Ultimate magazine theme for WordPress.

ಕುಂಭ ರಾಶಿಯವರಿಗೆ ಈ ವರ್ಷ ಶನಿಯಿಂದ ತುಂಬಾ ಒಳ್ಳೆಯ ಫಲಗಳು ಸಿಗುತ್ತೆ ಯಾಕೆಂದರೆ..

0 949

Aquarius Horoscope Today: ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಮಾತಿನಂತೆ ಹಳೆಯ ವರ್ಷ ಕಳೆದು ಹೊಸ ವರ್ಷವನ್ನು ಬರಮಾಡಿಕೊಂಡು ಶುಭಕೃತ ಸಂವತ್ಸರದಿಂದ ಶೋಭಾಕೃತ ಸಂವತ್ಸರದ ಕಡೆ ಮುಖ ಮಾಡಿದ್ದೇವೆ. ಹಳೆಯ ದಿನಗಳಲ್ಲಿ ಅನುಭವಿಸಿದ ಕಷ್ಟಗಳಿರಬಹುದು ಸುಖವಿರಬಹುದು ಎಲ್ಲವೂ ಸಹ ಮುಗಿದ ಕಾಲವಾಗಿದೆ. ಈ 2023ರಿಂದ ಮುಂದಿನ 2024ರ ಯುಗಾದಿಯ ತನಕ ಕುಂಭ ರಾಶಿಯ ವರ್ಷ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಕುಂಭ ರಾಶಿಗೆ ಸಾಡೇಸಾತ್ ಶನಿಯು 18 ಜನವರಿ 2023ಕ್ಕೆ ಪ್ರವೇಶ ಮಾಡಿದ್ದಾನೆ. ರಾಶಿಯ ಅಧಿಪತಿಯೂ ಸಹ ಶನಿಯೆ ಆಗಿದ್ದು ಇದನ್ನು ಜನ್ಮ ಶನಿ ಎನ್ನುತ್ತಾರೆ. ಗುರುವು ಏಪ್ರಿಲ್24 ರ ತನಕ ನಿಮ್ಮ ರಾಶಿಯಲ್ಲಿ ಇರುತ್ತಾನೆ. ರಾಹುವು ಮೂರನೇ ರಾಶಿಯಲ್ಲಿ ಅಕ್ಟೋಬರ್ ತನಕವು ಇರಲಿದ್ದು, ಪುನಃ ಎರಡನೇ ರಾಶಿಗೆ ರಾಹುವು ಬರಲಿದ್ದಾನೆ. ಏಪ್ರಿಲ್ ನಿಂದ ಅಕ್ಟೋಬರ್ ತನಕ ರಾಹು ಹಾಗೂ ಗುರುವಿನ ಸಂಯೋಗವಿರಲಿದ್ದು, ಈ ಸಂಯೋಗದಿಂದಾಗಿ ಬಹಳಷ್ಟು ಒಳ್ಳೆಯ ಕೆಲಸಗಳು ನಡೆಯಲಿವೆ. ಅದರ ಜೊತೆಯಲ್ಲಿ ದೀರ್ಘಕಾಲಿಕ ಸಮಸ್ಯೆಗಳು ಪರಿಹಾರವಾಗುತ್ತವೆ.

2023ರ ಶೋಭಾಕೃತ ಸಂವತ್ಸರದಲ್ಲಿ ಕುಂಭ ರಾಶಿಯ ರಾಜಕೀಯ ವ್ಯಕ್ತಿಗಳಿಗೆ ಶುಭವಾಗಲಿದ್ದು, ಅವರ ಅವಮಾನ ಅಪಮಾನಗಳಿಗೆ ಉತ್ತರ ನೀಡುವ ಕಾಲವಾಗಿದೆ. ಅವರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ. ಬಹಳ ಹಳೆಯದಾದ ಕೋರ್ಟ್ ಕೇಸ್ ಗಳು, ವ್ಯಾಜ್ಯಗಳು ಈ ಸಮಯದಲ್ಲಿ ಬಗೆಹರಿಯಲಿದ್ದು, ಪಿತ್ರಾರ್ಜಿತ ಆಸ್ತಿಗಳು ದೊರಕುವ ಸಂಭವು ನಿಚ್ಚಳವಾಗಿ ಕಾಣುತ್ತಿದೆ. ಶನಿಯ ದೃಷ್ಟಿ ಸಪ್ತಮದ ಕಡೆ ಇರುವುದರಿಂದ ಹೊಸದಾಗಿ ಉದ್ಯೋಗಗಳನ್ನು ಶುರು ಮಾಡುವವರು, ಸಣ್ಣಪುಟ್ಟ ಹೋಟೆಲ್’ಗಳನ್ನು ನಡೆಸುವ ಇಚ್ಛೆ ಇರುವವರು ಅತ್ಯಂತ ಜಾಗರೂಕತೆಯಿಂದ ಕೆಲಸಗಳನ್ನು ನಿರ್ವಹಸಿಬೇಕು.

