ಸಾಲ ಮಾಡಿ ಹಾಕಿದ್ದ ಒಂದು ಲಾರಿ ಇವತ್ತು 4500 ಲಾರಿ ಆಗಿದ್ದು ಹೇಗೆ? ಗೊತ್ತೇ

0 363

ವಿ.ಆರ್ .ಎಲ್. ಎಂಬ ಸಾರಿಗೆ ಸಂಸ್ಥೆಯನ್ನು ಭಾರತ ದೇಶದಲ್ಲಿ ಕೇಳದವರಿಲ್ಲ ಅಂತಹ ಅತ್ಯುತ್ತಮ ಸೇವೆಯನ್ನು ಈ ಸಂಸ್ಥೆ ಪ್ರತಿಯೊಂದು ಕ್ಷೇತ್ರಗಳಿಗೂ ನೀಡುತ್ತಿದೆ. ಇದರ ನಿರ್ಮಾತೃ ವಿಜಯ ಸಂಕೇಶ್ವರ್ ಅವರು. ಇವರು ವಿಜಯವಾಣಿ ಎಂಬ ಪತ್ರಿಕೆಯನ್ನು ಕೂಡ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇವರು ಒಬ್ಬ ಅತ್ಯುತ್ತಮ ಉದ್ಯಮಿ ಎಂಬುದರಲ್ಲಿ ಎರಡು ಮಾತಿಲ್ಲ. ಸಾರಿಗೆ ಕ್ಷೇತ್ರದಲ್ಲಿ ಅವರು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವಿಜಯ ಸಂಕೇಶ್ವರ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ವಿಜಯ ಸಂಕೇಶ್ವರ ಅವರು ಮೂಲತಃ ಗದಗಿನಲ್ಲಿ 1950 ರ ಆಗಸ್ಟ್ 2 ರಂದು ಬಸವನ್ನಪ್ಪ ಮತ್ತು ಚಂದ್ರಮ್ಮ ಅವರ ದಂಪತಿಗೆ ಜನಿಸುತ್ತಾರೆ. ವಿಜಯ ಸಂಕೇಶ್ವರ ಅವರು ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಹೊಂದಿದ್ದು. 1972 ರಲ್ಲಿ ಬಿ.ಕಾಂ. ಪದವಿಯನ್ನು ಪೂರೈಸುತ್ತಾರೆ. ತದನಂತರ ತಮ್ಮ ತಂದೆಯವರ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. ಒಂದೇ ಮನೆ ಒಬ್ಬರು ಸದಸ್ಯರು ಒಂದೇ ಕೆಲಸವನ್ನು ಮಾಡಬಾರದು ಎಂದು ನಿರ್ಧರಿಸಿ ತಮ್ಮದೇ ಆದ ಹೊಸ ಉದ್ಯಮವನ್ನು ಸ್ಥಾಪಿಸಬೇಕೆಂದು ನಿರ್ಧರಿಸುತ್ತಾರೆ. ಇದರ ಸಲುವಾಗಿ  ಸ್ಥಳೀಯ ವ್ಯಾಪಾರಿಗಳಿಂದ ಸ್ವಲ್ಪ ಸಾಲವನ್ನು ಪಡೆದು 1976ರಲ್ಲಿ ಇಂದು ಲಾರಿಯನ್ನು ಖರೀದಿ ಮಾಡುತ್ತಾರೆ. 

ಇದರ ಮೂಲಕ ಸರಕು ಸಾಗಾಣಿಕೆಯ ವ್ಯವಹಾರವನ್ನು ಆರಂಭಿಸಿದರು. ಆಗಿನ ಕಾಲದಲ್ಲಿ ಹುಬ್ಬಳ್ಳಿ ವ್ಯಾಪಾರ ವಹಿವಾತಿಗೆ ಹೆಸರುವಾಸಿಯಾಗಿತ್ತು. ಮೊದಲು ಗದಗಿನಿಂದ ಹುಬ್ಬಳ್ಳಿಗೆ ಗಿರಣಿಯನ್ನು ಸಾಗಿಸುವ ವ್ಯವಹಾರವನ್ನು ಆರಂಭಿಸುತ್ತಾರೆ. ಈ ಮೂಲಕ ಮೊದಲೇ ಸರಕುಸಾಗಾಣಿಕೆ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಜೊತೆ ವಿರೋಧವನ್ನು ಕಟ್ಟಿಕೊಂಡು ಮನೆಯವರ ಅಸಮಾಧಾನದ ಮಧ್ಯೆಯೂ ಸಾರಿಗೆ ವ್ಯವಹಾರವನ್ನು ಮಾಡಿ ಹೆಸರು ಮಾಡಲು ಪ್ರಾರಂಭಿಸುತ್ತಾರೆ. ನಿರಂತರ ಸಾರಿಗೆಯಿಂದ ಹೆಚ್ಚಿನ ಲಾಭ ಬರುತ್ತಿರುವುದನ್ನು ಕಂಡು 1981 ರಲ್ಲಿ ಅವರ ಪತ್ನಿ ಲಲಿತರವರ ಹೆಸರಿನಲ್ಲಿ ಇನ್ನೊಂದು ಲಾರಿಯನ್ನು ಖರೀದಿಸುತ್ತಾರೆ.

