ವಿಜಯ ರಾಘವೇಂದ್ರ ಹಾಗು ಅವರ ಪತ್ನಿ ಹಿಂದೆ ಇರೋದು ಯಾರು ಗೊತ್ತಾಯ್ತ? ಗೆಸ್ ಮಾಡಿ

0 0

ಕೋವಿಡ್ 19 ಕಾರಣ ಎಲ್ಲ ಕ್ಷೇತ್ರಗಳಲ್ಲಿ ಮಾಡಬೇಕಾದಂತಹ ಕೆಲಸಗಳು ಅಸ್ತವ್ಯಸ್ತಗೊಂಡಿದ್ದವು ಅದರಲ್ಲಿ ಸಿನಿಮಾ ರಂಗವೂ ಕೂಡ ಒಳಗೊಂಡಿತ್ತು. ಈಗ ಲಾಕ್ಡೌನ್ ಸಡಿಲಿಕೆ ಆಗಿರುವ ಕಾರಣ ಚಿತ್ರೀಕರಣ ಆಗ ಬೇಕಾದಂತಹ ಸಿನಿಮಾಗಳಿಗೆ ಸಂಬಂಧಿಸಿದಂತೆ ಚಿತ್ರೀಕರಣಗಳು ನಡೆಯುತ್ತಿವೆ. ನಾವಿಂದು ನಿಮಗೆ ವಿಜಯ ರಾಘವೇಂದ್ರ ಅವರ ಹೊಸ ಚಿತ್ರದ ಚಿತ್ರೀಕರಣದ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಚಿಕ್ಕವಯಸ್ಸಿನಲ್ಲಿಯೇ ತನ್ನ ಅಭಿನಯದ ಮೂಲಕ ಗಮನ ಸೆಳೆದಿರುವಂತಹ ವಿಜಯ್ ರಾಘವೇಂದ್ರ ಅವರು ತಮ್ಮ ಹೊಸ ಸಿನಿಮಾದ ಮುಹೂರ್ತವನ್ನು ನೆರವೇರಿಸಿದರು. ವಿಜಯ ರಾಘವೇಂದ್ರ ಅವರ ಹೊಸ ಸಿನಿಮಾ ಗ್ರೇ ಗೇಮ್ಸ್ ಚಿತ್ರದ ಮುಹೂರ್ತವನ್ನು ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ನೆರವೇರಿಸಿದರು.

ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರಿಗೆ ನಾಯಕ ನಟಿಯಾಗಿ ಗಾಳಿಪಟ ಖ್ಯಾತಿಯ ಭಾವನಾ ರಾವ್ ಜೋಡಿಯಾಗಲಿದ್ದಾರೆ. ಇತ್ತೀಚಿಗೆ ಭಾವನಾ ಅವರು ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ ಆದರೆ ಈಗ ಭಾವನಾ ಅವರು ವಿಜಯ ರಾಘವೇಂದ್ರ ಅವರ ಗ್ರೇ ಗೇಮ್ಸ್ ಚಿತ್ರದ ಮೂಲಕ ವೀಕ್ಷಕರ ಎದುರು ಬರುತ್ತಿದ್ದಾರೆ. ಆ ಕುರಿತಂತೆ ಭಾವನಾ ಅವರು ನಿಧಾನವಾಗಿ ಕೋವಿಡ್ ಭಯ ದೂರವಾಗುತ್ತಿದೆ

ಸಿನಿಮಾರಂಗದಲ್ಲಿ ಚಟುವಟಿಕೆಗಳು ಚುರುಕಾಗುತ್ತಿವೆ ಲಾಕ್ಡೌನ್ ನಂತರ ಸಾಕಷ್ಟು ಒಳ್ಳೆಯ ಸಿನಿಮಾ ಕತೆಗಳನ್ನು ಕೇಳಿದ್ದೇನೆ. ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು ಇನ್ನು ಕೆಲವು ಮಾತುಕತೆ ಹಂತದಲ್ಲಿದೆ ಸುಮಾರು ಒಂದೂವರೆ ವರ್ಷದ ಬಳಿಕ ನನ್ನ ಕೆಲಸ ಡಬಲ್ ಆಗುತ್ತಿದೆ ಎಂದು ಭಾವನಾ ಅವರು ಹೇಳಿಕೊಂಡಿದ್ದಾರೆ.

ಗ್ರೇ ಗೇಮ್ಸ್ ಚಿತ್ರಕ್ಕೆ ನಟ ಶ್ರೀಮುರುಳಿ ಅವರು ಆರಂಭದ ಫಲಕ ತೋರಿಸಿ ಈ ಚಿತ್ರತಂಡಕ್ಕೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಈ ಚಿತ್ರ ಸೈಬರ್ ಕ್ರೈಮ್ ಗೆ ಸಂಬಂಧಪಟ್ಟ ಕಥೆಯಾಗಿದೆ ಈ ಚಿತ್ರದಲ್ಲಿ ಸೈಕಾಲಜಿಸ್ಟ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಅಭಿನಯಿಸುತ್ತಿದ್ದಾರೆ. ಗ್ರೇ ಗೇಮ್ಸ್ ಆಡುವ ಇಪತ್ತು ವರ್ಷದ ಹುಡುಗನ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೈ ನಟಿಸುತ್ತಿದ್ದಾರೆ.

ಜೈ ಅವರ ತಾಯಿಯ ಪಾತ್ರದಲ್ಲಿ ಅಪರ್ಣಾ ಅವರು ಕಾಣಿಸಿಕೊಳ್ಳಲಿದ್ದಾರೆ ಜೊತೆಗೆ ಸೈಬರ್ ಕ್ರೈಮ್ ವಿಶೇಷ ಅಧಿಕಾರಿ ಪಾತ್ರವನ್ನು ನಟಿ ಭಾವನಾ ರಾವ್ ಅವರು ಮಾಡುತ್ತಿದ್ದಾರೆ. ಉತ್ತಮ ಕಥೆಯನ್ನು ಒಳಗೊಂಡಿರುವ ಈ ಚಿತ್ರ ಅದ್ಭುತವಾಗಿ ಮೂಡಿ ಪ್ರೇಕ್ಷಕರನ್ನು ರಂಜಿಸಿ ಅದ್ಭುತವಾದ ಯಶಸ್ಸನ್ನು ಕಾಣಲಿ ಎಂದು ನಾವು ಹಾರೈಸೋಣ. ವಿಜಯ ರಾಘವೇಂದ್ರ ಹಾಗು ಅವರ ಪತ್ನಿ ಹಿಂದೆ ಇರೋದುನಟಿ ಭಾವನ

Leave A Reply

Your email address will not be published.