ಮಕ್ಕಳ ತೊದಲು ಮಾತು ಎಷ್ಟು ಸುಂದರ ಅಲ್ಲವಾ. ಮಕ್ಕಳು ತೊದಲು ಮಾತುಗಳಲ್ಲಿ ಮಾತನಾಡುತ್ತಿದ್ದರೆ ಅದನ್ನು ಕೇಳುತ್ತಲೆ ಇರಬೇಕೆಂಬ ಮನಸ್ಸಾಗುತ್ತದೆ. ಒಂದು ಪುಟ್ಟ ಹುಡುಗನ ತೊದಲು ಮಾತು ತುಂಬಾ ಪ್ರಸಿದ್ಧಿ ಪಡೆಯುತ್ತಿದೆ. ಅವನು ಮಾತನಾಡಿದ ಮಾತುಗಳೇನು ನಾವು ತಿಳಿಯೋಣ.

ಟೇಬಲ್ ಮೇಲೆ ಇಟ್ಟ ಬಿಸ್ಕತ್ತು ಪಟ್ಟಣವನ್ನು ಪೂರ್ತಿಯಾಗಿ ಖಾಲಿ ಮಾಡಿದ ಪುಟ್ಟ ಹುಡುಗನಿಗೆ ಅವನ ತಂದೆ ಯಾಕೆ ತಿಂದೆ ಕೇಳಿದರೆ, ಅಯ್ತು ಬಿಡು ಡ್ಯಾಡಿ ಮತ್ತೆ ಮಾಡಲ್ಲ ಎನ್ನುತ್ತಾನೆ ಆ ಪುಟ್ಟ ಹುಡುಗ. ಜೊತೆಗೆ ತಂದೆಯ ಬಳಿ ನಿನಗು ಬೇಕಿತ್ತಾ ಎಂದು ಕೇಳುತ್ತಾನೆ. ನಾನು ಬರೊದಕ್ಕೂ ಮುನ್ನವೆ ಯಾಕೆ ತಿಂದೆ ನೀನು ನಾನು ಈಗ ಹೊಡೆಯುತ್ತೆನೆ ಎಂದು ಹೇಳಿದಾಗ, ನಾಳೆ ಇಂದ ತಿನ್ನಲ್ಲ ಬಿಡು ಡ್ಯಾಡಿ ಎನ್ನುತ್ತಾನೆ. ಎಷ್ಟು ತಿಂದೆ ಎಂದು ತಂದೆ ಕೇಳಿದರೆ, ಒಂದು ತಿಂದೆ ಎನ್ನುತ್ತಾನೆ. ನಿನ್ನ ಬಳಿ ಯಾರು ತಿನ್ನೊಕೆ ಹೇಳಿದ್ದು ಯಾಕೆ ತಿಂದೆ ಕೇಳಿದರೆ, ಅಮ್ಮ ಮೇಲೆ ಇಟ್ಟಿರಲಿಲ್ಲ ಡ್ಯಾಡಿ ಎನ್ನುತ್ತಾನೆ ಈ ಪುಟ್ಟ ಬಾಲಕ. ನಂತರ ಬಾಲಕನ ಅಮ್ಮನ ಬಳಿ ಕೆಳಗಡೆ ಯಾಕೆ ಬಿಸ್ಕತ್ತು ಕೆಳಗೆ ಇಟ್ಟಿದ್ದೆ ಕೇಳಿದಾಗ ಅವರು ಟೀ ಜೊತೆಗೆ ತಿನ್ನಲು ಕೆಳಗೆ ಇಟ್ಟಿದ್ದು ಎಂದರು. ಆ ತಕ್ಷಣವೇ ಮಗು ನನ್ನ ಮೇಲೆ ತಪ್ಪು ಹಾಕಬೇಡ ಎಂದು ಬೆರಳು ತೋರಿಸಿ ಹೇಳುತ್ತಾನೆ. ಸರಿಯಾಗಿ ಹೇಳು ಎಂದು ಕೇಳಿದಾಗ ಅವರು ಹೇಳುತ್ತಾರೆ. ಟೇಬಲ್ ಮೇಲೆ ಇಟ್ಟ ಬಿಸ್ಕತ್ತು ತಿಂದಿದ್ದಾನೆ. ಮೇಲೆ ಇಟ್ಟಿರಲಿಲ್ಲ ಎಂದರೆ ಅವನ ಕೈಗೆ ಎಟುಕದ ರೀತಿಯಲ್ಲಿ ಇಟ್ಟಿರಲಿಲ್ಲ ಅಂತ. ಟೇಬಲ್ ಮೇಲಿದ್ದ ಪ್ಯಾಕ್ ಎತ್ತಿಕೊಂಡು ತಿಂದಿದ್ದಾನೆ ಎನ್ನುತ್ತಾರೆ ಅವರು.

