ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮಕ್ಕಳನ್ನು ಬರೀ ಮೈಯಲ್ಲಿ ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾಕೆಂದರೆ ಸೂರ್ಯಾಸ್ತ ಮತ್ತು ಸೂರ್ಯೋದಯದಲ್ಲಿ ಹೆಚ್ಚು ವಿಟಮಿನ್ ಡಿ ಅಂಶ ಸಿಗುತ್ತದೆ
ಹೀಗಾಗಿ ಪ್ರತಿಯೊಬ್ಬರು ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಏಕಾಗ್ರ ಚಿತ್ತವಾಗಿ ನೋಡಿದರೆ ತುಂಬಾ ಒಳ್ಳೆಯದು ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್ನಂತೆ ಕಾರ್ಯ ನಿರ್ವಹಿಸುತ್ತದೆ ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ
ಹೀಗೆ ವಿಟಮಿನ್ ಡಿ ಬಹಳ ಮಹತ್ವವಾಗಿದೆ ಪೌಷ್ಟಿಕ ಆಹಾರ ಸೇವನೆಯ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ ಮನೆಯಲ್ಲೇ ಬೆಳೆಯುವ ಹಣ್ಣುಗಳು, ತರಕಾರಿಗಳ ಸೇವನೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಆರೋಗ್ಯ ಸುಧಾರಣೆಯನ್ನು ಮಾಡಿಕೊಳ್ಳಬಹುದು. ನಾವು ಈ ಲೇಖನದ ಮೂಲಕ ವಿಟಮಿನ್ ಡಿ ಕೊರತೆಯ ಸಮಸ್ಯೆ ಮತ್ತು ನಿರ್ಮೂಲನೆಯ ನ್ನು ತಿಳಿದುಕೊಳ್ಳೋಣ.
ವಿಟಮಿನ್ ಕೊರತೆಯಿಂದಾಗಿ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಹಾಗೆಯೇ ಅದರಲ್ಲಿ ವಿಟಮಿನ್ ಡಿ ಕೊರತೆಯುಂಟಾಗಿ ಸ್ನಾಯುಗಳಲ್ಲಿ ನೋವು ಕಂಡು ಬರುವ ಜೊತೆಗೆ ಸ್ವಲ್ಪ ನಡೆದರು ಸಹ ಸುಸ್ತಾಗುತ್ತದೆ ಮತ್ತು ಸಣ್ಣ ಪುಟ್ಟ ಕೆಲಸ ಮಾಡಿದರು ಆಯಾಸವಾಗುತ್ತದೆ ಚರ್ಮ ರೋಗ ಮತ್ತು ಮಹಿಳೆಯರಲ್ಲಿ ಕೂದಲು ಉದುರುವಿಕೆ ಕಂಡು ಬರುತ್ತದೆ ಹಾಗೆಯೇ ಅಂಗೈ ಮತ್ತು ಕಾಲುಗಳಲ್ಲಿ ಬೆವರುವಿಕೆ ಕಂಡು ಬರುತ್ತದೆ ಹಾಗೆಯೇ ಉಸಿರಾಟದ ತೊಂದರೆಯುಂಟಾಗುತ್ತದೆ
ಹಾಗೆಯೇ ರಕ್ತ ಹೀನತೆ ಯುಂಟಾಗುತ್ತದೆ ಹಾಗೆಯೇ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ಹಾರ್ಟ್ ಎಟಾಕ್ ಆಗುವ ಸಾಧ್ಯತೆ ಇರುತ್ತದೆ ಮೈ ಕೈ ನೋವು ಆಗುತ್ತದೆ ಹಾಗೂ ನೆನಪಿನ ಶಕ್ತಿ ಕಡಿಮೆ ಆಗುವುದು ಮತ್ತು ನಿದ್ರಾ ಹೀನತೆಗೆ ಒಳಗಾಗುವುದು ಸಹ ಕಂಡು ಬರುತ್ತದೆ ಹಾಗೂ ಮಾನಸಿಕ ಖಿನ್ನತೆ ಗೆ ಒಳಗಾಗುವುದು ಹಾಗೆಯೇ ಮೈ ಕೈ ನೋವು ಮತ್ತು, ಮಹಿಳೆಯರಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗುತ್ತದೆ ಹಾಗೆಯೇ ಡಯಾಬಿಟಿಸ್ ಬರಬಾರದು ಎಂದರೆ ವಿಟಮಿನ್ ಡಿ ಅಂಶ ಸರಿಯಾಗಿ ಇರಬೇಕು.
