ನಿಮ್ಮ ವೋಟರ್ ಐಡಿ ಕಳೆದು ಹೋಗಿದ್ರೆ ಅಥವಾ ಹಾಳಾಗಿದ್ರೆ ಮೊಬೈಲ್ ನಲ್ಲಿ ಪಡೆಯುವ ಸುಲಭ ಮಾರ್ಗ

0 7

ಭಾರತದಲ್ಲಿ ಪ್ರತಿಯೊಂದು ಪ್ರಜೆ ಒಂದಿಷ್ಟು ದಾಖಲಾತಿಗಳನ್ನು ಹೊಂದಿರಬೇಕು. ಹಾಗೆಯೇ ಅವುಗಳೆಂದರೆ ಆಧಾರ್ ಕಾರ್ಡ್, ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಇನ್ನೂ ಮುಂತಾದವುಗಳು ಇವೆ. ಐಡಿ ಕಾರ್ಡ್ ಪಡೆಯಬೇಕು ಎಂದರೆ ಕನಿಷ್ಠ ಎಂದರೆ 18ವರ್ಷ ವಯಸ್ಸನ್ನು ಹೊಂದಿರಲೇಬೇಕು. ಐಡಿ ಕಾರ್ಡ್ ಇದ್ದರೆ ಮಾತ್ರ ಚುನಾವಣೆಗೆ ವೋಟ್ ಮಾಡಬಹುದು. ಆದ್ದರಿಂದ ಚುನಾವಣೆಗೆ ವೋಟ್ ಹಾಕುವ ಅಧಿಕಾರದ ಅವಧಿ 18 ವರ್ಷ ವಯಸ್ಸು ಆಗಿದೆ. ಆದ್ದರಿಂದ ನಾವು ಇಲ್ಲಿ ಆನ್ಲೈನ್ ನಲ್ಲಿ ಐಡಿ ಕಾರ್ಡ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಐಡಿ ಕಾರ್ಡ್ ಇದು ಭಾರತದಲ್ಲಿ 18 ವರ್ಷ ಮೀರಿದ ಯಾರೇ ಆಗಲಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದ ಚುನಾವಣಾ ಆಯೋಗ ನೀಡುವ ಈ ಕಾರ್ಡ್‌ ಅನ್ನು ಅಧಿಕೃತ ಗುರುತಿನ ಪುರಾವೆಯಾಗಿ ಬಳಸಬಹುದು. ಸಾಮಾನ್ಯವಾಗಿ ವೋಟರ್‌ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಿಲ್ಲ. ಏಕೆಂದರೆ ಅದು ಬಹಳ ವಿಳಂಬ ಹಾಗೂ ದೀರ್ಘ ಪ್ರಕ್ರಿಯೆ ಎಂಬುದು ಎಲ್ಲರ ಭಾವನೆ ಆಗಿದೆ. ಆದರೆ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಈಗ ಸರಳಗೊಳಿಸಿದ್ದು ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿಯೇ ವೋಟರ್‌ ಐಡಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಚುನಾವಣಾ ಆಯೋಗದ ವೆಬ್‌ಸೈಟ್‌ ಭಾರತದಲ್ಲಿನ ಚುನಾವಣಾ ಪ್ರಕ್ರಿಯೆಯನ್ನು ತಿಳಿಸುವ ಕೆಲಸ ಮಾಡುತ್ತದೆ.

