುವ ಸಮಯ ಇವರಿಗೆ ಬರುತ್ತದೆ. ಶ್ರೀ ವಿಷ್ಣು ಅಷ್ಟೋತ್ತರವನ್ನು ಈ ರಾಶಿಯವರು ಪಠಿಸಬೇಕು. ಈ ರಾಶಿಯ ಶುಭ ಸಂಖ್ಯೆ 1, 2, 5, 9. ಈ ರಾಶಿಯವರ ಶುಭ ದಿನ ಮಂಗಳವಾರ, ಭಾನುವಾರ ಮತ್ತು ಗುರುವಾರ ಮತ್ತು ಬುಧವಾರ ಆಗಿದೆ. ಶುಭ ಬಣ್ಣ ಕೆಂಪು ಮತ್ತು ಹಳದಿ ಆಗಿದೆ.

Leave A Reply

Your email address will not be published.