cooperative societies loans: ನಮ್ಮ ಜನರು ಬ್ಯಾಂಕ್ ಗಳಿಂದ ಮಾತ್ರವಲ್ಲದೆ ಸಹಕಾರಿ ಸಂಸ್ಥೆಗಳಿಂದ ಕೂಡ ಸಾಲ ಪಡೆಯುತ್ತಾರೆ. ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆಯುವುದು, ಜೊತೆಗೆ ಅಲ್ಲಿ ಉಳಿತಾಯ ಮಾಡುವ ಆಯ್ಕೆ ಕೂಡ ಇದೆ. ಹಣವನ್ನು ಡೆಪಾಸಿಟ್ ಮಾಡಿ, ಅವುಗಳ ಪ್ರಯೋಜನವನ್ನು ಕೂಡ ಪಡೆಯಬಹುದು. ಈ ರೀತಿಯ ಹಲವು ಸೇವೆಗಳು ಲಭ್ಯವಿರುವುದರಿಂದ ಜನರಿಗೆ ಸಹಕಾರಿ ಬ್ಯಾಂಕ್ ಗಳಿಂದ ಹೆಚ್ಚಿನ ಅನುಕೂಲವಿದೆ.

ಆದರೆ ಸಹಕಾರಿ ಬ್ಯಾಂಕ್ ಗಳು ಎಲ್ಲಾ ರೀತಿಯಲ್ಲೂ ಸೇಫ್ ಎಂದು ಹೇಳಲು ಆಗೋದಿಲ್ಲ, ಯಾಕೆಂದರೆ ಕೆಲವು ಸಹಕಾರಿ ಬ್ಯಾಂಕ್ ಗಳು ಗ್ರಾಹಕರಿಗೆ ನಾಮ ಹಾಕಿ, ರಾತ್ರೋರಾತ್ರಿ ಬ್ಯಾಂಕ್ ಮುಚ್ಚಿಕೊಂಡು ಹೋಗಿರುಗ ಉದಾಹರಣೆ ಸಾಕಷ್ಟಿದೆ. ಇದರಿಂದ ಜನರು ನಷ್ಟ ಅನುಭವಿಸಿದ್ದಾರೆ. ಜೊತೆಗೆ ಬೇರೆ ದೊಡ್ಡ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಕೆಲವು ಜನರು ಪರಾರಿ ಆಗಿರುವ ಹಾಗೆ, ಸಹಕಾರಿ ಬ್ಯಾಂಕ್ ಗಳಲ್ಲಿ ಕೂಡ ಸಾಲ ಪಡೆದು ಪರಾರಿ ಆಗಿರುವ ಘಟನೆಗಳು ಕೂಡ ನಡೆದಿದೆ.

ಬಹಳಷ್ಟು ಬ್ಯುಸಿನೆಸ್ ಮ್ಯಾನ್ ಗಳು ಸಹಕಾರಿ ಬ್ಯಾಂಕ್ ಇನ್ಸ ಸಾಲ ಪಡೆದು, ದೇಶ ಬಿಟ್ಟು ಓಡಿ ಹೋಗಿದ್ದಾರೆ. ಈ ರೀತಿ ಸಹಕಾರಿ ಬ್ಯಾಂಕ್ ಇಂದ ಸಾಲ ಪಡೆದು ಓಡಿಹೋದವರ ಬಗ್ಗೆ ಮಾಹಿತಿ ನೋಡಿವುದಾದರೆ, ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಹಳ್ಳಿಗಳಲ್ಲಿ ವಾಸ ಮಾಡುವ ರೈತರು ವ್ಯವಸಾಯದ ಕೆಲಸಕ್ಕೆ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆಯುತ್ತಾರೆ. ಇದೀಗ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲದ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