ಜೊತೆಗೆ ಚುನಾವಣಾ ವೇಳಾಪಟ್ಟಿ ಹಾಗೂ ಮುಂದೆ ನಡೆಯುವ ಚುನಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಮೊದಲು ಮೊಬೈಲ್ ನಲ್ಲಿ ಕ್ರೋಮ್ ಆನ್ ಮಾಡಿಕೊಂಡು ಡೆಸ್ಕ್ಟಾಪ್ ಮೂಡ್ ಗೆ ಮಾಡಿಕೊಳ್ಳಬೇಕು. ನಂತರ www.nvsp.in ಸರ್ಚ್ ಕೊಡಬೇಕು. ಆಗ ಓಪನ್ ಆದ ನಂತರ ಲಾಗಿನ್ ನಲ್ಲಿ ಕ್ಲಿಕ್ ಮಾಡಬೇಕು. ಹಾಗೆಯೇ ರಿಜಿಸ್ಟರ್ ಆಗಬೇಕಾಗುತ್ತದೆ. ಫೇಸ್ಬುಕ್, ಟ್ವಿಟ್ಟರ್ ಯಾವುದರ ಮೂಲಕ ಬೇಕಾದರೂ ಲಾಗಿನ್ ಆಗಬಹುದು. ಇಲ್ಲವಾದಲ್ಲಿ ಕ್ರಿಯೇಟ್ ಅಕೌಂಟ್ ಗೆ ಕೊಟ್ಟು ಇಮೇಲ್ ಐಡಿ ಕೊಡಬೇಕು. ನಂತರ ಇಮೇಲ್ ಐಡಿಗೆ ಒಂದು ಲಿಂಕ್ ಬರುತ್ತದೆ. ಆಗ ಅದಕ್ಕೆ ಪಾಸವರ್ಡ್ ನ್ನು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಮತ್ತೆ ಬಂದು ಪಾಸವರ್ಡ್ ಕೊಟ್ಟು ಲಾಗಿನ್ ಆಗಬೇಕು. ನಂತರ ವೋಟರ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ ರಿಪ್ಲೇಸ್ಮೆಂಟ್ ಆಫ್ ವೋಟರ್ ಐಡಿ ಮೇಲೆ ಕ್ಲಿಕ್ ಮಾಡಬೇಕು.

ನಂತರ ಲೆಟ್ ಮಿ ಸ್ಟಾರ್ಟ್ ಗೆ ಕೊಡಬೇಕು. ನಂತರ ವೋಟರ್ ಐಡಿಯ ಹಳೇ ನಂಬರ್ ಇದ್ದರೆ ಅದನ್ನು ಕೊಟ್ಟು ಫೆಚ್ ಅ ಡೀಟೇಲ್ಸ್ ಗೆ ಕೊಟ್ಟು ಪ್ರೋಸೀಡ್ ಎಂದು ಕೊಡಬೇಕು. ಅದರಲ್ಲಿ ಹಳೇ ಐಡಿ ಕಾರ್ಡ್ ನಲ್ಲಿದ್ದ ವಿವರಗಳು ಬರುತ್ತವೆ. ನಂತರದಲ್ಲಿ ಕಂಟಿನ್ಯೂ ಎಂದು ಕೊಟ್ಟಾಗ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ ನಂತರ ಕಾರಣವನ್ನು ಬರೆಯಬೇಕು. ನಂತರ ಸೇವ್ ಮತ್ತು ಕಂಟಿನ್ಯೂ ಎಂದು ಕೊಟ್ಟಾಗ ಮೂರು ಆಯ್ಕೆಗಳು ಬರುತ್ತವೆ. ಎರಡನೇ ಆಯ್ಕೆಯನ್ನು ಒತ್ತಬೇಕು. ನಂತರ ಸೇವ್ ಮತ್ತು ಕಂಟಿನ್ಯೂ ಎಂದು ಕೊಟ್ಟಾಗ ಪೇಮೆಂಟ್ ಎಂದು ತೋರಿಸುತ್ತದೆ. 30ರೂಪಾಯಿಗಳನ್ನು ಬರೆದು ಕಂಟಿನ್ಯೂ ಎಂದು ಕೊಟ್ಟು ಸಬ್ಮಿಟ್ ಎಂದು ಕೊಡಬೇಕು. ನಂತರ ಒಂದು ತಿಂಗಳಿಗೆ ಪೋಸ್ಟ್ ಮೂಲಕ ಐಡಿ ಕಾರ್ಡ್ ಮನೆಗೆ ಬರುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.