ಕಡಿಮೆ ನೀರಿನಲ್ಲಿ ಬೆಳೆಯುವ ಈ ಹಣ್ಣಿನ ಗಿಡಗಳು ಯಾವುವು? ತಿಳಿಯಿರಿ

0 11

ಚಾಮರಾಜನಗರ ಇದು ಒಂದು ಜಿಲ್ಲೆಯಾಗಿದೆ. ಅಲ್ಲಿ ಸಂತೆಮರಹಳ್ಳಿ ಎಂಬ ಊರಿದೆ. ಅಲ್ಲಿ ಬಯಲುಸೀಮೆಯ ವಾತಾವರಣವೇ ಜಾಸ್ತಿ. ಆದ್ದರಿಂದಲೇ ಹಸಿರು ತರಕಾರಿಗಳನ್ನು ಅಥವಾ ಹಣ್ಣಿನ ಗಿಡಗಳನ್ನು ಬೆಳೆಯುವುದು ಬಹಳ ಕಷ್ಟ. ಆದರೆ ಒಬ್ಬರು ಎಲ್ಲ ರೀತಿ ಹಣ್ಣುಗಳನ್ನು ಬೆಳೆದು ಸಾಧನೆಯನ್ನು ಮಾಡಿದ್ದಾರೆ. ಅವರು ಬೆಳೆದ ಬೆಳೆಗಳ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶಿವಕುಮಾರಸ್ವಾಮಿ ಅವರು ಸುಮಾರು ಎಲ್ಲಾ ರೀತಿಯ ಹಣ್ಣುಗಳು ಗಿಡಗಳನ್ನು ಬೆಳೆಸಿದ್ದಾರೆ. ಅವರ ಪ್ರಕಾರ ಆದಾಯ ಎಂದರೆ ಒಂದೇ ಬಾರಿ ಬರುವುದಲ್ಲ. ಪದೇಪದೇ ಆದಾಯ ಬರುತ್ತಿರಬೇಕು ಅಂತಹ ಬೆಳೆಯನ್ನು ಬೆಳೆಯಬೇಕೆನ್ನುವುದು ಅವರ ಆಸೆಯಾಗಿತ್ತು. ಹಾಗೆಯೇ ತಮ್ಮ ಜಾಗದಲ್ಲಿ ಅಂತಹ ಬೆಳೆಗಳನ್ನು ಬೆಳೆದಿದ್ದಾರೆ. ಹಾಗಾಗಿ ತೋಟದಲ್ಲಿ 40 ರೀತಿಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಮಾವಿನಹಣ್ಣು, ನಿಂಬೆಹಣ್ಣು, ಜಾಕ್ಫ್ರೂಟ್, ಗೇರು ಇನ್ನು ಹಲವಾರು ರೀತಿ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ.

ಒಂದೇ ರೀತಿಯ ಹಣ್ಣಿನ ಗಿಡಗಳನ್ನು ಇವರು ನೆಟ್ಟಿಲ್ಲ. ಪ್ರತಿಯೊಂದು ಹಣ್ಣುಗಳು ಸುಮಾರು ಐದರಿಂದ ಆರು ಜಾತಿಗಳನ್ನು ಹೊಂದಿದೆ. ಅಂದರೆ ಮಾವು 16 ಜಾತಿಗಳನ್ನು ಹೊಂದಿದೆ. ಜಾಕ್ಫ್ರೂಟ್ 6 ಜಾತಿಗಳನ್ನು ಹೊಂದಿದೆ. ಹಾಗೆಯೇ ಚಿಕ್ಕು ಸಹ 6 ಜಾತಿಗಳನ್ನು ಹೊಂದಿದೆ. ಹಲಸಿನ ಹಣ್ಣು ಸಹ ಸುಮಾರು ಜಾತಿಗಳನ್ನು ಹೊಂದಿದೆ. ಹಾಗೆಯೇ ಬಟರ್ ಫ್ರೂಟ್ ಗಿಡಗಳನ್ನು ತುಂಬಾ ಚೆನ್ನಾಗಿ ನೆಟ್ಟಿದ್ದಾರೆ. ಇದು ಸಹ ಹಲವಾರು ಜಾತಿಗಳನ್ನು ಹೊಂದಿದೆ.

ಬಟರ್ ಫ್ರೂಟ್ ಗಿಡಗಳನ್ನು ಸಾಲುಸಾಲಾಗಿ ನೆಟ್ಟಿದ್ದಾರೆ. ಬಟರ್ ಫ್ರೂಟ್, ಹಲಸು ಮತ್ತು ಸೀಬೆ ಸುಮಾರು ಮೂರು ವರ್ಷಕ್ಕೆ ಫಲವನ್ನು ನೀಡುತ್ತದೆ. ಆದ್ದರಿಂದ ಎಲ್ಲಾ ಗಿಡಗಳನ್ನು ಕ್ರಾಸ್ ಮಾಡಿ ಎರಡು-ಮೂರು ವರ್ಷಕ್ಕೆ ಬೆಳೆ ಬರುವಂತೆ ಮಾಡಲಾಗಿದೆ. ಸುಮಾರು 24 ಅಡಿ ಎತ್ತರಕ್ಕೆ ಒಂದು ಬಟರ್ ಫ್ರೂಟ್ ಗಿಡ ಮತ್ತು ಇನ್ನೊಂದು ಹಲಸಿನ ಗಿಡವನ್ನು ನೆಡಲಾಗಿದೆ. ಹಾಗೆಯೇ ಒಂದು ಸಾಲಿನಲ್ಲಿ ನೇರವಾಗಿ ಸೀಬೆಯನ್ನು ಹಾಕಿದ್ದಾರೆ. ಇವರಿಗೆ ಬಳೆಗಳನ್ನು ಒಳ್ಳೆಯ ಲಾಭವನ್ನು ತಂದು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ.

Leave A Reply

Your email address will not be published.