ಸಾಮಾನ್ಯವಾಗಿ ಎಲ್ಲರಿಗೂ ಹಲಸಿನಹಣ್ಣಿನ ಬಗ್ಗೆ ತಿಳಿದಿರುತ್ತದೆ ಎಲ್ಲರೂ ಕೂಡ ಹಲಸಿನ ಹಣ್ಣನ್ನು ತಿಂದಿರುತ್ತಾರೆ. ಹಲಸಿನಹಣ್ಣಿನ ಜೊತೆಗೆ ಹಲಸಿನ ಎಲ್ಲಿಯೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತುಂಬಾ ಉಪಯೋಗ ಆಗುತ್ತದೆ. ಇದನ್ನು ಹಲವು ನೋವು ನಿವಾರಣೆಗೆ ರಾಮಬಾಣ ಎಂದು ಕರೆಯಬಹುದು. ಹಲಸಿನ ಎಲೆಯಲ್ಲಿ ರೋಗನಿರೋಧಕ ಶಕ್ತಿ ಇದೆ. ಹಲಸಿನ ಎಲೆಯಿಂದ ಯಾವೆಲ್ಲ ರೀತಿಯ ಉಪಯೋಗಗಳಾಗುತ್ತದೆ ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಕೆಲವೊಬ್ಬರಿಗೆ ನರಗಳಲ್ಲಿ ನೋವು ಕಂಡು ಬರುತ್ತದೆ ಕೈಕಾಲುಗಳು ಸೋತು ಬರುತ್ತವೆ ಆಗ ಹಲಸಿನ ಎಲೆಯನ್ನು ಬಳಸಬಹುದು. ಕೆಲವು ಸಂದರ್ಭಗಳಲ್ಲಿ ಫೇಶಿಯಲ್ ಪ್ಯಾರಲಿಸಿಸ್ ನಲ್ಲಿಯೂ ಕೂಡ ಹಲಸಿನ ಎಲೆಗಳ ಸ್ವೇದವನ್ನು ಮಾಡಬಹುದು. ಇದನ್ನು ಆಯುರ್ವೇದದಲ್ಲಿ ಪನಸು ಪತ್ರ ಸ್ವೇದ ಎಂದು ಗುರುತಿಸಲಾಗಿದೆ. ಪನಸು ಪತ್ರ ಸ್ವೇದವನ್ನು ಮಾಡುವುದು ಹೇಗೆ ಎಂದರೆ ಹಲಸಿನ ಎಲೆಗಳನ್ನು ಕೊಯ್ದು ತರಬೇಕು ಅದನ್ನು ಚೆನ್ನಾಗಿ ತೊಳೆದು ಅದಕ್ಕೆ ಯಾವುದಾದರೂ ಎಣ್ಣೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಲೇಪನ ಮಾಡಿ ಅದನ್ನು ದೋಸೆ ಕಾವಲಿಯ ಮೇಲೆ ಇಟ್ಟು ಬಿಸಿಮಾಡಬೇಕು.

ಬಿಸಿ ಮಾಡಿರುವ ಎಣ್ಣೆ ಸವರಿರುವ ಹಲಸಿನ ಎಲೆಯನ್ನು ಫೇಶಿಯಲ್ ಪ್ಯಾರಾಲಿಸಿಸ್ ನಲ್ಲಿ ಮುಖಕ್ಕೆ ಶಾಖ ಕೊಡುವುದಕ್ಕೆ ಅಥವಾ ಕೈಕಾಲುಗಳಲ್ಲಿ ನರಗಳಲ್ಲಿ ಸೆಳೆತ ಬರುತ್ತಿದ್ದಾಗ ಅಲ್ಲಿ ಶಾಖ ಕೊಡುವುದಕ್ಕೆ ಇದನ್ನು ಬಳಸಬಹುದು. ಇದು ನರಗಳಿಗೆ ಮತ್ತು ಮಾಂಸಖಂಡಗಳಿಗೆ ಶಕ್ತಿಯನ್ನು ಕೊಡುತ್ತದೆ. ನೀವು ಕೂಡ ಇದರ ಪ್ರಯೋಗವನ್ನು ಮಾಡುವ ಮೂಲಕ ನೋವಿನಿಂದ ಹೊರಬರಬಹುದು.

ಹಲಸಿನ ಎಲೆಯನ್ನು ಚೆನ್ನಾಗಿ ಬಿಸಿಮಾಡಿ ಗಾಯದ ಮೇಲೆ ಕಟ್ಟಿದರೆ ನೋವು ಮಾಯವಾಗುತ್ತದೆ. ದೇಹ ಶುದ್ಧೀಕರಣಕ್ಕೆ ಇದು ತುಂಬಾ ಒಳ್ಳೆಯದು ಹಲಸಿನ ಎಲೆಯು ಆಂಟಿ ಕ್ಯಾನ್ಸರ್ ಗುಣವನ್ನು ಹೊಂದಿದೆ. ಹಲಸಿನ ಎಲೆ ಯಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯವಾಗುತ್ತದೆ ದೇಹದ ತೂಕವನ್ನು ಕರಗಿಸಿಕೊಳ್ಳುವುದಕ್ಕು ಉಪಯುಕ್ತವಾಗಿದೆ.

ಹಲಸಿನ ಎಲೆಯನ್ನು ಚೆನ್ನಾಗಿ ತೊಳೆದು ಅದರ ಕಷಾಯವನ್ನು ಮಾಡಿ ಕುಡಿಯುವುದರಿಂದ ದೇಹದ ಮೇಲೆ ಉತ್ತಮ ರೀತಿಯ ಪರಿಣಾಮ ಉಂಟಾಗುತ್ತದೆ. ನೀವು ಕೂಡ ಹಲಸಿನ ಎಲೆಯನ್ನು ಬಳಸಿ ಅದರ ಉಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ಈ ಮಾಹಿತಿಯನ್ನು ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *