Hainugarike loan in karnataka 2023: ರೈತರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ಅವರ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಹಾಗೆಯೇ ಅವರಿಗೆ ಕೃಷಿ ಕೆಲಸ ಮತ್ತು ಇನ್ನಿತರ ಕೆಲಸಗಳನ್ನು ಮಾಡಲು ಸರಿಯಾದ ಬಂಡವಾಳ ಕೂಡ ಸಿಗುವುದಿಲ್ಲ. ಹೀಗೆ ಕಷ್ಟದಲ್ಲಿರುವ ರೈತರಿಗೆ ಸಹಾಯ ಆಗಲಿ ಎಂದು ಸರ್ಕಾರವು ಹಲವು ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಂಥ ಯೋಜನೆಗಳಲ್ಲಿ ಒಂದು ಪಶುಸಂಗೋಪಣೆಗೆ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಯೋಜನೆ ಆಗಿದೆ. ಈ ಲೋನ್ ಪಡೆಯಲು ಅರ್ಹತೆ ಇರುವ ರೈತರು ಸುಲಭವಾಗಿ ಪಡೆಯಬಹುದು.

ಪಶುಸಂಗೋಪನೆ ಎಂದರೆ ಮೇಕೆ, ಹಸು ಸಾಕಾಣಿಕೆ, ಹಂದಿ, ಮೊಲ ಸಾಕಾಣಿಕೆ, ಹೈನುಗಾರಿಕೆ ಸೇರಿದಂತೆ ಇನ್ನಿತರ ಕೆಲಸಗಳು ಸೇರಿಕೊಳ್ಳುತ್ತದೆ. ಇದಕ್ಕಾಗಿ ಕಡಿಮೆ ಬಡ್ಡಿಯಲ್ಲಿ ರೈತರಿಗೆ ಸಾಲ ಸಿಗುತ್ತದೆ. ಇದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ರೈತರು ಪಶೋಸಂಗೋಪನೆ ಚಟುವಟಿಕೆ ನಡೆಸಲು ಆರ್ಥಿಕ ಸಹಾಯ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಪಶು ಸಂಗೋಪನೆ ಮಾಡುವವರಿಗೆ ಅದನ್ನು ಭರಿಸುವ ವೆಚ್ಚಕ್ಕೆ ಸಹಾಯ ಮಾಡಲು ಭಾರತ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಸಹಕಾರ ಸಂಸ್ಥೆಗಳಿಂದ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಸಹಾಯ ಮಾಡಲಿದೆ..

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೂ ಸಾಲ ಪಡೆಯಬಹುದು. ಯಾವುದೇ ಸೆಕ್ಯೂರಿಟಿ ಇಲ್ಲದೆ 10 ಲಕ್ಷದವರೆಗು ಸಾಲ ಪಡೆಯಬಹುದು. ಈ ಸಾಲ ಪಡೆಯಲು 2% ಬಡ್ಡಿ ಸಹಾಯಧನ ಸಿಗುತ್ತದೆ, ಹಾಗೆಯೇ ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡಿದರೆ, 3% ವರೆಗು ಬಡ್ಡಿ ಸಹಾಯಧನ ಸಿಗುತ್ತದೆ. ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೆ ರೈತರಿಗೆ ಸುಮಾರು 5% ಬಡ್ಡಿ ಡಿಸ್ಕೌಂಟ್ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

Hainugarike loan in karnataka 2023

ಈ ಯೋಜನೆಯಲ್ಲಿ ಯಾವ ಚಟುವಟಿಕೆಗೆ ಎಷ್ಟು ಸಾಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.
ಹೈನುಗಾರಿಕೆ :- ಮಿಶ್ರತಳಿ ಇರುವ ದನಗಳನ್ನು ನಿರ್ವಹಿಸಲು, 2 ದನಗಳಿಗೆ, ಒಂದು ಹಸುವಿಗೆ 18,000 ರೂಪಾಯಿಯ ಹಾಗೆ ಎರಡು ಹಸುವಿಗೆ 36,000 ಸಾಲ ಸಿಗುತ್ತದೆ. ಸುಧಾರಿತ ಎಮ್ಮೆಗಳಿಗೆ ಒಂದು ಎಮ್ಮೆಗೆ 21,000 ಹಾಗೆ ಎರಡು ಎಮ್ಮೆಗಳಿಗೆ 42,000 ಸಾಲ ಸೌಲಭ್ಯ ಸಿಗುತ್ತದೆ.

