Gruhalakshmi scheme beneficiary list: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯು ಮನೆಯನ್ನು ನಡೆಸಿಕೊಂಡು ಹೋಗುವ ಗೃಹಲಕ್ಷ್ಮಿಯರಿಗೆ ನೀಡುತ್ತಿರುವ ಸಹಾಯ ಆಗಿದೆ. ಈ ಯೋಜನೆ ಲಾಂಚ್ ಆಗಿ ಹಲವು ಮಹಿಳೆಯರಿಗೆ ಮೊದಲ ಕಂತಿನ ಹಣ ಖಾತೆಗೆ ಬಂದಿದ್ದು, ಇನ್ನು 6 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಖಾತೆಗೆ ಬಂದಿಲ್ಲ. ಇದರಿಂದ ಮಹಿಳೆಯರು ಆತಂಕದಲ್ಲಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಒಂದು ತಿಂಗಳ ಒಳಗೆ ಎಲ್ಲಾ ಮಹಿಳೆಯರಿಗೆ ಹಣ ಬರುತ್ತದೆ ಎಂದು ಸರ್ಕಾರ ಹೇಳಿದ್ದರು ಕೂಡ, ಆ ಮಾತನ್ನು ಉಳಿಸಿಕೊಂಡಿಲ್ಲ. ಈಗಾಗಲೇ ಮೊದಲ ಕಂತಿನ ಹಣ ಪಡೆದಿರುವ ಮಹಿಳೆಯರು ಎರಡನೇ ಕಂತು ಬರೋದು ಯಾವಾಗ ಎಂದು ಕಾಯುತ್ತಿದ್ದಾರೆ. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಎರಡನೇ ಕಂತಿನ ಹಣ ಆಕ್ಟೊಬರ್ 15ರಿಂದ ಬಿಡುಗಡೆ ಆಗಲಿದೆ. ಎಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿರುವುದು ಮತ್ತೊಂದು ವಿಶೇಷತೆ ಆಗಿದೆ.

Gruhalakshmi scheme beneficiary list

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ನು ಹಣ ಬಂದಿಲ್ಲ ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಸರಿಯಾಗಿ ಇದೆಯಾ, ಆಧಾರ್ ಸೀಡಿಂಗ್ ಆಗಿದ್ಯಾ ಎಂದು ಚೆಕ್ ಮಾಡಿಸಿಕೊಳ್ಳಿ, ekyc ಆಗಿದ್ಯಾ ಎನ್ನುವುದನ್ನು ಕೂಡ ಚೆಕ್ ಮಾಡಿಸಿ. ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯ ಸ್ಥಾನದಲ್ಲಿ ಮಹಿಳೆಯ ಹೆಸರು ಇದೆಯಾ ಎನ್ನುವುದನ್ನು ಕೂಡ ಪರಿಶೀಲಿಸಿ. ಒಂದು ವೇಳೆ ಇದರಲ್ಲಿ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಿಕೊಳ್ಳಿ.

ಇತ್ತ ಸರ್ಕಾರ ಕೂಡ ಇನ್ನು ಹಣ ಬಂದಿಲ್ಲದೆ ಇರುವವರಿಗೆ DBT ಮೂಲಕ ಖಂಡಿತವಾಗಿ ಎರಡು ಕಂತಿನ ಹಣ ಬರುವುದಾಗಿ ಭರವಸೆ ನೀಡಿದೆ. ಇದೀಗ ಸರ್ಕಾರವು ಆಕ್ಟೊಬರ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 2000 ಪಡೆಯುವ ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಫಲಾನುಭವಿಗಳ ಲಿಸ್ಟ್ ಪಡೆಯಲು ಮೊದಲು https://ahara.kar.nic.in/Home/EServices ಈ ಲಿಂಕ್ ಕ್ಲಿಕ್ ಮಾಡಿ. ಹೋಮ್ ಪೇಜ್ ನಲ್ಲಿ ಕಾಣುವ 3 ಲೈನ್ ಗಳ ಮೇಲೆ ಕ್ಲಿಕ್ ಮಾಡಿ, e Ration Card ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಬಳಿಕ Show Village list ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈ ಲಿಸ್ಟ್ ನಲ್ಲಿ ನಿಮ್ಮ ಊರು, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಯನ್ನು ಸೆಲೆಕ್ಟ್ ಮಾಡಿ, Go ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಲಿಸ್ಟ್ ನಲ್ಲಿ ಪ್ರತಿ ತಿಂಗಳು ಕೂಡ ಅರ್ಹತೆ ಇಲ್ಲದವರ ಹೆಸರನ್ನು ತೆಗೆದು ಹಾಕಲಾಗುತ್ತದೆ, ಹಾಗಾಗಿ ಮೇಲೆ ಕಾಣುವ ಅನರ್ಹರ ಲಿಸ್ಟ್ ಅನ್ನು ಕೂಡ ಚೆಕ್ ಮಾಡಿ.

Leave a Reply

Your email address will not be published. Required fields are marked *