Vasathi Badavane Yojane 2023: ಒಂದು ದೇಶದಲ್ಲಿ ಅಥವಾ ಊರಿನಲ್ಲಿ ವಾಸ ಮಾಡುವ ಎಲ್ಲರಿಗೂ ಕೂಡ ವಾಸ ಮಾಡುವುದಕ್ಕೆ ಒಂದು ಮನೆ ಬಹಳ ಅವಶ್ಯಕವಾಗುತ್ತದೆ. ಜೀಗಣ ನಡೆಸಲು ಒಂದು ಮನೆ ಇರಬೇಕು. ಆದರೆ ದೇಶದ ಎಲ್ಲರಿಗೂ ಕೂಡ ಸ್ವಂತ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಆರ್ಥಿಕವಾಗಿ ಕಷ್ಟದಲ್ಲಿ ಇರುವವರು ಸ್ವಂತ ಮನೆ ಮಾಡಿಕೊಳ್ಳಲು ಕಷ್ಟ ಪಡುವುದರಿಂದ ಅಂಥವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಸರ್ಕಾರವೇ ಸಹಾಯ ಮಾಡುತ್ತದೆ.

ಈಗಾಗಲೇ ವಸತಿ ಸೌಲಭ್ಯ ನೀಡುವಂಥ ಯೋಜನೆಗಳು ಕೇಂದ್ರ ಸರ್ಕಾರದಲ್ಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜೇವ್ ಗಾಂಧಿ ವಸತಿ ಯೋಜನೆ ಮತ್ತು ಇನ್ನು ಕೆಲವು ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಯ ಮೂಲಕ ಆರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಸರ್ಕಾರದಿಂದ ಹಣಕಾಸಿನ ಸಹಾಯ ನೀಡುತ್ತದೆ.

ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಹುಅಂತಸ್ತಿನ ಕಟ್ಟಡ ನಮ್ಮ ಮನೆ ಯೋಜನೆ ಕೂಡ ಹೆಚ್ಚು ಖ್ಯಾತಿ ಪಡೆದುಕೊಂಡಿದೆ..ಈ ಕಟ್ಟಡದಲ್ಲಿ ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ಅರ್ಜಿ ಸಲ್ಲಿಸಲು 7 ಜಿಲ್ಲೆಗಳಿಗೆ ಅನುಮತಿಯನ್ನು ನೀಡಲಾಗಿತ್ತು. ಆದರೆ ಈಗ ಸರ್ಕಾರವು ಮತ್ತೊಂದು ಹೊಸ ಪ್ಲಾನ್ ಅನ್ನು ಜಾರಿಗೆ ತರುವ ಸೂಚನೆ ನೀಡಲಾಗಿದ್ದು, ಇದೀಗ ಮನೆ ಕಟ್ಟಿಕೊಳ್ಳಬೇಕು ಎಂದುಕೊಂಡಿರುವ ಜನರಿಗೆ ಸರ್ಕಾರವು ಖಾಲಿ ಜಾಗವನ್ನು ಕಡಿಮೆ ಬೆಲೆಗೆ ನೀಡುವ ನಿರ್ಧಾರ ಮಾಡಿದೆ.

ನಮ್ಮ ರಾಜ್ಯದ ಸಾಕಷ್ಟು ಜನರ ಬಳಿ ತಮ್ಮದೇ ಆದ ಜಾಗ ಇಲ್ಲ, ಅವರದ್ದೇ ಹೆಸರಿನಲ್ಲಿ ಜಾಗ ಇದ್ದರೆ ಅವರ ಅಭಿರುಚಿಗೆ ತಕ್ಕ ಹಾಗೆ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಅವರದ್ದೇ ಹೆಸರಿನಲ್ಲಿ ಜಾಗ ಇದ್ದರೆ, ಮನೆ ನಿರ್ಮಾಣ ಮಾಡಲು ಬ್ಯಾಂಕ್ ಇಂದ ಸಾಲದ ಸೌಲಭ್ಯ ಕೂಡ ಸಿಗುತ್ತದೆ..ಈ ಕಾರಣಕ್ಕೆ ಸರ್ಕಾರ ಈ ಹೊಸ ನಿರ್ಧಾರ ಮಾಡಿದೆ..

Vasathi Badavane Yojane 2023

ಈ ವಿಚಾರವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜನರಿಗೆ ನೀಡುವ ವಸತಿ ಯೋಜನೆಯ ಬಗ್ಗೆ ಸೆಪ್ಟೆಂಬರ್ 17ರಂದು ಟ್ವೀಟ್ ಮಾಡಿದ್ದು, ರಾಜ್ಯದ 7 ಜಿಲ್ಲೆಗಳ ಹೆಸರು ಸೂಚಿಸಿ, ಅಲ್ಲಿನ ಬಡವರ್ಗದ ಮತ್ತು ಮಧ್ಯಮವರ್ಗದ ಜನರ ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ನನಸು ಮಾಡುವುದಕ್ಕೆ ಸರ್ಕಾರ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಸುಸಜ್ಜಿತ ಬಡಾವಣೆಯಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಒದಗಿಸಲು ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ವಸತಿ ಬಡಾವಣೆ ಯೋಜನೆಗಳನ್ನು ನಿರ್ಮಿಸಲಾಗುತ್ತಿದೆ. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವತ್ತ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದೇವೆ.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಸ್ಟಿಸಲು ಹಾಗೂ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಕೃಷಿ ಸಂಸ್ಕರಣೆ ಉದ್ಯಮಗಳ ಸ್ಥಾಪನೆಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೆ ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ನೆರವಾಗಲಿದೆ..” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ..

ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಮೂಲಕ ತಿಳಿದುಬಂದಿರುವುದು ಏನು ಎಂದರೆ, ಶೀಘ್ರದಲ್ಲೇ ಈ ಯೋಜನೆಯ ಮಾರ್ಗಸೂಚಿ ಬಿಡುಗಡೆ ಮಾಡುವ ಬಗ್ಗೆ ಆದೇಶ ಹೊರಬರಲಿದ್ದು, ಅಗತ್ಯವಿರುವ ಜನರೆಲ್ಲರೂ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. SSLC ಪಾಸ್ ಆದವರಿಗೆ ಕೋರ್ಟ್ ನಲ್ಲಿ ಕೆಲಸಕ್ಕೆ ಅರ್ಜಿ ಕರೆಲಾಗಿದೆ, ಆಸಕ್ತರು ಅರ್ಜಿಹಾಕಿ ಸಂಬಳ 19 ಸಾವಿರ

By

Leave a Reply

Your email address will not be published. Required fields are marked *