2024ರ ವಾರ್ಷಿಕ ಭವಿಷ್ಯ ವೃಶ್ಚಿಕ ರಾಶಿಯವರು ಬಗ್ಗೆ ನೋಡೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಕೆಲವು ಶುಭಫಲ ಹಾಗೂ ಅಶುಭ ಫಲಗಳು ಸಿದ್ಧಿಸುತ್ತದೆ.

ವೃಶ್ಚಿಕ ರಾಶಿಯವರು ಜನರನ್ನು ಆಕರ್ಷಣೆ ಮಾಡುತ್ತಾರೆ, ಧನವನ್ನು ವಶ ಮಾಡಿಕೊಳ್ಳುತ್ತಾರೆ ಹಾಗೂ ಅಧಿಕಾರವನ್ನು ಕೂಡ ವಶ ಮಾಡಿಕೊಳ್ಳುತ್ತಾರೆ ಅದು ಈ ರಾಶಿಯವರ ವೈಶಿಷ್ಟ್ಯತೆ. ಜನವರಿ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ಸ್ವ-ಕ್ಷೇತ್ರದಲ್ಲಿ ಶುಕ್ರ ಗ್ರಹ ಹಾಗೂ ಬುಧ ಗ್ರಹದ ಉಪಸ್ಥಿತಿ ಇರುವುದರಿಂದ ಸಕಾರಾತ್ಮಕ ಶಕ್ತಿ ವೃದ್ದಿಯಾಗುತ್ತದೆ. ತೇಜಸ್ಸು ಹಾಗೂ ವರ್ಚಸ್ಸು ಹೆಚ್ಚಾಗುತ್ತದೆ. ಮಾತಿನಿಂದ ಹೆಚ್ಚು ಜನರನ್ನು ತಮ್ಮ ಕಡೆ ಸೆಳೆದುಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇದೆ.

ಯಾವುದೇ ವೃತ್ತಿ ರಂಗದಲ್ಲಿ ಇದ್ದರು ಅಥವಾ ವ್ಯವಹಾರದಲ್ಲಿ ಇದ್ದರು ನಾಯಕತ್ವ ಈ ರಾಶಿಯವರದ್ದೇ ಆಗಿರುತ್ತದೆ. ವ್ಯಾಸಂಗದ ಕ್ಷೇತ್ರದಲ್ಲಿ ಕೂಡ ಇವರದ್ದೇ ಮುಂದಾಳತ್ವ ವಹಿಸುವರು. ಹುಟ್ಟಿನಿಂದ ನಾಯಕತ್ವ ರಕ್ತಗತವಾಗಿ ಇರುತ್ತದೆ. ರವಿ ಗ್ರಹ ಮತ್ತು ಕುಜ ಗ್ರಹ 2ನೇ ಮನೆಯಲ್ಲಿ ಇರುವುದರಿಂದ ಹಣ ಕಾಸಿನ ವಿಚಾರದಲ್ಲಿ ಪ್ರಗತಿ ಸಾಧಿಸಲು ಅನುಕೂಲ ಮಾಡಿಕೊಡುತ್ತದೆ. ಆದಾಯ ಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ, ವಿವಿಧ ಮೂಲಗಳಿಂದ ಹಣ ಹರಿದು ಬರುತ್ತದೆ.

ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ. ಹಣದ ಗಳಿಕೆಯಲ್ಲಿ ಹೆಚ್ಚು ಯಶಸ್ಸು ಮತ್ತು ಪ್ರಗತಿ ದೊರಕುತ್ತದೆ. 6ನೇ ಮನೆಯಲ್ಲಿ ಗುರು ಗ್ರಹದ ಪರಿಣಾಮ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಗುರುವಿನ ಪ್ರಭಾವ ನಕಾರಾತ್ಮಕವಾಗಿ ಇರುವ ಕಾರಣ ಅನಾರೋಗ್ಯ ಹೆಚ್ಚಾಗಿ ಕಾಡುತ್ತದೆ.

ಆರೋಗ್ಯದ ಕಡೆ ಗಮನ ಕೊಡದೆ ಹೋದರೆ ಹೆಚ್ಚು ವೆಚ್ಚ ಆಗುತ್ತದೆ, ಕೈಯಲ್ಲಿ ಇದ್ದ ದುಡ್ಡು ಖಾಲಿ ಆಗುತ್ತಾ ಹೋಗುತ್ತದೆ. ಮೇ ತಿಂಗಳಿನಲ್ಲಿ ಗುರು ಗ್ರಹ 7ನೇ ಮನೆಗೆ ಪ್ರವೇಶ ಮಾಡುವುದರಿಂದ ಅದು ಶುಭಯೋಗ ತರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುತ್ತದೆ. ಕಂಕಣ ಭಾಗ್ಯ, ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ನೂತನ ಮನೆ ನಿರ್ಮಾಣ, ವಾಹನ ಖರೀದಿ, ಭೂಮಿ ಖರೀದಿ ಮಾಡಲು ಈ ಸಮಯ ಅನುಕೂಲಕರ.