ಈ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಹಂತಹಂತವಾಗಿ ಯಶಸ್ಸನ್ನು ಕಾಣಲು ತೊಡಗುತ್ತಾರೆ. ಹೀಗೆ 1983 ರಲ್ಲಿ ತಮ್ಮ ಕನಸಾದ ವಿಜಯಾನಂದ ರೋಡ್ ಲೈನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸರಕು ಸಾಗಾಣಿಕೆಯ ಉದ್ಯಮವನ್ನು ಅಧಿಕೃತವಾಗಿ ತೆರೆದರು. ಇದೆ ಸಂಸ್ಥೆಯೇ ವಿ.ಆರ್ .ಏಲ್. ಈ ಸಂಸ್ಥೆಯು ಮುಂದೆ ಜನರ ಸಾಗಾಣಿಕೆಗಾಗಿ ಖಾಸಗಿ ಬಸ್ ಉದ್ಯಮವನ್ನು ಪ್ರಾರಂಭಿಸುತ್ತದೆ. ಈ ಬಸ್ ನ ಸೇವೆ ಮೊದಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಇದು ತದನಂತರ ದೇಶದಾದ್ಯಂತ ಈ ಸೇವೆಯನ್ನು ಪ್ರಾರಂಭಿಸುತ್ತದೆ. ಈಗ 400ಕ್ಕೂ  ಹೆಚ್ಚು ಖಾಸಗಿ ಬಸ್ಸುಗಳು 12 ಸಾವಿರಕ್ಕೂ ಹೆಚ್ಚಿನ ಜನರನ್ನು ತಿರುಗಿಸುತ್ತಿದೆ.

ಇವರ ಬಡತನದಲ್ಲಿಯೇ ಸ್ಥಾಪನೆಯಾದ ವಿ.ಆರ್.ಎಲ್. ಸಂಸ್ಥೆ ಈಗ ಸಾರಿಗೆ ಸೇವೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. ಈಗ 4600 ಲಾರಿಗಳನ್ನು ಈ ಸಂಸ್ಥೆ ಹೊಂದಿದೆ. ವಿಜಯ ಸಂಕೇಶ್ವರ ಅವರ ಶಿಸ್ತು ಮತ್ತು ಸಮಯಪ್ರಜ್ಞೆಯಿಂದ ತಮ್ಮ ದಿನನಿತ್ಯದ ಕಾರ್ಯಕಲಾಪಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ
ವಿ.ಆರ್.ಏಲ್. ಸಂಸ್ಥೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಕೂಡ ಸ್ಥಾನವನ್ನು ಪಡೆದಿದೆ. ಈಗ ದೇಶದಾದ್ಯಂತ 850ಕ್ಕೂ ಹೆಚ್ಚು ಶಾಖೆಯನ್ನು ಹೊಂದಿ ಸೇವೆ ನೀಡುತ್ತಿದೆ. ವಿಜಯ ಸಂಕೇಶ್ವರ್ ಅವರು ಮೊದಲು ಎಂ.ಪಿ.ಯಾಗಿ ಕೂಡ ಕಾರ್ಯನಿರ್ವಹಿಸಿರುತ್ತಾರೆ. ವಿಜಯಕರ್ನಾಟಕ ದಿನಪತ್ರಿಕೆಯ ಮುಖ್ಯಸ್ಥರಾಗಿಯೂ ಕೆಲಸ ಮಾಡಿದವರು 2012ರಲ್ಲಿ ತಮ್ಮದೇ ಪತ್ರಿಕೆಯಾದ ವಿಜಯವಾಣಿ ದಿನಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.

ಇದು ದಿನಕ್ಕೆ 8,00,000 ಮುದ್ರಿಕೆಗಳು ಮಾರಾಟವಾಗುವ ದಿನಪತ್ರಿಕೆಯಾಗಿದೆ. ನಂತರ 2017 ರಲ್ಲಿ ದಿಗ್ವಿಜಯ ನ್ಯೂಸ್ ಎಂಬ ಚಾನೆಲ್ ಅನ್ನು ಪ್ರಾರಂಭಿಸುತ್ತಾರೆ. 2020ರಲ್ಲಿ ದೇಶದ ಅತ್ಯುತ್ತಮ ನಾಗರೀಕ ಎಂಬ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಹೀಗೆ ವಿಜಯ ಸಂಕೇಶ್ವರ್ ಅವರು ಸಾರಿಗೆ ಸೇವೆಯಲ್ಲಿ ಅತ್ಯುತ್ತಮ ಹೆಸರನ್ನು ಮಾಡಿ ಹೆಸರನ್ನು ಸಂಪಾದಿಸಿದ್ದಾರೆ.

Leave A Reply

Your email address will not be published.