ನಂತರ ತಂದೆ ಬಾಲಕನ ಹತ್ತಿರ ಒಂದು ಪ್ಯಾಕ್ ಬಿಸ್ಕತ್ತು ಯಾಕೆ ತಿಂದದ್ದು ಈಗ ಊಟ ಮಾಡದೆ ಹೋದರೆ ಏನು ಮಾಡಲಿ ನಾನು ಕೇಳಿದರೆ, ನಿಂಗೂ ಬೇಕಿತ್ತಾ ಡ್ಯಾಡಿ ಎಂದು ತಂದೆಯನ್ನೆ ಕೇಳುತ್ತಾನೆ. ಹೌದು ನಂಗೂ ಬೇಕಿತ್ತು ಎಂದರೆ, ನಾಳೆ ತಂದು ಮೂರು ಜನ ತಿನ್ನುವ ಡ್ಯಾಡಿ ಎನ್ನುತ್ತಾನೆ. ಮತ್ತೊಂದು ಸಲ ಹೀಗೆ ಮಾಡ್ತಿಯಾ ಕೇಳಿದರೆ, ಇಲ್ಲ ಬುಡು ಡ್ಯಾಡಿ ಎನ್ನುತ್ತಾನೆ. ಕೆಳಗಡೆ ಯಾಕೆ ಬಂದಿದ್ದು ನೀನು ಕೇಳಿದರೆ, ನಾಳೆ ಇಂದ ಬರಲ್ಲ ಬಿಡು ಡ್ಯಾಡಿ‌. ನಾಳೆಯಿಂದ ಇಲ್ಲೆ ಇರುತ್ತೆನೆ ಎನ್ನುತ್ತಾನೆ ಬಾಲಕ. ಬಾಲಕನ ಅಮ್ಮ ಯಾರು ನಿನ್ನ ಕೆಳಗೆ ಕರೆದದ್ದು, ನಂಗೆ ಹೇಳಿದ್ದಿಯಾ ಎಂದು ಕೇಳಿದರೆ, ಇಲ್ಲ ಯಾರು ಕರೆದಿಲ್ಲ, ನನ್ನನ್ನೆ ತಪ್ಪು ಅಂತಾಳೆ ಎನ್ನುತ್ತಾನೆ ಅವನು. ನಂತರ ತಂದೆ ಈಗ ಏನು ಮಾಡಬೇಕು, ನಾಳೆ ಇಂದ ಹೀಗೆ ಮಾಡ್ತಿಯಾ, ಈಗ ಅನ್ನ ಊಟ ಮಾಡಬೇಕು ಅಷ್ಟು ಊಟ ಮಾಡ್ತಿಯಾ, ಮಾಡಲಿಲ್ಲ ಅಂದ್ರೆ ಏನು ಮಾಡಲಿ ಎಂದು ಕೇಳಿದರೆ, ಇಲ್ಲ ಡ್ಯಾಡಿ ಮಾಡಲ್ಲ, ಅಷ್ಟು ಊಟ ಮಾಡುವೆ. ಮಾಡಲಿಲ್ಲ ಅಂದರೆ ಹೊಡಿ ಎನ್ನುತ್ತಾನೆ.

ಮಕ್ಕಳು ಮಾಡುವ ತರಲೆ ಹಾಗೂ ಮಾತುಗಳು ಎಷ್ಟು ಚೆನ್ನಾಗಿರುತ್ತದೆ. ಅವರಿಗೆ ಊಟ ಮಾಡಿಸುವುದು ಒಂದು ಯುದ್ದ ಗೆದ್ದಂತೆಯೆ ಸರಿ. ಅದರಲ್ಲೂ ಮೊದಲೆ ಏನಾದರೂ ತಿಂದಿದ್ದರೆ ಊಟ ಸ್ವಲ್ಪವು ತಿನ್ನುವುದಿಲ್ಲ. ಆದರೂ ಪುಟ್ಟ ಮಕ್ಕಳು ಮನೆಯಲ್ಲಿ ಇರಬೇಕು.

Leave a Reply

Your email address will not be published. Required fields are marked *