ಹಿಂದೂ ಧರ್ಮದಲ್ಲಿ ತ್ರಿಮೂರ್ತಿ ದೇವರುಗಳಲ್ಲಿ ಒಬ್ಬನು ಎಂದು ಕರೆಯಲಾಗುವ ಭಗವಾನ್‌ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬವಾಗಿದೆ ಮನೆಯಲ್ಲಿನ ದಾರಿದ್ರ್ಯ ಕಿರಿಕಿರಿ ಅಸಮಾಧಾನವನ್ನು ತೊಲಗಿಸಿ ತಮ್ಮ ಕುಟುಂಬದ ಸುಖ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಆಕೆಯನ್ನು ಒಲಿಸಿಕೊಳ್ಳಲು ಮಹಿಳೆಯರು ಈ ವೃತವನ್ನು ಕೈಗೊಳ್ಳುತ್ತಾರೆ

ಶ್ರಾವಣ ಶುಕ್ಲ ಪಕ್ಷದ ಆರಂಭದಲ್ಲಿ ಬೀಳುವ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಅಥವಾ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ ಲಕ್ಷ್ಮೀ ಅಲಂಕಾರಪ್ರಿಯೆ ಹೀಗಾಗಿ ಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸುವುದು ಈ ಹಬ್ಬದ ಒಂದು ವೈಶಿಷ್ಟ್ಯವೆಂದೇ ಹೇಳಬಹುದು ಕಳಸಕ್ಕೆ ಸೀರೆ ಉಡಿಸಿ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡುವುದರೊಂದಿಗೆ ಸಾಂಪ್ರದಾಯಿಕ ರಂಗೋಲಿ ಹಾಕಿ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ ನಾವು ಈ ಲೇಖನದ ಮೂಲಕ ವರಮಹಾಲಕ್ಷ್ಮಿ ಹಬ್ಬದ ಐದು ನೈವೇದ್ಯದ ಬಗ್ಗೆ ತಿಳಿದುಕೊಳ್ಳೋಣ.

ನಾವು ಎಲ್ಲ ಹಬ್ಬಗಳಲ್ಲಿಯು ಸಹ ವಿಶೇಷವಾದ ಸಿಹಿ ತಿಂಡಿ ಗಳನ್ನು ನೈವೇದ್ಯ ಮಾಡಿ ದೇವರ ಮುಂದಿಟ್ಟು ಸಂಕಲ್ಪವನ್ನು ಮಾಡುತ್ತೇವೆ ವರಮಹಾಲಕ್ಷ್ಮಿ ಹಬ್ಬಕ್ಕೆ ಐದು ತರದ ನೈವೇದ್ಯ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ ಅದಾವುದೆಂದರೆ ಮೊಸರನ್ನ ಹೀಗೆ ನೈವೇದ್ಯ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮೊಸರನ್ನ ಮಾಡಲು ಶುದ್ಧ ಮೊಸರನ್ನು ತೆಗೆದು ಕೊಳ್ಳಬೇಕು ಹಾಗೂ ಉಪ್ಪನ್ನು ಹಾಕಬಾರದು ಮೊಸರನ್ನ ಲಕ್ಷ್ಮಿ ದೇವಿಗೆ ನೈವೇದ್ಯ ಮಾಡಬೇಕು ನಂತರದಲ್ಲಿ ಪಾಯಸಾನ್ನವನ್ನು ವರಮಹಾಲಕ್ಷ್ಮಿ ಹಬ್ಬದ ನೈವೆದ್ಯವಾಗಿ ಮಾಡಬೇಕು ಹಾಗೂ ಈ ಪಾಯಸವನ್ನು ಮಾಡುವಾಗ ಅಕ್ಕಿಯನ್ನು ನೀರಿನಿಂದ ಬೇಯಿಸಬಾರದು ಅದರ ಬದಲಾಗಿ ಹಾಲಿನಿಂದ ಸಿದ್ದ ಮಾಡಬೇಕು ಹೀಗೆ ವರಮಹಾಲಕ್ಷ್ಮಿಹಬ್ಬಕ್ಕಾಗಿ ಪಾಯಾಸನ್ನ ವನ್ನು ಮಾಡುವುದರಿಂದ ಸಕಲ ಸೌಕರ್ಯವನ್ನು ಒದಗಿಸುತ್ತಾಳೆ