ಕುರಿ ಸಾಕಣಿಕೆ :- 11 ಕಟ್ಟಿ ಮೇಯಿಸುವಂಥ ಕುರಿಗಳ ನಿರ್ವಹಣೆಗೆ, 8 ತಿಂಗಳ ಸಮಯಕ್ಕೆ 29,950 ರೂಪಾಯಿ ಸಾಲ ಲಭ್ಯವಿರುತ್ತದೆ. ಹೊರಗಡೆ ಮೇಯಿಸುವ ಕುರಿಗಳಿಗೆ 14,700 ರೂಪಾಯಿ ಸಾಲ ಸಿಗುತ್ತದೆ. 21 ಕಟ್ಟಿ ಮೇಯಿಸುವ ಕುರಿಗಳ ನಿರ್ವಹಣೆ 8 ತಿಂಗಳ ಅವಧಿಗೆ ₹57,200 ರೂಪಾಯಿ ಆಗುತ್ತದೆ. ಹೊರಗಡೆ ಮೇಯಿಸುವ ಕುರಿಗಳಿಗೆ 28,200 ರೂಪಾಯಿ ಲೋನ್ ಸಿಗುತ್ತದೆ. 10 ಕುರಿಮರಿಗಳನ್ನು ಸಾಕಿ, ಬೆಳವಣಿಗೆ ತರುವುದಕ್ಕೆ 13,120 ರೂಪಾಯಿ, 20 ಕುರಿಗಳಿಗೆ 26,200 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ.

ಮೇಕೆ ಸಾಕಾಣಿಕೆ :- 11 ಮೇಕಗಳನ್ನು ನಿರ್ವಹಿಸಲು 8 ತಿಂಗಳ ಅವಧಿಗೆ 29,950 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೇಯಿಸುವ ಮೇಕೆಗಳಿಗೆ 14,700 ರೂಪಾಯಿ ಸಾಲ ಸಿಗುತ್ತದೆ.21 ಮೇಕೆಗಳ ನಿರ್ವಹಣೆಗೆ 8 ತಿಂಗಳ ಅವಧಿಗೆ 57,200 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೇಯಿಸುವ ಮೇಕೆಗಳಿಗೆ 28,200 ರೂಪಾಯಿ ಸಾಲ ಸಿಗುತ್ತದೆ.

ಹಂದಿ ಸಾಕಾಣಿಕೆ :- 11 ಹಂದಿಗಳ ನಿರ್ವಹಣೆಗೆ 8 ತಿಂಗಳ ಸಮಯಕ್ಕೆ 60,000 ಸಾವಿರ ಸಾಲ ಸಿಗುತ್ತದೆ. ಕೋಳಿ ಸಾಕಾಣಿಕೆ :- ಮಾಂಸದ ಉದ್ದೇಶಕ್ಕೆ ಸಾಕುವ ಕೋಳಿಗಳಿಗೆ 80,000 ವರೆಗು ಸಾಲ ಸಿಗುತ್ತದೆ. ಒಂದು ಕೋಳಿಗೆ 80 ರೂಪಾಯಿ ಎಂದು ಲೆಕ್ಕ ಹಾಕಿ, 1000 ಕೋಳಿಗೆ 80,000 ಸಾಲ ನೀಡಲಾಗುತ್ತದೆ. ಮೊಟ್ಟೆ ಕೋಳಿಯ ನಿರ್ವಹಣೆಗೆ ಒಂದು ಕೋಳಿಗೆ 180 ರೂಪಾಯಿಯ ಹಾಗೆ 1000 ಕೋಳಿಗಳಿಗೆ 1,80,000 ರೂಪಾಯಿ ಸಾಲ ಸಿಗುತ್ತದೆ.

ಮೊಲ ಸಾಕಾಣಿಕೆ :- ಮೂಲಗಳ ಸಾಕಾಣಿಕೆಗೆ ಸುಮಾರು 60 ಮೊಲಕ್ಕೆ 50,000 ವರೆಗು ಸಾಲ ಸಿಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ 2024ರ ಮಾರ್ಚ್ 31ರವರೆಗು ಲಭ್ಯವಿರಲಿದ್ದು, ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, *ಫಿಲ್ ಮಾಡಿರುವ ಅಪ್ಲಿಕೇಶನ್ *ಬ್ಯಾಂಕ್ ಅಕೌಂಟ್ ಡೀಟೇಲ್ಸ್ *RTC *ಆಧಾರ್ ಕಾರ್ಡ್ *ಪಾಸ್ ಪೋರ್ಟ್ ಸೈಜ್ ಫೋಟೋ. ಹೆಚ್ಚಿನ ಮಾಹಿತಿ ಪಡೆಯಲು ಹೆಲ್ಪ್ ಲೈನ್ ನಂಬರ್ ಗೆ ಕಾಲ್ ಮಾಡಬಹುದು, 8277 100 200.

By

Leave a Reply

Your email address will not be published. Required fields are marked *