Virgo Horoscope: ಕನ್ಯಾ ರಾಶಿಯವರ ಪಾಲಿಗೆ ಈ ವರ್ಷದ ಯುಗಾದಿ ಹೇಗಿರತ್ತೆ ತಿಳಿದುಕೊಳ್ಳಿ

0 13

Virgo Horoscope: ವೈದಿಕ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭವಾಗುತ್ತಿದೆ ಮತ್ತು ಈ ದಿನ ಬುಧವಾರ ಬಂದಿದೆ. ಹೀಗಾಗಿ ಬುಧನನ್ನು ಈ ಹೊಸ ವರ್ಷದ ರಾಜ ಎಂದು ಪರಿಗಣಿಸಲಾಗುತ್ತಿದೆ ಮತ್ತು ಶುಕ್ರನನ್ನು ಈ ಹೊಸ ವರ್ಷದ ಮಂತ್ರಿ ಎಂದು ಪರಿಗಣಿಸಲಾಗುತ್ತಿದೆ.

ಈ ಹೊಸ ವರ್ಷದ ಹೆಸರು ಪೊಂಗಲ್ ಅಲ್ಲದೇ ಈ ಹೊಸ ವರ್ಷ ಅಪರೂಪದ ಕಾಕತಾಳೀಯದಿಂದ ಆರಂಭವಾಗುತ್ತಿದೆ. ಹೊಸ ವರ್ಷದಲ್ಲಿ ಶನಿದೇವನು 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ಈ ಹಿಂದೂ ಹೊಸ ವರ್ಷವು ಎಲ್ಲಾ ದ್ವಾದಶ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿದೆ. ಈ ಯುಗಾದಿ ವರ್ಷದಲ್ಲಿ ಕನ್ಯಾ ರಾಶಿಯವರಿಗೆ ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

ಕನ್ಯಾ ರಾಶಿ ಹಿಂದೂ ಜ್ಯೋತಿಷ್ಯದ 12 ರಾಶಿ ವ್ಯವಸ್ಥೆಗಳಲ್ಲಿ ಆರನೆಯದು ಉತ್ತರ ಅಥವಾ ಉತ್ತರ ಫಲ್ಗುಣಿ ನಕ್ಷತ್ರ 2, 3, 4 ಪಾದಗಳು, ಹಸ್ತಾ ನಕ್ಷತ್ರ, ಚಿತ್ರ ನಕ್ಷತ್ರ 1 ಮತ್ತು 2 ಚರಣಗಳನ್ನು ಕನ್ಯಾ ರಾಶಿಯ ಅಡಿಯಲ್ಲಿ ಬರುತ್ತದೆ ಕನ್ಯಾ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನವೆಂಬರ್‌ 29ರವರೆಗೆ ರಾಹು 8ನೇ ಮನೆಯಲ್ಲಿ ಹಾಗೂ ಗುರು8ನೇ ಮನೆಯಲ್ಲಿ ಇರಲಿದೆ. ಶನಿ ನಿಮ್ಮ 6ನೇ ಮನೆಯಲ್ಲಿ ಕೇತು ನಿಮ್ಮ 3ನೇ ಮನೆಯಲ್ಲಿ ಇರಲಿದೆ.

ಇದನ್ನೂ ಓದಿ..ಕುಂಭ ರಾಶಿಯವರಿಗೆ ಈ ವರ್ಷ ಶನಿಯಿಂದ ತುಂಬಾ ಒಳ್ಳೆಯ ಫಲಗಳು ಸಿಗುತ್ತೆ ಯಾಕೆಂದರೆ..

ಈ ಅವಧಿ ನಿನಗೆ ಮಿಶ್ರಫಲ. ರಾಹು-ಗುರು ಅಶುಭ ಫಲ ನೀಡಲಿದೆ ಶನಿ ಶುಭ ಫಲ ನೀಡಿದೆ. ಈ ವರ್ಷ ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ, ಕೆಲಸದಲ್ಲಿ ಬದಲಾವಣೆ ಬಯಸುವವರಿಗೆ ಒಳ್ಳೆಯ ಅವಕಾಶ ದೊರೆಯಲಿದೆ. ನಿಮ್ಮ ಪ್ರತಿಭೆಗೆ ತಕ್ಕ ಗೌರವ ಸಿಗಲಿದೆ. ಪಂಚಮ ಶನಿ ಬಿಡುಗಡೆಯಾಗಿರುವುದರಿಂದ ನಿಮಗೆ ನೆಮ್ಮದಿ ಸಿಗಲಿದೆ.

ಶನಿಯು ಮೂರನೇ ಮನೆ ನೋಡುತ್ತಿರುವುದರಿಂದ ಸ್ನೇಹಿತರಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಅಷ್ಟಮದಲ್ಲಿ ಗುರು ಚಂಡಾಲ ಯೋಗವಿರುವುದರಿಂದ ಸಂಗಾತಿ ಕುರಿತು ತಪ್ಪು ಕಲ್ಪನೆ ಬರಬಹುದು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಪಾಲುದಾರರು ಮೋಸ ಮಾಡಬಾರದು.

ಸ್ವಂತ ಉದ್ಯೋಗ ಮಾಡುವವರು ತುಂಬಾ ಹೂಡಿಕೆ ಮಾಡದಿರುವುದು ಒಳ್ಳೆಯದು. ಅಲ್ಲದೆ ನೀವು ಯಾರಿಗೂ ಸಾಲ ನೀಡದಿದ್ದರೆ ಒಳ್ಳೆಯದು. ಹಣ ನೀಡಿದರೆ ಖಂಡಿತ ವಾಪಾಸು ಬರಲ್ಲ. ಹೂಡಿಕೆ, ಆನ್‌ಲೈನ್‌ ವ್ಯವಹಾರಗಳಲ್ಲಿ ತುಂಬಾ ಎಚ್ಚರಿಕೆವಹಿಸಬೇಕಾಗಿದೆ. ಯಾರೋ ಹೇಳಿದರು ಅಂತ ಹಣ ಹೂಡಿಕೆ ಮಾಡುವುದು ಮಾಡಿದರೆ ಮೋಸ ಹೋಗುವಿರಿ.

ಇದನ್ನೂ ಓದಿ...ಮಕರ ರಾಶಿಗೆ ಗುರುಬಲ, ಈ ಯುಗಾದಿ ತಿಂಗಳಲ್ಲಿ ನಿಮ್ಮ ಲೈಫ್ ಹೇಗಿರತ್ತೆ ಗೊತ್ತಾ..

ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಹಾಕಬೇಡಿ. ನಿಮ್ಮ ಬೆಲೆ ಬಾಳುವ ವಸ್ತುಗಳು ಕಳೆದು ಹೋಗದಂತೆ ಜಾಗ್ರತೆವಹಿಸಿ. ನಿಮ್ಮ ಆರೋಗ್ಯದ ಕಡೆ ಕೂಡ ಗಮನ ಹರಿಸಿ. ಶನಿವಾರ ಶನಿ ದೇವಾಲಯಕ್ಕೆ ಸಾಸಿವೆ ಎಣ್ಣೆ ಹಾಗೂ ಎಳ್ಳು ಅರ್ಪಿಸಿ.

Leave A Reply

Your email address will not be published.