ಬಿಪಿ ನಿಯಂತ್ರಣದಲ್ಲಿ ಇರಬೇಕು ಅಂದರೆ ವಿಟಮಿನ್ ಡಿ ಇರಬೇಕು ಕ್ಯಾನ್ಸರ್ ಬರಬಾರದು ಎಂದರೆ ವಿಟಮಿನ್ ಡಿ ಇರುವ ಪದಾರ್ಥ ಬಳಸಬೇಕು ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಅನೇಕ ರೋಗಗಳು ಸಂಭವಿಸುತ್ತದೆ ತಿಂದಾತಹ ಆಹಾರದಲ್ಲಿನ ಕ್ಯಾಲ್ಸಿಯಂ ಅಂಶ ವಿಟಮಿನ್ ಡಿ ಕೊರತೆ ಇದ್ದರೆ ಮೂಳೆಗೆ ಕ್ಯಾಲ್ಸಿಯಂ ಸಿಗುವುದಿಲ್ಲ ಅನೇಕ ರೀತಿಯ ಮೂಳೆಗಳಿಗೆ ಸಂಭಂದಿಸಿದ ರೋಗಗಳು ಸಂಭವಿಸುತ್ತದೆ ಇವೆಲ್ಲ ಲಕ್ಷಣಗಳು ವಿಟಮಿನ್ ಡಿ ಕೊರತೆಯಿಂದ ಕಂಡು ಬರುತ್ತದೆ ವಿಟಮಿನ್ ಡಿ ಪ್ರಮಾಣ ಮೂವತ್ತು ಇದ್ದರೆ ಆರೋಗ್ಯ ಸರಿಯಾಗಿದೆ ಎನ್ನಲಾಗುತ್ತದೆ ಮೂವತ್ತ ಕಿಂತ ಕಡಿಮೆ ಇದ್ದರೆ ವಿಟಮಿನ್ ಡಿ ಕೊರತೆಯಾಗುತ್ತಿದೆ
ಇಪ್ಪತೊಂತ್ತಕಿಂತ ಕಡಿಮೆ ಇದ್ದರೆ ವಿಟಮಿನ್ ಡಿ ಕೊರತೆ ಇದೆ ಎನ್ನಲಾಗುತ್ತದೆ ಮತ್ತು ವಿಟಮಿನ್ ಡಿ ಕೊರತೆಯಾಗಲೂ ಕಾರಣವೇನೆಂದರೆ ಯಾವಾಗಲೂ ಮನೆ ಮತ್ತು ಆಫೀಸ್ ಒಳಗಡೆನೆ ಇದ್ದರೆ ವಿಟಮಿನ್ ಡಿ ಕೊರತೆಯಾಗುತ್ತದೆ ಹಾಗೆಯೇ ಸ್ವಲ್ಪ ಬಿಸಿಲಿಗೆ ಹೋದರು ನಾವು ಛತ್ರಿ ಬಳಸುತ್ತೇವೆ ಇದರಿಂದಲೂ ಸಹ ವಿಟಮಿನ್ ಡಿ ಯ ಕೊರತೆಯುಂತಾಗುತ್ತದೆ ಯಾವುದೇ ಖಾಯಿಲೆಗೆ ಸಂಭಂದಿಸಿದ ಮಾತ್ರೆಗಳನ್ನು ನಿರಂತರವಾಗಿ ಬಳಸುತ್ತಿದ್ದರೆಅಂತಹ ಸಂದರ್ಭದಲ್ಲಿ ವಿಟಮಿನ್ ಡಿ ಯ ಕೊರತೆಯುಂಟಾಗುತ್ತದೆ ಅಧಿಕ ತೂಕ ವಿದ್ದರು ಸಹ ವಿಟಮಿನ್ ಡಿಯ ಕೊರತೆ ಕಾಣಿಸಿಕೊಳ್ಳುತ್ತದೆ.
ವಿಟಮಿನ್ ಡಿ ಕೊರತೆಯುಂಟಾಗಬಾರದು ಎಂದರೆ ಬಿಸಿಲಿನಲ್ಲಿ ಒಣಗಿಸಿದ ಅಣಬೆಯನ್ನು ವಾರದಲ್ಲಿ ಎರಡು ದಿನ ತಿನ್ನುದರಿಂದ ವಿಟಮಿನ್ ಡಿಯ ಕೊರತೆವುಂತಾಗುದಿಲ್ಲ.ಹಾಗೆಯೇ ವಾರದಲ್ಲಿ ಎರಡು ದಿನ ಕಿತ್ತಳೆ ಹಣ್ಣನ್ನು ತಿನ್ನುದರಿಂದ ಮತ್ತು ಜ್ಯೂಸ್ ಮಾಡಿ ಕುಡಿಯುದರಿಂದ ವಿಟಮಿನ್ ಡಿಯ ಸಮಸ್ಯೆಯಿಂದ ಹೊರಬರಬಹುದು ದೇಶೀಯ ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವಾರದಲ್ಲಿ ಎರಡು ಬಾರಿ ತಿನ್ನುದರಿಂದ ವಿಟಮಿನ್ ಡಿಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಇವೆಲ್ಲವನ್ನು ಸುಮಾರು ಆರು ತಿಂಗಳ ವರೆಗೆ ತಿನ್ನುದರಿಂದ ವಿಟಮಿನ್ ಡಿಯ ಸಮಸ್ಯೆಯಿಂದ ಹೊರಬರಬಹುದು.
ಹಾಗೆಯೇ ಬರೀಗಣ್ಣಿನಿಂದ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೀಡುವುದರಿಂದ ವಿಟಮಿನ್ ಡಿ ಕೊರತೆಯಿಂದ ಹೊರಬರಬಹುದು ಬೆಳಿಗ್ಗೆ ಆರರಿಂದ ಎಳರವರೆಗಿನ ಸೂರ್ಯೋದಯ ಹಾಗೂ ಸಾಯಂಕಾಲ ಐದರವರೆಗಿನ ಸೂರ್ಯಾಸ್ತವನ್ನು ಬರಿ ಕಣ್ಣಿನಿಂದ ನೋಡಬೇಕು ಇದರಿಂದ ಕಣ್ಣಿನ ಮೂಲಕ ಯಥೇಚ್ಛವಾದ ವಿಟಮಿನ್ ಡಿ ಸಿಗುತ್ತದೆ ಹಾಗೆಯೇ ಬೆಳಿಗ್ಗೆ ವಾಕಿಂಗ್ ಯೋಗಾಸನ ವ್ಯಾಯಾಮ ಮಾಡುವುದರಿಂದ ವಿಟಮಿನ್ ಡಿ ಸಿಗುತ್ತದೆ ಈ ಮೂಲಕ ವಿಟಮಿನ್ ಡಿ ಕೊರತೆಯನ್ನು ನಿವಾರಿಸಿಕೊಳ್ಳಬಹುದು.