Ultimate magazine theme for WordPress.

ಸುಂದರವಾದ ಹೆಂಡತಿ ಮುದ್ದಾದ ಮಕ್ಕಳಿದ್ದರು ಮತ್ತೊಬ್ಬ ಹೆಣ್ಣಿನ ಸಹವಾಸ ಮಾಡಿದ ಗಂಡ, ಕೊನೆಗೆ ಸಂಸಾರದ ಗತಿ ಏನಾಗಿದೆ ಗೊತ್ತಾ..

0 4,092

Viral News Kannada: ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯರ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕು. ಆಗ ಮಾತ್ರ ಒಂದು ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಮದುವೆಯಾದ ಮೇಲೆ ನಿಮ್ಮ ಸಂಗಾತಿಯ ಜೊತೆಗೆ ನೀವು ಎಷ್ಟು ಒಳ್ಳೆಯತನದಲ್ಲಿ ಇರುತ್ತೀರೋ, ಪ್ರಾಮಾಣಿಕವಾಗಿ ಇರುತ್ತೀರೋ ಅಷ್ಟು ನಿಮ್ಮ ಬದುಕು ಚೆನ್ನಾಗಿರುತ್ತದೆ. ಆದರೆ ಒಂದು ಸಾರಿ ನಂಬಿಕೆ ಕಳೆದುಕೊಂಡರೆ ಆ ಸಂಸಾರ ಮತ್ತು ಸಂಬಂಧ ಎರಡು ಕೂಡ ಮೊದಲಿನ ಹಾಗೆ ಉಳಿಯುವುದಿಲ್ಲ.

ಇಂಥ ಹಲವು ಘಟನೆಗಳನ್ನು ನಾವು ಬದುಕಿನಲ್ಲಿ ನೋಡುತ್ತಲೇ ಇರುತ್ತೇವೆ. ಅಂಥದ್ದೊಂದು ಘಟನೆ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಆಗಿರುವುದು ಏನು ಎಂದರೆ, ರವಿ ಗೌಡ ಎನ್ನುವ ವ್ಯಕ್ತಿ ಮಂಡ್ಯ ಜಿಲ್ಲೆಯ ಕೆಂಟಗೋಸನಹಳ್ಳಿಯಲ್ಲಿ ವಾಸವಿದ್ದ ವ್ಯಕ್ತಿ, ಈತನಿಗೆ ಬೆಂಗಳೂರಿಗೆ ಸೇರಿದ ಯೋಗಿತಾ ಎನ್ನುವ 27 ವರ್ಷದ ಹುಡುಗಿಯ ಜೊತೆಗೆ ಮದುವೆ ಆಗಿತ್ತು. ಇವರಿಬ್ಬರ ಮದುವೆ ನಡೆದದ್ದು 9 ವರ್ಷಗಳ ಹಿಂದೆ.

Viral News Kannada

ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ, ಇಬ್ಬರು ಮಕ್ಕಳಿದ್ದಾರೆ. ಸುಂದರವಾದ ಈ ಕುಟುಂಬದಲ್ಲಿ ಒಂದೂವರೆ ವರ್ಷಗಳ ಹಿಂದೆ ಬೆಳಕಿಗೆ ಬಂದ ಒಂದು ವಿಷಯದಿಂದ ಅಲ್ಲೋಲ ಕಲ್ಲೋಲವೆ ಆಗಿ ಹೋಗಿದೆ. ಸುಂದರವಾದ ಹೆಂಡತಿ ಜೊತೆಗೆ ಇಬ್ಬರು ಮುದ್ದಾದ ಮಕ್ಕಳು ಇದ್ದರು ಕೂಡ, ರವಿಗೌಡ ತನ್ನ ಊರಿನಲ್ಲೇ ಮತ್ತೊಬ್ಬ ಮಹಿಳೆಯನ್ನು ಪ್ರೀತಿಸುವುದಕ್ಕೆ ಶುರು ಮಾಡಿದ್ದ, ಆಕೆಯ ಜೊತೆಗೆ ಓಡಾಡುತ್ತಿದ್ದ.