5ನೇ ಮನೆಯಲ್ಲಿ ರಾವು ಗ್ರಹ ಇರುವ ಕಾರಣ ಹಿಂದೆ ಮುಂದೆ ಯೋಚಿಸದೆ ನಿರ್ಧಾರ ಕೈಗೊಳ್ಳಬಾರದು. ಮುಂಗೋಪ ಕಡಿಮೆ ಮಾಡಬೇಕು. ಒತ್ತಡ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾದ್ಯತೆ ಇದೆ. ಶಾಂತಿಯುತ ಯೋಚನೆ, ತಾಳ್ಮೆಯ ವರ್ತನೆ ತೋರಿ ಎಲ್ಲಾ ಕೆಲಸಗಳನ್ನು ಮಾಡುವುದು ಉತ್ತಮ. ಒಂದು ಬಾರಿ ಕಳೆದು ಹೋದ ಗೌರವ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ ಮಾತಿನಲ್ಲಿ ಮತ್ತು ಯೋಚನೆಯಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವುದು ಉತ್ತಮ.

5ನೇ ಮನೆಯಲ್ಲಿ ರಾಹು ಗ್ರಹ ಇರುವುದರಿಂದ ಜನವರಿ ತಿಂಗಳಿನಲ್ಲಿ 1ನೇ ಮನೆಯಲ್ಲಿ ಬುಧ ಗ್ರಹ ಮತ್ತು ಶುಕ್ರ ಗ್ರಹ ಒಟ್ಟಿಗೆ ಇರುವುದರಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ಉತ್ತಮ ಲಾಭ ಸಿಗುತ್ತದೆ. ಇಷ್ಟಪಟ್ಟ ಹುಡುಗ, ಹುಡುಗಿ ಮದುವೆಯಾಗುವ ಸಾಧ್ಯತೆ ಇದೆ. ಮಂಗಳ ಗ್ರಹ ರಾಹು ಗ್ರಹದ ಮೇಲೆ ಸಂಚಾರ ಮಾಡುವುದರಿಂದ ಏಪ್ರಿಲ್ ತಿಂಗಳಿಂದ ಜೂನ್ ತಿಂಗಳವರೆಗೂ ಏರು ಪೇರು ಜಾಸ್ತಿ ಇರುತ್ತದೆ.

ಗೌರವಕ್ಕೆ ಕುಂದು ಬರುತ್ತದೆ. ಅಪಮಾನ ಹಾಗೂ ಅವಮಾನಗಳು ಹೆಚ್ಚಾಗುತ್ತವೆ. ಅಕ್ಟೋಬರ್ ತಿಂಗಳಿನಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ ಮತ್ತು ಪ್ರಗತಿ ಸಾಧಿಸಲು ಸಾಧ್ಯ. ಉದ್ಯೋಗ ಮತ್ತು ವೃತ್ತಿಯಲ್ಲಿ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಹೊಸ ಪ್ರಯತ್ನಗಳಿಗೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಕ್ರಿಯಾತ್ಮಕ ಆಲೋಚನೆಗಳನ್ನು ಹೆಚ್ಚಾಗಿ ಮಾಡುವಿರಿ.

ವಿದ್ಯಾಭ್ಯಾಸದಲ್ಲಿ ಮನಸ್ಸು ಚಂಚಲವಾಗಿ ಇದ್ದರೆ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಸದೃಢವಾಗಿ ಮನಸನ್ನು ಏಕಾಗ್ರತೆ ಕಡೆ ಸೆಳೆದು ಓದಿನ ಕಡೆ ಗಮನ ಕೊಡಬೇಕು. 4ನೇ ಮನೆಯಲ್ಲಿ ಶನಿ ಗ್ರಹ ಸಂಚಾರ ಮಾಡ್ತಾ ಇರುವುದರಿಂದ. ಸಂಸಾರದಲ್ಲಿ ಸಣ್ಣ ಪುಟ್ಟ ಕಲಹಗಳು ಎದುರಾಗಿ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

ಅದೃಷ್ಟವಂತರಾಗಿ ಜೀವನ ಸಾಗಿಸಲು ಯಾವ ತೊಂದರೆಗಳೂ ಇಲ್ಲ ಆದರೆ ಕೆಲವು ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ ಮುಂದೆ ಸಾಗಬೇಕು. ಮನಸ್ಸು ನಿಯಂತ್ರಣದಲ್ಲಿ ಇರಬೇಕು. ದುಷ್ಟ ಚಟಗಳಿಂದ ದೂರ ಉಳಿಯಬೇಕು. ದೇವರ ಬಳಿ ಮನಸಿನ ಅಭಿಲಾಷೆ ಸಂಪದ ಮಾಡಿ ಎಂದು ಪ್ರಾರ್ಥನೆ ಮಾಡಬೇಕು. ಮನೆದೇವರಿಗೆ ಪೂಜೆ ಪುನಸ್ಕಾರ ಮಾಡುವುದು ಒಳಿತು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *