Ultimate magazine theme for WordPress.

ವೈಕುಂಠ ಏಕಾದಶಿಯಂದು ಈ ಕೆಲಸ ಮಾಡಿದರೆ ಶ್ರೇಷ್ಠ ಫಲ ಪಾಪ್ತಿಯಾಗುವುದು

0 0

ಹಿಂದೂ ಸಂಪ್ರದಾಯದಲ್ಲಿ ವೈಕುಂಠ ಏಕಾದಶಿಗೆ ತುಂಬಾ ಪ್ರಾಮುಖ್ಯತೆ ಇದೆ ಯಾಕಂದ್ರೆ ವೈಕುಂಠ ಏಕಾದಶಿಯ ಈ ದಿನ ಶ್ರೀನಿವಾಸನ ವೈಕುಂತದ ಬಾಗಿಲು ಸದಾ ತೆರೆದಿರುತ್ತದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ ಹಾಗೆಯೇ ವೈಕುಂಠ ಏಕಾದಶಿಯ ದಿನದಂದು ಮರಣ ಹೊಂದಿದವರು ನೇರವಾಗಿ ಶ್ರೀನಿವಾಸನ ಪಾದಕ್ಕೆ ಅಂದರೆ ವೈಕುಂಠ ಕ್ಕೆ ಸೇರಿಕೊಳ್ಳುತ್ತಾರೆಂಬ ನಂಬಿಕೆಯು ಇದೆ ಏಕಾದಶಿಯಂದು ಉಪವಾಸ ವ್ರತ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಂತಹ ರೂಡಿ ಹೀಗೆ ವೈಕುಂಠ ಏಕಾದಶಿಯ ದಿನದಂದು ಶ್ರದ್ಧಾ ಭಕ್ತಿಯಿಂದ ಬಹಳ ನಿಷ್ಠೆ ಇಂದ ಉಪವಾಸ ವ್ರತ ಮಾಡುವುದು ಅಶ್ವಮೇಧಯಾಗಕ್ಕೆ ಸಮ ಎಂದು ನಮ್ಮ ಹಿಂದೂ ಧರ್ಮ ಶಾಸ್ತ್ರಗಳು ಸಾರಿ ಹೇಳುತ್ತವೆ ಮಾನವನು ತನ್ನ ಜ್ಞಾನೇಂದ್ರಿಯಗಳಿಂದ ಮತ್ತು ತನ್ನ ಕರ್ಮೇಂದ್ರಿಯಗಳಿಂದ ಮಾಡಿರಬಹುದಾದ ಪಾಪ ಕರ್ಮಗಳನ್ನು ಈ ಏಕಾದಶಿ ವ್ರತ ಕಳೆಯಬಲ್ಲದು ಎಂಬುದನ್ನೂ ನಮ್ಮ ದರ್ಮ ಶಾಸ್ತ್ರ ಒಪ್ಪುತ್ತದೆ ಆದ್ಧರಿಂದ ಉತ್ತಮ ಫಲಾಪೇಕ್ಷಿಗಳು ಏಕಾದಶಿಯ ದಿನದಂದು ಉಪವಾಸ ವ್ರತ ಮಾಡುವುದು ತಮಗೆ ಒಳ್ಳೆಯ ಫಲಗಳನ್ನು ನೀಡುವುದರಲ್ಲಿ ಸಂಶಯವಿಲ್ಲ.

ಈ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಥವಾ ಮೋಕ್ಷ ಏಕಾದಶಿ ಅಂತಲೂ ಕರೆಯಲಾಗುತ್ತದೆ ಹೀಗೆ ಆಚರಿಸಲ್ಪಡುವ ವಿಷ್ಣುವಿಗೆ ಪ್ರಿಯವಾದ ವೈಕುಂಠ ಏಕಾದಶಿಯ ದಿನದಂದು ಅವಶ್ಯಕವಾಗಿ ಮಾಡಬೇಕಾದ ಮತ್ತು ಮಾಡಲೇಬಾರದ ಕೆಲವು ಕ್ರಮಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ. ಈ ದಿನ ಬೆಳಿಗ್ಗೆ ಪ್ರಾತಃಕಾಲದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿ ಸ್ನಾನ ಮಾಡಿ ಮನೆದೇವರಿಗೆ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಿ ಹಾಗೂ ವಿಷ್ಣು ದೇವರಿಗೆ ತುಳಸಿಯನ್ನು ಸಮರ್ಪಣೆ ಮಾಡಿ ಪೂಜೆ ಸಲ್ಲಿಸುವುದರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ ಹಾಗೂ ಈ ದಿನದಲ್ಲಿ ಮನೆಯಲ್ಲಿ ಘಂಟಾನಾದ ಮಾಡುವುದು ಮನೆಗೆ ಯಶಸ್ಸನ್ನು ತಂದುಕೊಡುತ್ತದೆ ಮತ್ತು ಈ ದಿನ ವೈಕುಂಠ ದ್ವಾರದ ಮೂಲಕ ಮಹಾವಿಷ್ಣುವನ್ನು ದರ್ಶನ ಮಾಡಬೇಕು ಮತ್ತು ಈ ಎಲ್ಲ ಕ್ರಮಗಳನ್ನು ನೀವು ಉಪವಾಸವಿದ್ದು ಆಚರಿಸಬೇಕು ಎಂದು ಧರ್ಮ ಶಾಸ್ತ್ರ ಹೇಳುತ್ತದೆ ಮತ್ತು ಈ ದಿನ ವಿಷ್ಣುವಿಗೆ ಪ್ರಿಯವಾದ ಶ್ರೀ ವಿಷ್ಣು ಸಹಸ್ರನಾಮಾವಳಿಯ ಪಠಣೆ ಮಾಡುವುದು ಹಾಗೂ ವಿಷ್ಣು ನಾಮ ಸಂಕೀರ್ತನೆಗಳನ್ನು ಕೇಳುವುದು ಮತ್ತು ಹಾಡುವುದು ಬಹಳ ಶುಭಫಲಗಳನ್ನು ನೀಡುತ್ತದೆ

ಈ ದಿನ ನೀವು ಮನೆಯಲ್ಲಿ ಮಾಡುವಂತಹ ಪದಾರ್ಥಗಳಿಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಯನ್ನು ಉಪಯೋಗಿಸುವಂತಿಲ್ಲ ಹಾಗೆಯೇ ಕ್ಯಾರೆಟ್ ಬೇಟ್ರೋಟ್ ಗಳನ್ನು ಬಳಸುವುದು ಈ ದಿನ ನಿಷಿದ್ಧವಾಗಿದೆ ಹಾಗೂ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವಿಸುವುದು ಶುಭವಲ್ಲ ಸಬ್ಬಕ್ಕಿಯಿಂದ ತವ ಅವಲಕ್ಕಿಯಿಂದ ಮಾಡಿದ ಸಿಹಿ ತಿನಿಸುಗಳನ್ನು ಮಾತ್ರ ಸೇವಿಸುವುದು ಕ್ರಮವಾಗಿದೆ ಅಲ್ಲದೆ ಈ ದಿನದಂದು ಮಾಂಸಾಹಾರವನ್ನು ಸೇವನೆ ಮಾಡುವುದು ಮತ್ತು ಮಧ್ಯಪಾನ ಮಾಡುವುದು ನಿಷಿದ್ಧವಾಗಿದೆ ಹಾಗಾಗಿ ಈ ಕಾರ್ಯಗಳನ್ನು ಮಾಡುವುದು ಪಾಪ ಕರ್ಮಗಳನ್ನು ಮಾಡಿದಂತೆಯೇ ಸರಿ

ಹಾಗಾಗಿ ಪರಮ ಪವಿತ್ರವಾದ ವೈಕುಂಠ ಏಕಾದಶಿಯ ಈ ದಿನದಂದು ನಾವು ಮೇಲೆ ಹೇಳಿರುವಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಮತ್ತು ಭಗವಂತನ ಮಹಾಕೃಪೆಗೆ ಪಾತ್ರರಾಗಿ ಎಂಬುದಷ್ಟೇ ನಮ್ಮ ಸಲಹೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇರಲಿ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ. ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂ ಪಿ ಶರ್ಮ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.