Cooperative Societies Loans

ಹಲವು ವರ್ಷಗಳಿಂದ ಸಾಲ ತೀರಿಸಲು ಆಗದೆ ಕಷ್ಟಪಡುತ್ತಿರುವ ರೈತರು ಮತ್ತು ಬ್ಯಾಂಕ್ ಜೊತೆಗೆ ಸಂಧಾನ ನಡೆಸಲು ಮುಂದಾಗಿದೆ ಸರ್ಕಾರ. ರೈತರಿಗೆ ಕೃಷಿಯಲ್ಲಿ ಸಮಸ್ಯೆ ಉಂಟಾದಾಗ, ಬೆಳೆ ಹಾನಿ, ಬೆಲೆಯ ಇಳಿಕೆ, ಅತಿವೃಷ್ಟಿ, ಅನಾವೃಷ್ಟಿ, ಈ ರೀತಿ ಆದಾಗ ಸಾಲ ತೀರಿಸಲು ಆಗಿರುವುದಿಲ್ಲ.. ಹೀಗಾದಾಗ ಸಾಲ ಮರುಪಾವತಿ ಮಾಡಲಿಲ್ಲ ಎಂದರೆ, ಬಡ್ಡಿದರ ಹೆಚ್ಚಾಗಿ ಬೆಳೆದು ಬಿಡುತ್ತದೆ. ಆ ವೇಳೆ ರೈತರು ಹೇಗಾದರೂ ಮಾಡಿ ಸಾಲ ತೀರಿಸಬೇಕು ಎಂದು ಜಮೀನು ಮಾರುವುದಕ್ಕೂ ಸಿದ್ಧವಾಗುತ್ತಾರೆ. ಇದು ಆಗದೆ ಇದ್ದಾಗ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡುತ್ತಾರೆ.

ರೈತರ ಕಥೆ ಈ ರೀತಿ ಆದರೆ, ಉದ್ಯಮಿಗಳದ್ದೇ ಬೇರೆ ಕಥೆ. ಅವರು ಕೋಟಿಗಟ್ಟಲೆ ಸಾಲ ಪಡೆದು, ದಿಢೀರ್ ಎಂದು ನಾಪತ್ತೆ ಆಗಿಬಿಡುತ್ತಾರೆ. ಈ ರೀತಿ ಸಾಲ ಪಡೆದು ನಾಪತ್ತೆ ಆಗಿರುವವರ ಸಂಖ್ಯೆ ನಮ್ಮ ರಾಜ್ಯದಲ್ಲಿ ಹೇಗಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ ಸುಮಾರು 1,404 ಕೋಟಿ ರೂಪಾಯಿ ಸಾಲ ಪಡೆದಿರುವ 2,888 ಜನರು ಸಾಲ ಮರುಪಾವತಿ ಮಾಡದೆ ಓಡಿಹೋಗಿದ್ದಾರೆ ಎಂದು ಗೊತ್ತಾಗಿದೆ.

ಈ ಈ ರೀತಿ ಪರಾರಿ ಆಗಿರುವವರ ಪೈಕಿ, ಬೆಂಗಳೂರಿನ ನೆಟ್ಟಕಲ್ಲಪ್ಪ ಸರ್ಕಲ್ ಸಹಕಾರಿ ಬ್ಯಾಂಕ್ ನ ಪಾಲು ಜಾಸ್ತಿ ಎಂದು ಹೇಳಲಾಗುತ್ತಿದೆ. ಈ ಬ್ಯಾಂಕ್ ಈಗ ಎವರ್ ಗ್ರೀನ್ ಕ್ರೆಡಿಟ್ ಎನ್ನುವ ಹೆಸರಿನಲ್ಲಿ 1,400 ಕೋಟಿ ರೂಪಾಯಿ ನಷ್ಟ ಆಗಿರುವುದನ್ನು, ಆಸ್ತಿನಷ್ಟ ಎಂದು ಘೋಷಣೆ ಮಾಡಿದೆ. ಬೇರೆ ಸಹಕಾರಿ ಬ್ಯಾಂಕ್ ಗಳಲ್ಲಿ ಸುಳ್ಳು ಮಾಹಿತಿ, ಸುಳ್ಳು ದಾಖಲೆಗಳನ್ನು ನೀಡಿ, ಸಾಲ ಪಡೆದು 25 ರಿಂದ 30 ವರ್ಷ ಆಗಿದ್ದರು ಕೂಡ ಸಾಲ ಮರುಪಾವತಿ ಮಾಡದೆ ಇರುವ ಕೇಸ್ ಗಳು ಕೂಡ ಬಹಳಷ್ಟಿವೆ ಎಂದು ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ತಮಿಳುನಾಡಿಗೆ ಕಾವೇರಿ ನೀರು ಕೊಡದೆ ಇದ್ದ ನಿಜವಾದ ನಾಯಕ ಯಾರು ಗೊತ್ತಾ? ಇಂಥ ನಾಯಕ ಮತ್ತೆ ನಮ್ಮ ರಾಜ್ಯಕ್ಕೆ ಸಿಗಬೇಕು..

By AS Naik

Leave a Reply

Your email address will not be published. Required fields are marked *