ಡಿಸೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಹಣಕಾಸು, ಆರೋಗ್ಯ, ಶಿಕ್ಷಣ, ಕುಟುಂಬ ಜೀವನ ಹೇಗಿರುತ್ತದೆ ನೋಡಿ

0 0

ಪ್ರತಿಯೊಂದು ರಾಶಿಯಲ್ಲಿ ಹುಟ್ಟಿದವರು ಬೇರೆ ಬೇರೆ ರೀತಿಯ ರಾಶಿ ಫಲವನ್ನು ಪಡೆಯುತ್ತಾರೆ. ಅದೇ ರೀತಿ ಪ್ರತಿಯೊಂದು ತಿಂಗಳಿನಲ್ಲಿ ಬೇರೆ ಬೇರೆ ರೀತಿಯ ರಾಶಿ ಫಲ ಇರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಜನಿಸಿದವರ ಹಣಕಾಸು, ಆರೋಗ್ಯ, ಶಿಕ್ಷಣ, ಕುಟುಂಬ ಜೀವನ ಹೇಗಿರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಶಿ ಚಕ್ರದ ಮೊದಲ ರಾಶಿಯಾದ ಮೇಷ ರಾಶಿ. ಈ ರಾಶಿಯ ಅಧಿಪತಿ ಮಂಗಳ. ಈ ರಾಶಿಯಲ್ಲಿ ಜನಿಸಿದವರು ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯುತ್ತಾರೆ. ಈ ತಿಂಗಳು ಇವರ ಕುಟುಂಬ ಜೀವನ ಚೆನ್ನಾಗಿರುತ್ತದೆ , ಕುಟುಂಬ ಕಾರ್ಯದಲ್ಲಿ ಭಾಗವಹಿಸಬಹುದು. ಈ ರಾಶಿಯವರು ಡಿಸೆಂಬರ್ ತಿಂಗಳಿನಲ್ಲಿ ಕೆಲವರ ಮನಸ್ತಾಪಗಳನ್ನು ಯಶಸ್ವಿಯಾಗಿ ಬಗೆಹರಿಸುತ್ತಾರೆ.

ಈ ರಾಶಿಯ ಮಹಿಳೆಯರು ಹಕ್ಕಿಯಂತೆ ಹಾರಾಡುವ ಮನಸ್ಥಿತಿಯನ್ನು ಹೊಂದುತ್ತಾರೆ. ಡಿಸೆಂಬರ್ ತಿಂಗಳಿನ ಎರಡನೇ ಮತ್ತು ಮೂರನೇ ವಾರ ಹೆಚ್ಚು ಸಂತೋಷದಿಂದ ಇರುತ್ತಾರೆ. ಈ ರಾಶಿಯವರು ಕುಟುಂಬದವರಿಗೆ, ಬಾಳ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಡಿಸೆಂಬರ್ ತಿಂಗಳಿನಲ್ಲಿ ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟವಾಗುತ್ತದೆ. ನೆನಪಿನ ಶಕ್ತಿಯ ವೃದ್ಧಿಯ ಬಗ್ಗೆ ಗಮನ ಹರಿಸಬೇಕು. ಸೋಮಾರಿತನದಿಂದ ಸಮಸ್ಯೆ ಸಂಭವಿಸಬಹುದು. ಮೇಷ ರಾಶಿಯವರು ಈ ತಿಂಗಳಿನಲ್ಲಿ ಕುತ್ತಿಗೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಿಶ್ರಾಂತಿ ಹಾಗೂ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಮಕ್ಕಳ ಆರೋಗ್ಯದಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ಏರಿಳಿತ ಕಾಣಬಹುದು. ಪೋಷಕರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.

ಉದ್ಯೋಗದಲ್ಲಿ ಈ ತಿಂಗಳು ಕೆಲವು ಸವಾಲುಗಳನ್ನು ಮತ್ತು ಕೆಲಸದ ಹೊರೆಯನ್ನು ಎದುರಿಸಬೇಕಾಗುತ್ತದೆ. ಉನ್ನತ ಅಧಿಕಾರಿಗಳು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ ತಾಳ್ಮೆಯಿಂದಿರಿ ಹಾಗೂ ಮಾತಿನ ಮೇಲೆ ಹಿಡಿತ ಇರಲಿ. ಈ ತಿಂಗಳ ಮೂರನೇ ವಾರದಲ್ಲಿ ಒತ್ತಡ ಕಡಿಮೆ ಆಗುವುದನ್ನು ಕಾಣಬಹುದು. ಉದ್ಯೋಗದ ವಿಷಯದಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ಏನಾದರೂ ಬದಲಾವಣೆಯ ಪ್ರಯತ್ನ ಮಾಡಿದರೆ ಒಳ್ಳೆಯದು. ಈ ತಿಂಗಳಿನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಂಭವ ಇದೆ.

ಈ ತಿಂಗಳು ಹಣ ಹೆಚ್ಚು ಖರ್ಚಾಗುವ ಸಂಭವವಿದೆ. ಈ ತಿಂಗಳಿನಲ್ಲಿ ಆದಾಯವೂ ಕಡಿಮೆ ಬರುತ್ತದೆ. ಡಿಸೆಂಬರ್ ಎರಡನೇ ವಾರದ ನಂತರ ಉದ್ಯಮಿಗಳಿಗೆ ಹೆಚ್ಚು ಒಳ್ಳೆಯದಾಗುತ್ತದೆ. ಈ ತಿಂಗಳು ಖರೀದಿ ಮಾಡುವುದನ್ನು ಕಡಿಮೆ ಮಾಡಬೇಕು. ಈ ತಿಂಗಳು ಮೇಷ ರಾಶಿಯ ಸ್ತ್ರೀಯರು ಸವಾಲುಗಳನ್ನು ಎದುರಿಸಬೇಕು ಈ ತಿಂಗಳ ಕೊನೆಯಲ್ಲಿ ಒಳ್ಳೆಯದಾಗುತ್ತದೆ. ಮೇಷ ರಾಶಿಯವರು ಪ್ರತಿದಿನ ಈಶ್ವರನ ಪೂಜೆ ಮಾಡಬೇಕು. ಶಿವಲಿಂಗಕ್ಕೆ ನೀರನ್ನು ಹಾಕಬೇಕು, ಶಿವನ ಸ್ತೋತ್ರವನ್ನು ಪಠಿಸಬೇಕು ಆಗ ಮೇಷ ರಾಶಿಯವರಿಗೆ ಸಮಸ್ಯೆಗಳು ಪರಿಹಾರವಾಗುತ್ತವೆ. ಸಾಲಬಾದಧೆಯಲ್ಲಿ ಇರುವವರು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸ್ವಲ್ಪ ಕಡಲೆ ಕಾಳು ಹಾಗೂ 1 ರೂಪಾಯಿ ನಾಣ್ಯವನ್ನು ಕಟ್ಟಿ ಅರಳಿ ಮರದ ಕೆಳಗೆ ಇಟ್ಟು ತಿರುಗಿ ನೋಡದೆ ಬರಬೇಕು. ಈ ಮಾಹಿತಿಯನ್ನು ಮೇಷ ರಾಶಿಯವರಿಗೆ ತಪ್ಪದೇ ತಿಳಿಸಿ.

Leave A Reply

Your email address will not be published.