ವಿಷ್ಣುದಾದ ಜೊತೆ ನಟಿ ಮಾಲಾಶ್ರೀ ಸಿನಿಮಾ ಮಾಡಿಲ್ಲ ಯಾಕೆ ಗೊತ್ತೇ

movies

ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರಾಗಿತ್ತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂತೆಯೇ ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅನೇಕ ಚಿತ್ರಗಳಲ್ಲಿ ನಟಿಸಿ ಜನಮೆಚ್ಚುಗೆಯನ್ನು ಪಡೆದಿದ್ದಾರೆ. 90ರ ದಶಕದಲ್ಲಿ ಮಹಾರಾಣಿಯಾಗಿ ಚಿತ್ರರಂಗದಲ್ಲಿ ಮೆರೆದಿದ್ದಾರೆ. ಆದರೆ ಇವರು ಕನ್ನಡದ ಮೇರುನಟ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆಯಲ್ಲಿ ನಟಿಸಿಲ್ಲ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಾಲಾಶ್ರೀ ಅವರು ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅನೇಕ ಹೊಸ ಕಲಾವಿದರುಗಳು ಮಾಲಾಶ್ರೀಯವರಿಗೆ ನಟಿಸಿ ದೊಡ್ಡಮಟ್ಟದ ಸ್ಟಾರ್ ಗಿರಿಯನ್ನು ಸಹ ಪಡೆದಿದ್ದಾರೆ. ಮಾಲಾಶ್ರೀ ಅವರು ಡಾಕ್ಟರ್ ರಾಜಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಹಾಗೆಯೇ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಸಹ ಮಾಲಾಶ್ರೀಯವರ ನಟನೆಯನ್ನು ಮಾಡಿಲ್ಲ. ಮಾಲಾಶ್ರೀ ಅವರು ವಿಷ್ಣುವರ್ಧನ್ ಅವರ ಜೊತೆ ನಟನೆ ಮಾಡದೇ ಇರಲು ಹಲವು ಕಾರಣಗಳು ಇದೆ ಎಂದು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಖರತೆ ಇಲ್ಲ.

ಮಾಲಾಶ್ರೀ ಅವರು ಸಿನಿಮಾರಂಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಯಾವುದೇ ಸಿನಿಮಾವನ್ನು ಒಪ್ಪಿಕೊಂಡರು ಸಹ ಅದು ಸೂಪರ್ ಹಿಟ್ ಆಗುತ್ತಿದ್ದವು. ಕ್ಷಣಕಾಲವೂ ಸಮಯ ಸಿಗದೇ ಬ್ಯುಸಿಯಾಗಿದ್ದರು. ಅಂತಹ ದಿನದಲ್ಲಿ ಮಾಲಾಶ್ರೀ ಅವರನ್ನು ಪತ್ರಕರ್ತರೊಬ್ಬರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ಮಾಲಾಶ್ರೀ ಅವರು ತಮ್ಮ ಯಶಸ್ಸಿನ ಬಗ್ಗೆ ಹೇಳುತ್ತಾ ಹೇಳುತ್ತಾ ಒಂದು ಪ್ರಾಣಿ ಕೂಡ ನನ್ನ ಜೊತೆ ನಟಿಸಿದರು ಕೂಡ ಅದು ಸೂಪರ್ಸ್ಟಾರ್ ಆಗುತ್ತದೆ ಎಂದು ಹೇಳುತ್ತಾರೆ. ಈ ಸುದ್ದಿ ಹೆಚ್ಚು ಪ್ರಚಾರ ವಾಗುತ್ತದೆ. ಈ ಮಾತನ್ನು ಕೇಳಿದ ವಿಷ್ಣುವರ್ಧನ್ ಅವರು ಮಾಲಾಶ್ರೀ ಅವರೊಂದಿಗೆ ನಟಿಸುವುದಿಲ್ಲವೆಂದು ಹೇಳಿದ್ದಾರೆಂದು ಸುದ್ದಿಯಾಗುತ್ತದೆ. ಈ ವಿಚಾರ ಗಾಳಿಸುದ್ದಿಯಾಗಿಯೇ ಹರಡುತ್ತದೆ.

ಮತ್ತೊಂದು ಕಾರಣವೆಂದರೆ ಸಾವಿರ 1991 ರ ಕಾಲದಲ್ಲಿ ವಿಷ್ಣುವರ್ಧನ್ ನಟನೆಯ ಲಯನ್ ಜಗಪತಿ ರಾಯ್ ಹಾಗೂ ಮಾಲಾಶ್ರೀ ಮತ್ತು ಅಂಬರೀಶ್ ಅಭಿನಯದ ಹೃದಯ ಹಾಡಿತು ಎರಡು ಚಿತ್ರಗಳು ಬಿಡುಗಡೆಗೆ ತಯಾರಾಗಿದ್ದವು. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಅಂಬರೀಶ್ ಅವರಿಗೆ ಕರೆ ಮಾಡಿ ನಿಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲು ಹೇಳುತ್ತಾರೆ. ಆದರೆ ಮಾಲಾಶ್ರೀ ಅವರ ಒತ್ತಾಯದ ಮೇರೆಗೆ ಚಿತ್ರ ಮೊದಲೇ ಬಿಡುಗಡೆಯಾಗುತ್ತದೆ. ಆದಕಾರಣ ಲಯನ್ ಜಗಪತಿ ರಾಯ್ ಚಿತ್ರವು ಹೆಚ್ಚು ಯಶಸ್ಸನ್ನು ಕಾಣುವುದಿಲ್ಲ. ಅಷ್ಟು ಹೇಳಿದರು ಮಾಲಾಶ್ರೀ ಅವರು ಚಿತ್ರವನ್ನು ಮೊದಲೇ ಬಿಡುಗಡೆ ಮಾಡಿಸಿದ ಕಾರಣ ವಿಷ್ಣುವರ್ಧನ್ ಅವರಿಗೆ ಬೇಸರವಾಗಿ ಅವರ ಜೊತೆ ನಟಿಸುವುದಿಲ್ಲವೆಂದು ಹೇಳಿದ್ದಾರೆಂದು ಸುದ್ದಿಯಾಗುತ್ತದೆ. ಅದೇನೇ ಕಾರಣವಾಗಿದ್ದರೂ ಇವರಿಬ್ಬರ ಅಭಿನಯದ ಚಿತ್ರ ಪ್ರೇಕ್ಷಕರಿಗೆ ನೋಡಲು ಸಿಗಲಿಲ್ಲ.

Leave a Reply

Your email address will not be published. Required fields are marked *