ವನವಾಸದ ಸಮಯದಲ್ಲಿ ಊರ್ಮಿಳೆ ಮಾಡಿದ ತ್ಯಾಗದಿಂದ ಲಕ್ಷಣನಿಗೆ ಹೇಗೆ ಸಹಾಯವಾಯಿತು? ಓದಿ

0 1

ರಾಮಾಯಣ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಲಕ್ಷ್ಮಣನ ಹೆಂಡತಿ ಊರ್ಮಿಳೆಯ ಬಗ್ಗೆ, ಅವಳ ತ್ಯಾಗದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ವನವಾಸದ ಸಮಯದಲ್ಲಿ ಊರ್ಮಿಳೆಯು ತ್ಯಾಗ ಮಾಡಿದ್ದರಿಂದ ಲಕ್ಷ್ಮಣನಿಗೆ ಸಹಾಯವಾಯಿತು ಹಾಗಾದರೆ ಊರ್ಮಿಳೆ ಮಾಡಿದ ತ್ಯಾಗ ಏನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಮಾಯಣದಲ್ಲಿ ಲಕ್ಷ್ಮಣ ರಾಮ ಮತ್ತು ಅತ್ತಿಗೆ ಸೀತೆಯ ಜೊತೆ ವನವಾಸಕ್ಕೆ ಹೋಗುತ್ತಾನೆ. ಊರ್ಮಿಳೆ ಜನಕ ರಾಜನ ಎರಡನೇ ಮಗಳು ಸೀತೆಯ ತಂಗಿ. ಸೀತೆ ಜನಕ ರಾಜನ ಸಾಕು ಮಗಳು. ಸೀತೆ ಮತ್ತು ರಾಮನ ಮದುವೆಯ ಸಮಯದಲ್ಲಿ ಊರ್ಮಿಳೆ ರಾಮನ ತಮ್ಮನಾದ ಲಕ್ಷ್ಮಣನಿಗೆ ಮನಸೋಲುತ್ತಾಳೆ. ಸೀತೆ ರಾಮನ ಮದುವೆಯಾದ ದಿನವೇ ಲಕ್ಷ್ಮಣ ಊರ್ಮಿಳೆಯ ಮದುವೆ ಆಗುತ್ತದೆ.

ರಾಮ, ಸೀತೆ, ಲಕ್ಷ್ಮಣ ವನವಾಸಕ್ಕೆ ಹೊರಡಲು ಸಿದ್ಧರಾದಾಗ ಊರ್ಮಿಳೆಯು ಅವರ ಜೊತೆ ಹೊರಡಲು ಸಿದ್ಧಳಾದಳು ಆದರೆ ಲಕ್ಷ್ಮಣ ನಾನು ಅಣ್ಣ ಅತ್ತಿಗೆಯ ಸೇವೆ ಮಾಡುತ್ತೇನೆ ನಿನ್ನ ರಕ್ಷಣೆ, ನಿನ್ನ ನೋಡಿಕೊಳ್ಳಲು ನನಗೆ ಸಮಯ ಸಿಗುವುದಿಲ್ಲ ಆದ್ದರಿಂದ ನೀನು ಅಯೋಧ್ಯೆಯಲ್ಲಿ ಉಳಿದಿಕೊ ಎಂದು ಬೇಡಿಕೊಳ್ಳುತ್ತಾನೆ. ಊರ್ಮಿಳೆ ಗಂಡನ ಮಾತನ್ನು ಪಾಲಿಸಲು ಒಪ್ಪಿಕೊಳ್ಳುತ್ತಾಳೆ. ವನವಾಸದ ಮೊದಲ ದಿನವೇ ರಾಮ ಸೀತೆ ನಿದ್ರೆ ಮಾಡುತ್ತಾರೆ ಆಗ ಲಕ್ಷ್ಮಣ ಅವರ ರಕ್ಷಣೆಗೆ ಇಡೀ ರಾತ್ರಿ ನಿದ್ರೆ ಮಾಡುವುದಿಲ್ಲ.

ಲಕ್ಷ್ಮಣನು ತನ್ನ ಅಣ್ಣ ಅತ್ತಿಗೆಯ ರಕ್ಷಣೆ ಮಾಡಲು ತಾನು ನಿದ್ರೆ ಮಾಡಬಾರದು ಎಂದು ನಿದ್ರಾದೇವಿಯಲ್ಲಿ ವರ ಕೇಳುತ್ತಾನೆ ಅದಕ್ಕೆ ನಿದ್ರಾ ದೇವಿ ಒಪ್ಪುತ್ತಾಳೆ ಆದರೆ ಇದು ಪ್ರಕೃತಿಗೆ ವಿರುದ್ಧವಾಗಿದ್ದರಿಂದ ಲಕ್ಷ್ಮಣನ ನಿದ್ರೆಯನ್ನು ಯಾರಾದರೂ ತೆಗೆದುಕೊಳ್ಳಬೇಕಾಗುತ್ತದೆ. ಆಗ ಲಕ್ಷ್ಮಣ ನಿದ್ರಾ ದೇವಿಯಲ್ಲಿ ವರ ಪಡೆದು ತನ್ನ ನಿದ್ರೆಯ ಪಾಲನ್ನು ಊರ್ಮಿಳೆ ತೆಗೆದುಕೊಳ್ಳುವಂತೆ ಒಪ್ಪಿಸುತ್ತಾನೆ ಊರ್ಮಿಳೆಯು ಒಪ್ಪುತ್ತಾಳೆ ಇದರಿಂದ ಲಕ್ಷ್ಮಣನು ಯಾವುದೇ ಒತ್ತಡವಿಲ್ಲದೆ ಹಗಲು, ಇರುಳು ಅಣ್ಣ ಅತ್ತಿಗೆಯ ರಕ್ಷಣೆ ಮಾಡುತ್ತಾನೆ.

ಊರ್ಮಿಳೆ ಅಯೋಧ್ಯೆಯಲ್ಲಿ ಹಗಲು ರಾತ್ರಿ 14 ವರ್ಷಗಳ ಕಾಲ ನಿದ್ರೆಯಲ್ಲಿ ಕಾಲ ಕಳೆಯುತ್ತಾಳೆ. 14 ವರ್ಷ ಮುಗಿಯುತ್ತಿದ್ದಂತೆ ಲಕ್ಷ್ಮಣ ನಿದ್ರಾ ದೇವಿಯಲ್ಲಿ ತನಗೆ ಕೊಟ್ಟ ವರವನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ ಆಗ ಊರ್ಮಿಳೆ ಎಚ್ಚರಗೊಳ್ಳುತ್ತಾಳೆ. ರಾಮಾಯಣದಲ್ಲಿ ಊರ್ಮಿಳೆಯು ಮುಖ್ಯವಾಗಿದ್ದಾಳೆ, ಗಂಡನಿಗಾಗಿ ತ್ಯಾಗ ಮಾಡಿದಳು. ಅವಳು ತನ್ನ ಪರಿವಾರವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave A Reply

Your email address will not be published.