ಈ ವಿಚಾರದಲ್ಲಿ ಹೆಂಡತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದ, ಇದರಿಂದ ಆಕೆಯ ಮನಸ್ಸಿಗೆ ನೋವಾಗಿ ತಾನು ಗಂಡನ ಜೊತೆಗೆ ಇರುವುದಿಲ್ಲ ಎಂದು ಹೇಳಿ, ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆ. ನಂತರ ಹಳ್ಳಿಯ ಗ್ರಾಮಸ್ಥರು ಪಂಚಾಯಿತಿ ಸೇರಿಸಿ, ರವಿಗೌಡನಿಗೆ ಬುದ್ಧಿವಾದ ಹೇಳಿದ್ದಾರೆ. ಮತ್ತೊಬ್ಬ ಹೆಣ್ಣಿನ ಸಹವಾಸ ಬಿಟ್ಟು ಹೆಂಡತಿಯ ಜೊತೆ ಚೆನ್ನಾಗಿರಬೇಕು ಎಂದು ಅವನಿಗೆ ಬುದ್ಧಿ ಹೇಳಿ, ಯೋಗಿತಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ..

ಆದರೆ ಯೋಗಿತಾ ಬಂದ ನಂತರ ರವಿಗೌಡ ಬದಲಾಗಲಿಲ್ಲ, ಹೆಂಡತಿ ಮನೆಗೆ ವಾಪಸ್ ಬಂದಮೇಲು ಕೂಡ ರವಿಗೌಡ ಇನ್ನೊಬ್ಬ ಹೆಣ್ಣಿನ ಸಹವಾಸ ಬಿಡಲಿಲ್ಲ. ಈ ವಿಚಾರ ಯೋಗಿತಾಗೆ ಗೊತ್ತಾಗಿ, ಮತ್ತೆ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಲೇ ಇತ್ತು. ಹೀಗಿರುವಾಗ ಒಂದು ದಿನ ರವಿಗೌಡ ಮಕ್ಕಳಿಗೋಸ್ಕರ ಪಾನಿಪುರಿ ತಂದಿದ್ದರು, ಆದರೆ ಯೋಗಿತಾ ಅದನ್ನು ತಿನ್ನಬಾರದು ಎಂದು ಮಕ್ಕಳಿಗೆ ಸ್ಟ್ರಿಕ್ಟ್ ಆಗಿ ಹೇಳಿದ್ದರು. ಈ ಕಾರಣಕ್ಕೆ ಯೋಗಿತಾ ಮೇಲೆ ರವಿಗೌಡಗೆ ಕೋಪ ಬಂದಿದೆ.

ಆಕೆಯ ಮೇಲೆ ಕೋಪಗೊಂಡು, ಯೋಗಿತಾಳ ತಲೆ ಕೂದಲನ್ನು ಎಳೆದುಕೊಂಡು ಹೋಗಿ, ವಿದ್ಯುತ್ ತಂತಿಗೆ ಬಿಗಿದು, ಆಕೆಯನ್ನೇ ಮುಗಿಸಿದ್ದಾನೆ. ಇಂಥ ಕೆಲಸ ಮಾಡಿ, ಮನೆಯಿಂದಲೇ ಎಸ್ಕೇಪ್ ಆಗಿದ್ದಾನೆ. ಇವರ ದೊಡ್ಡ ಮಗಳು ತಾಯಿಯನ್ನು ಆ ಸ್ಥಿತಿಯಲ್ಲಿ ನೋಡಿ ಅಕ್ಕ ಪಕ್ಕದ ಮನೆಯವರಿಗೆ ವಿಚಾರ ತಿಳಿಸಿದ್ದು, ನಂತರ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸ್ಥಳೀಯರ ನಡುವೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಹೆಂಡತಿಗೆ ಈ ರೀತಿ ಮಾಡಿ ಪರಾರಿ ಆಗಿರುವ ಗಂಡನನ್ನು ಪೊಲೀಸರು ಹುಡುಕುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈ ಘಟನೆ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ ಚೈತ್ರ ಕುಂದಾಪುರಗೂ ಹಾಗೂ ಹಾಲಶ್ರೀ ಸ್ವಾಮೀಜಿಗೂ ಏನ್ ಲಿಂಕ್? ಇಲ್ಲಿದೆ ಇವರ ರಿಯಲ್ ಲೈಫ್ ಸ್ಟೋರಿ

Leave A Reply

Your email address will not be published.