ಇದನ್ನೂ ಓದಿ..ಮಾರ್ಚ್ 15 ರಿಂದ ಗುರುಬಲ ಶುರು, ಈ 5 ರಾಶಿಯವರ ಜೀವನ ಸಂಪೂರ್ಣ ಬದಲಾಗುತ್ತೆ

ಕುಂಭ ರಾಶಿಯಲ್ಲಿ ಜನಿಸಿದವರು ಈ 2023ನೇ ಇಸವಿಯಲ್ಲಿ ಇರುವಂತಹ ಕೆಲಸ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡುವ ಆಲೋಚನೆಯಿರುವವರು, ಹಣಕಾಸಿನ ಮೂಲಗಳ ಬಗ್ಗೆ ಅತೀ ಜಾಗರೂಕರಾಗಿ ವರ್ತಿಸಿ. ಕೆಲಮೊಮ್ಮೆ ಈ ವ್ಯವಹಾರದಲ್ಲಿ ಮೋಸ ಹೋಗುವುದು ಹಾಗೂ ನಷ್ಟಗಳನ್ನು ಶನಿಯ ಪ್ರಭಾವದಿಂದ ಕಾಣುವಂತಹ ಪ್ರಸಂಗಗಳು ಎದುರಾಗುತ್ತವೆ. ಅಕ್ಟೋಬರನಿಂದ ಹಣಕಾಸಿನ ಕಷ್ಟಗಳು ಬರಲಿದ್ದು, ಮೊದಲಿನಿಂದಲೇ ಆದಷ್ಟು ಖರ್ಚುನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಉತ್ತಮ.

ಕೆಲಸ ಮಾಡುವ ಜಾಗದಲ್ಲು ಸಮಸ್ಯೆಗಳು ಉಂಟಾಗಿ, ಕೆಲಸವನ್ನು ಬದಲಾವಣೆ ಮಾಡುವ ಸಂದರ್ಭಗಳು ಬರಬಹುದು. ಅಂತಹ ಸಮಯದಲ್ಲಿ ಮುಂದಿನ ಕೆಲಸವನ್ನು ಹುಡುಕುವಾಗ ಕಾಳಜಿ ವಹಿಸಿಕೊಳ್ಳಿ. ಆರೋಗ್ಯದಲ್ಲಿ ಏರುಪೇರುಗಳು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತವೆ. ಜನ್ಮತಃ ಶನಿ ಇರುವುದರಿಂದ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ಅಗಾಗೆ ಕಾಡುತ್ತವೆ‌. ಅದಕ್ಕಾಗಿ ಹೊರಗಿನ ಆಹಾರವನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹೆಚ್ಚಾಗಿ ಶುದ್ಧವಾದ ನೀರನ್ನು ಕುಡಿಯುತ್ತಿರಿ‌. ಮಾನಸಿಕವಾಗಿ ಒತ್ತಡವಾಗುತ್ತದೆ.

ತಂದೆ ತಾಯಿಯ ಬಗ್ಗೆ ಕಾಳಜಿಯಿರಲಿ. ಮನೆಯಲ್ಲಿ ವಯಸ್ಸಾದವರು ಇದ್ದರೆ, ಅವರ ಬಗ್ಗೆ ಇದೊಂದು ವರ್ಷ ಅತ್ಯಂತ ಕಾಳಜಿ ವಹಿಸುವುದು ಅವಶ್ಯವಿದೆ. ಶತೃಬಾಧೆ ನಿಮ್ಮನ್ನು ಹೆಚ್ಚಾಗಿ ಬಾಧಿಸಲಾರದು, ಯಾಕೆಂದರೆ ನೀವು ಮೊದಲಿನಿಂದಲೂ ಕಷ್ಟಗಳನ್ನು ಕಂಡು ಗಟ್ಟಿಯಾಗಿರುತ್ತಿರಿ. ಹಾಗಾಗಿ ಇದ್ಯಾವುದು ನಿಮಗೆ ದೊಡ್ಡ ಹೊಡೆತ ನೀಡಲಾರದು. ಯಾರಾದರೂ ಹೇಳಿದರು ಎಂದು ಏನನ್ನು ಮಾಡಲು ಹೋಗಬೇಡಿ, ನಿಮ್ಮ ರಾಶಿಯಲ್ಲಿ ಶನಿಯಿದ್ದಾನೆ ಎಂಬುದು ನಿಮಗೆ ನೆನಪಿರಲಿ.

ವಿದ್ಯಾರ್ಥಿಗಳಿಗೆ ಈ ವರ್ಷ ತುಂಬಾ ಉತ್ತಮ ಎನ್ನುವಂತಿಲ್ಲ. ನಿಮ್ಮ ಪರಿಶ್ರಮಕ್ಕೆ ಫಲ ಸಿಗುತ್ತದೆಯೆ ಹೊರತು ಅದೃಷ್ಟದಿಂದ ಪರೀಕ್ಷೆಗಳನ್ನು ಪಾಸು ಮಾಡಲಾರಿರಿ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವವರು ಇನ್ನು ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಸ್ಥಿರಾಸ್ತಿಗಳನ್ನು ಕಳೆದುಕೊಳ್ಳುವ ಸಂದರ್ಭಗಳು ಸೃಷ್ಟಿಯಾದರೂ, ಆದಷ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಕಾನೂನಾತ್ಮಕ ಸಮಸ್ಯೆಗಳು ಎದುರಾಗಲಿವೆ. ಯಾರ ಜಗಳಗಳಿಗೂ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷ ಕುಂಭರಾಶಿಯವರಿಗೆ ಜಾಗ್ರತೆಯಿಂದ ಇದ್ದರೆ ಶುಭವಾಗುತ್ತದೆ.

ಇದನ್ನೂ ಓದಿ..ಇಂದಿನ ಮಧ್ಯರಾತ್ರಿಯಿಂದಲೇ ಈ 8 ರಾಶಿಯವರಿಗೆ ಮಂಜುನಾಥನ ಕೃಪೆ, ಹಣಕಾಸಿನ ವಿಚಾರದಲ್ಲಿ ಸಿಗಲಿದೆ ದೊಡ್ಡ ಲಾಭ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.