ಪುಳಿಯೋಗರೆ ಯನ್ನ ಲಕ್ಷ್ಮಿ ದೇವಿಗೆ ನೈವೇದ್ಯ ಮಾಡುದರಿಂದ ಗಂಡ ಹೆಂಡತಿಯ ನಡುವಿನ ಜಗಳ ಸಮಸ್ಯೆಗಳು ದೂರವಾಗುತ್ತದೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಸಂಸ್ಕೃತದಲ್ಲಿ ಅರಿದ್ರಾನ್ನ ಎಂದು ಕರೆಯುತ್ತಿದ್ದರು ಯಾಕೆ ಅಂದ್ರೆ ಅರಿಶಿನದಿಂದ ಮಾಡಿರುವ ಅನ್ನವಾಗಿದೆ ಹಾಗೆಯೇ ಕಾರಾ ಪೊಂಗಲ್ ಅನ್ನು ನೈವೇದ್ಯ ಮಾಡುವುದರಿಂದ ಕುಟುಂಬ ವೃದ್ಧಿಯಾಗುತ್ತದೆ ಹಾಗೂ ವಂಶಾಭವೃದ್ಧಿ ಯಾಗುತ್ತದೆ ಹಾಗೂ ಕೊನೆಯದಾಗಿ ಬೆಲ್ಲದನ್ನ ಇದನ್ನು ಇಟ್ಟು ಪ್ರಾಥನೆ ಮಾಡಿದರೆ ಆರೋಗ್ಯ ವೃದ್ದಿಯಾಗುತ್ತದೆ ದೀರ್ಘ ಕಾಲದ ಅನಾರೋಗ್ಯದ ಭಾದೆ ಗಳು ವಾಸಿಯಾಗುತ್ತದೆ ಹಾಗೂ ವರ ಲಕ್ಷ್ಮಿಯ ಅನುಗ್ರಹ ವೃದ್ಧಿ ಯಾಗುತ್ತದೆ ಮತ್ತು ಇವು ಐದರಲ್ಲಿ ಮೂರನ್ನಾದರು ನೈವೇದ್ಯ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಹೀಗೆಯೇ ಮಹಿಳೆಯರು ಸೌಭಾಗ್ಯ ವೃದ್ದಿಯಾಗಲು ದೇವರಿಗೆ ನೆನೆಸಿದ ಕಡೆಲೆಯನ್ನು ನೈವೇದ್ಯಕ್ಕೆ ಇಡಬೇಕು

ಹಾಗೂ ಲಕ್ಷ್ಮಿಗೆ ಇಷ್ಟವಾದ ದಾಳಿಂಬೆ ಹಣ್ಣನ್ನು ನೈವೇದ್ಯಕ್ಕೆ ಇಡಬೇಕು ಹಾಗೂ ಕೆಂಪು ಮತ್ತು ಬಿಳಿ ಬಣ್ಣದ ದಾಸವಾಳವನ್ನ ಇಟ್ಟು ಲಕ್ಷ್ಮಿಯನ್ನು ಅಲಂಕರಿಸಬೇಕು ಆದರೆ ನೀಲಿ ಬಣ್ಣದ ಫಲ ಪುಷ್ಪವನ್ನು ಅರ್ಪಿಸಬಾರದು ಕೆಂಪು ಬಿಳಿ ಹಳದಿ ಬಣ್ಣದ ಫಲ ಪುಷ್ಪವನ್ನು ಅರ್ಪಿಸಿದರೆ ಒಳ್ಳೆಯ ಫಲ ಸಿಗುತ್ತದೆ ಇದು ಲಕ್ಷ್ಮಿ ದೇವಿಗೆ ಅರ್ಪಿತವಾದ ಹಬ್ಬವಾಗಿದೆ ಈ ದಿನ ಸಂಪತ್ತು ಮತ್ತು ಸಮೃದ್ಧಿಯ ದೇವಿಯನ್ನು ಮೆಚ್ಚಿಸಲು ವಿಶೇಷ ಲಕ್ಷ್ಮಿ ಪೂಜೆಯನ್ನು ನಡೆಸಲಾಗುತ್ತದೆ ಲಕ್ಷ್ಮಿ ದೇವಿಯ ವರಲಕ್ಷ್ಮಿ ರೂಪವು ವರಗಳನ್ನು ನೀಡುತ್ತದೆ ಮತ್ತು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ ಆದ್ದರಿಂದ ದೇವಿಯ ಈ ರೂಪವನ್ನು ವರಲಕ್ಷ್ಮಿ ಎಂದು ಕರೆಯಲಾಗುತ್ತದೆ

ಅಂದರೆ ವರಗಳನ್ನು ನೀಡುವ ಲಕ್ಷ್ಮಿ ದೇವಿ ಎಂದರ್ಥ ಕುಟುಂಬಕ್ಕೆ ಸಮೃದ್ಧಿ ಮತ್ತು ಸಂತೋಷವನ್ನು ಹುಡುಕಲು ಪರಮೇಶ್ವರ ದೇವರು ತನ್ನ ಪತ್ನಿ ಪಾರ್ವತಿಯಿಂದ ಮಾಡಿಸಲ್ಪಡುವ ಪೂಜೆಯಾಗಿದೆ ಪಾರ್ವತಿ ದೇವಿಯು ತನ್ನ ಪ್ರೀತಿಯ ಸಂಗಾತಿ ಮತ್ತು ಆಕೆಯ ಕುಟುಂಬದ ಏಳಿಗೆ ಮತ್ತು ಸಂತೋಷಕ್ಕಾಗಿ ಉಪವಾಸ ಆಚರಿಸಿದಳು ಎಂದು ನಂಬಲಾಗಿದೆ ಮತ್ತು ಅಂದಿನಿಂದ ದಕ್ಷಿಣ ಭಾರತದ ಉದ್ದಗಲಕ್ಕೂ ಮಹಿಳೆಯರು ಶ್ರಾವಣದ ಶುಕ್ಲ ಪಕ್ಷದಲ್ಲಿ ವರಲಕ್ಷ್ಮಿ ವ್ರತ ಅಥವಾ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಜನಪ್ರಿಯ ಸಂಪ್ರದಾಯವಾಗಿದೆ ಅಷ್ಟು ಮಾತ್ರವಲ್ಲದೆ ಈ ವ್ರತವನ್ನು ಸಂತಾನ ಭಾಗ್ಯಕ್ಕಾಗಿ ಕೂಡ ಆಚರಿಸುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *